ಮನೆಯಲ್ಲೇ ಅತ್ಯಾಚಾರಕ್ಕೆ ಯತ್ನ, ಕಾಪಾಡಿ.. ಕಾಪಾಡಿ ಎನ್ನುತ್ತಲೇ ಸುತ್ತಿಗೆಯಿಂದ ಕಾಮುಕನಿಗೆ ಹೊಡೆದ ಧೈರ್ಯವಂತೆ!

ಮಧ್ಯರಾತ್ರಿ ದರೋಡೆಗೆ ಬಂದವನು ಮನೆಯಲ್ಲಿದ್ದ ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯಿಂದ ಸುತ್ತಿಗೆಯಲ್ಲಿ ಹೊಡೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Published: 21st January 2019 12:00 PM  |   Last Updated: 22nd January 2019 12:21 PM   |  A+A-


Brave techie in Bengaluru attacks man, foils bid to rape her

ಸಂಗ್ರಹ ಚಿತ್ರ

Posted By : SVN SVN
Source : Online Desk
ಬೆಂಗಳೂರು: ಮಧ್ಯರಾತ್ರಿ ದರೋಡೆಗೆ ಬಂದವನು ಮನೆಯಲ್ಲಿದ್ದ ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯಿಂದ ಸುತ್ತಿಗೆಯಲ್ಲಿ ಹೊಡೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹಳೇ ಏರ್ ಪೋರ್ಟ್ ರಸ್ತೆಯ ಚಿನ್ನಪ್ಪನ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ಮಹಿಳಾ ಟೆಕ್ಕಿ ಧೈರ್ಯವಾಗಿ ಕಾಮುಕ ದರೋಡೆಕೋರನನ್ನು ಎದುರಿಸಿ ಈಗ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ಮುಂಜಾನೆ ಸುಮಾರು 4 ಗಂಟೆ ಸುಮಾರಿನಲ್ಲಿ ಮಹಿಳಾ ಟೆಕ್ಕಿ ಮಲಗಿದ್ದಾಗ ಆಕೆಯ ಮನೆಯಲ್ಲಿ ಏನೋ ಶಬ್ದವಾಗಿದೆ. 

ಮನೆಯ 2ನೇ ಅಂತಸ್ತಿನಲ್ಲಿರುವ ಮಹಿಳಾ ಟೆಕ್ಕಿ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳ ಕೈಗೆ ಸಿಕ್ಕಿದ್ದನು ಬಾಚಿಕೊಳ್ಳುತ್ತಿದ್ದ. ಶಬ್ಧವಾದ ಕೂಡಲೇ ಎದ್ದ ಮಹಿಳಾ ಟೆಕ್ಕಿ ಕೂಡಲೇ ಮನೆಯ ಹಾಲ್ ಗೆ ಬಂದಿದ್ದಾರೆ. ಈ ವೇಳೆ ಆಕೆಯನ್ನು ಕಂಡ ಕಳ್ಳ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ತನ್ನ ಬಳಿ ಗನ್ ಇದ್ದು, ನಿನ್ನನ್ನು ಇಲ್ಲೇ ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಆತ ಮುಂದಾಗಿದ್ದು, ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ.

ಅಲ್ಲದೆ ಕಾಪಾಡಿ ಕಾಪಾಡಿ (Help... Help..) ಎಂದು ಕೂಗುತ್ತಲೇ ಆತನ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಟೇಬಲ್ ಮೇಲಿದ್ದ ಸುತ್ತಿಗೆಗೆ ಕೈ ಹಾಕಿದ್ದಾಳೆ. ಸುತ್ತಿಗೆ ಸಿಗುತ್ತಲೇ ಆತನನ್ನು ಮನಸೋ ಇಚ್ಚೆ ಥಳಿಸಿದ್ದಾಳೆ. ಈ ವೇಳೆ ಮಹಿಳೆಯ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಮನೆಯತ್ತ ಧಾವಿಸುತ್ತಲೇ ಕಾಲಿಗೆ ಬುದ್ಧಿ ಹೇಳಿದ ಕಾಮುಕ 2ನೇ ಅಂತಸ್ತಿನಿಂದಲೇ ಕೆಳಗೆ ಧುಮುಕಿ ಪರಾರಿಯಾಗಿದ್ದಾನೆ. 

ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮಹಿಳೆಯಿಂದ ಮಾಹಿತಿ ಪಡೆದಿದ್ದಾರೆ. ಮಹಿಳೆ ಉತ್ತರ ಭಾರತದವಳಾಗಿದ್ದು, ಇಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಎಂದೂ ಮಹಿಳೆ ದರೋಡೆಕೋರನನ್ನು ನೋಡಿಲ್ಲವಂತೆ. ಆತ ಸುಮಾರು 30 ರಿಂದ 35 ವರ್ಷದೊಳಗಿನವನಾಗಿದ್ದು, ಇಂಗ್ಲೀಷ್ ಮಾತನಾಡುತ್ತಿದ್ದನು ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ದರೋಡೆ ಕೋರನ ಬಂಧನಕ್ಕೆ ಬಲೆ ಬೀಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp