ಗಣರಾಜ್ಯೋತ್ಸವಕ್ಕೆ ಲಾಲ್ ಬಾಗ್ ನಲ್ಲಿ ಫಲ ಪುಷ್ಪ ಪ್ರದರ್ಶನ; ತೀವ್ರ ಕಟ್ಟೆಚ್ಚರ

ಈ ವರ್ಷ ಗಣರಾಜ್ಯೋತ್ಸವ ದಿನ ಲಾಲ್ ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಮಹಾತ್ಮಾ ...
ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಗೌರವಾರ್ಥ ಈ ವರ್ಷದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ
ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಗೌರವಾರ್ಥ ಈ ವರ್ಷದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ

ಬೆಂಗಳೂರು: ಈ ವರ್ಷ ಗಣರಾಜ್ಯೋತ್ಸವ ದಿನ ಲಾಲ್ ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಮಹಾತ್ಮಾ ಗಾಂಧಿಯವರ ಗೌರವಾರ್ಥ ನಡೆಯಲಿದೆ.

ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಫಲಪುಷ್ಪ ಪ್ರದರ್ಶನವಿರಲಿದ್ದು ಇದಕ್ಕಾಗಿ ರಾಜ್ಯ ತೋಟಗಾರಿಕೆ ಇಲಾಖೆ 1.8 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.

ಗಣರಾಜ್ಯೋತ್ಸವ ದಿನ ಲಾಲ್ ಬಾಗ್ ಗೆ ಹೋಗುವವರು ನೀರಿನ ಬಾಟಲ್ ಅಥವಾ ತಿಂಡಿ ತಿನಿಸುಗಳನ್ನು ಒಯ್ಯುವಂತಿಲ್ಲ. ಸಾರ್ವಜನಿಕರು ಹೊರಗಿನಿಂದ ತಿನಿಸುಗಳನ್ನು ತಂದು ಕಸ ಕಡ್ಡಿ, ಪ್ಲಾಸ್ಟಿಕ್ ಗಳನ್ನು ತಿಂದು ಅಲ್ಲಲ್ಲಿ ಎಸೆದು ಹೋಗುತ್ತಾರೆ. ಇದರಿಂದ ತೀವ್ರ ಪರಿಸರ ಮಾಲಿನ್ಯವಾಗುತ್ತದೆ. ಹೀಗಾಗಿ ನಾವು ನಿಷೇಧ ಹೇರಿದ್ದೇವೆ ಎಂದು ತೋಟಗಾರಿಕಾ ಇಲಾಖೆ ಸಚಿವ ವೈ ಎಸ್ ಪಾಟೀಲ್ ತಿಳಿಸಿದರು.

ಲಾಲ್ ಬಾಗ್ ಆವರಣದಲ್ಲಿ ಸಾವಿರ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಲೋಹದ ಪತ್ತೆ ಯಂತ್ರವನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಲಭ್ಯವಾಗಲು 5 ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com