ನರೇಗಾ ಯೋಜನೆಯಡಿ ಭಾರೀ ಅಕ್ರಮ ಶಂಕೆ; 19 ಕೋಟಿ ರೂ. ಗೆ ದಾಖಲೆ ಕೇಳಿದ ಆಯುಕ್ತರು!

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ)ಯಡಿ ಕೆಲಸಗಾರರಿಗೆ ನೀಡಲು ಕಳೆದ ಕೆಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ)ಯಡಿ ಕೆಲಸಗಾರರಿಗೆ ನೀಡಲು ಕಳೆದ ಕೆಲ ತಿಂಗಳಿನಿಂದ ಕೇಂದ್ರ ಕಚೇರಿಯಿಂದ ಬಿಡುಗಡೆಯಾಗುತ್ತಿರುವ ವೇತನ ಫಲಾನುಭವಿಗಳಿಗೆ ತಲುಪುತ್ತಿಲ್ಲ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಎಂ ಕನಗವಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದು 2017-18ರಲ್ಲಿ ಬಿಡುಗಡೆಯಾದ ದಾಖಲೆಗಳಿಲ್ಲದ 19 ಕೋಟಿ ರೂಪಾಯಿಗೆ ವಿವರ ಒದಗಿಸಿ ಎಂದು ಕೇಳಿದ್ದಾರೆ.

ನರೇಗಾ ಯೋಜನೆಯಡಿ 2006ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಸೇರಿ ಗ್ರಾಮೀಣ ಭಾಗದಲ್ಲಿನ ನಿರುದ್ಯೋಗಿಗಳಿಗೆ ಜೀವನ ಮತ್ತು ಆಹಾರ ಭದ್ರತೆ ಒದಗಿಸಲು ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಕೂಲಿ ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುವುದನ್ನು ತಡೆಯುವುದು ಈ ಕಾಯ್ದೆಯ ಮುಖ್ಯ ಉದ್ದೇಶ. ಇದರಡಿ ಮೂರೂವರೆ ಲಕ್ಷಕ್ಕೂ ಅಧಿಕ ಕೂಲಿ ಕಾರ್ಮಿಕರು ಉದ್ಯೋಗ ಕಂಡುಕೊಂಡಿದ್ದಾರೆ. ವರ್ಷಕ್ಕೆ ಕನಿಷ್ಠ 100 ದಿನಗಳ ಕೆಲಸ ನೀಡಲಾಗುತ್ತದೆ.

2012ರಲ್ಲಿ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ನರೇಗಾ ಯೋಜನೆಯಡಿ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಹೇಳಿದ್ದರು. 600 ಕೋಟಿಗೂ ಅಧಿಕ ಹಣವನ್ನು ವಂಚಿಸಲಾಗಿದ್ದು 10 ಲಕ್ಷಕ್ಕೂ ಅಧಿಕ ಬೋಗಸ್ ಉದ್ಯೋಗ ಕಾರ್ಡುಗಳು ಪತ್ತೆಯಾಗಿದ್ದವು. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು ತನಿಖೆ ನಡೆಸಿದ ನಂತರ ನಿಖರ ಸಂಖ್ಯೆ ಪತ್ತೆಯಾಗಲಿದೆ ಎಂದು ಆಯುಕ್ತರು ಪತ್ರದಲ್ಲಿ ವಿವರಿಸಿದ್ದಾರೆ.

2017-18ರಲ್ಲಿ ಸುಮಾರು 596 ಕೇಸುಗಳು ನರೇಗಾ ಯೋಜನೆಯನ್ನು ಉಲ್ಲಂಘಿಸಿದಂತೆ ವಿವಿಧ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದಾಖಲಾಗಿವೆ. ಅಘೋಷಿತ 19 ಕೋಟಿ ರೂಪಾಯಿಗಳಿಗೆ ಲೆಕ್ಕ ನೀಡಿ ಎಂದು ಇಲಾಖೆಯ ಆಯುಕ್ತರು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com