ರೈಲಿನಲ್ಲಿ ಮುಟ್ಟಾಗಿದ್ದ ಯುವತಿಗೆ ಮಾತ್ರೆ ಮತ್ತು ಸ್ಯಾನಿಟರಿ ಪ್ಯಾಡ್ ಕಳುಹಿಸಿಕೊಟ್ಟ ಸಚಿವ ಪಿಯೂಷ್ ಗೋಯೆಲ್

ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಪ್ರಯಾಣಿಕರಿಗೆ ಮಾಡಿದ ಸಹಾಯದಿಂದಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ....
ಪಿಯೂಷ್ ಗೋಯೆಲ್
ಪಿಯೂಷ್ ಗೋಯೆಲ್
ಬೆಂಗಳೂರು: ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಪ್ರಯಾಣಿಕರಿಗೆ ಮಾಡಿದ ಸಹಾಯದಿಂದಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು-ಬಳ್ಳಾರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಮುಟ್ಟಾಗಿ ಹೊಟ್ಟಿ ನೋವಿನಿಂದ ಬಳಲುತ್ತಿದ್ದು, ಆಕೆಗೆ ಸ್ಯಾನಿಟರಿ ಪ್ಯಾಡ್, ಹಾಗೂ ಹೊಟ್ಟೆ ನೋವಿನ ಮಾತ್ರ ಬೇಕಾಗಿತ್ತು, ಮುಂದಿನ ನಿಲ್ದಾಣ ಬರುವಷ್ಟರೊಳಗೆ ಹೊಟ್ಟೆ ನೋವಿನ ಮಾತ್ರೆ ಹಾಗೂ ಸ್ಯಾನಿಟರಿ ಒದಗಿಸಿಕೊಟ್ಟಿದ್ದಾರೆ.
ಯುವಿಸಿಇ ಕಾಲೇಜಿನಲ್ಲಿ  ಮೂರನೇ ವರ್ಷದ ಆರ್ಕಿಟೆಕ್ಚರ್  ನಲ್ಲಿ ವ್ಯಾಸಂಗ ಮಾಡುತ್ತಿರುವ  ಯುವತಿ, ತಿಂಗಳ ಮುಟ್ಟಿನ ಸಮಸ್ಯೆಗೆ ತಯಾರಾಗಿರಲಿಲ್ಲ, ರೈಲು ಹೊಸಪೇಟೆಗೆ ಬರುವಷ್ಟರೊಳಗೆ ಆಕೆ ಮುಟ್ಟಾಗಿ ಹೊಟ್ಟೆನೋವು ಅನುಭವಿಸಿದ್ದಳು,
ಕೂಡಲೇ ಆಕೆ  ಹೈದರಾಬಾದ್ ನಲ್ಲಿರುವ ತನ್ನ ಸ್ನೇಹಿತ ವಿಶಾಲ್ ಖಾನಾಪುರೆಗೆ ಈ ವಿಷಯ ತಿಳಿಸಿದಳು, ಆತ ತಕ್ಷಣವೇ ಈ ವಿಷಯವನ್ನು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಟ್ವೀಟ್ ಮಾಡಿದ್ದಾರೆ, ರೈಲು, ಬೋಗಿ ಸಂಖ್ಯೆ, ಹಾಗಗೂ ಸೀಟಿನ ಸಂಖ್ಯೆಯನ್ನು ಹಾಕಿದ್ದರು, ಜೊತೆಗೆ ಹೊಟ್ಟೆನೋವಿಗೆ ಬೇಕಾಗಿದ್ದ ಮೆಫ್ತಾಲ್ ಪಾಸ್ ಟ್ಯಾಬ್ಲೆಟ್ ನೀಡಬೇಕು ಎಂದು ಟ್ಯಾಗ್ ಮಾಡಿದ್ದರು.
ಕೂಡಲೇ  ಟ್ವೀಟ್ ಗಮನಿಸಿದ ರೈಲ್ವೆ ಸಚಿವ ಪಿಯೂಶ್ ಗೊಯೆಲ್, ಆಕೆಗೆ ಬೇಕಾಗಿರುವ ಎಲ್ಲಾವನ್ನು ಒದಗಿಸಿಕೊಟ್ಟಿದ್ದರು, ವಿಶಾಲ್ 11ಗಂಟೆ 3 ನಿಮಿಷಕ್ಕೆ ಟ್ವೀಟ್ ಮಾಡಿದ್ದರು, 11 ಗಂಟೆ 6 ನಿಮಿಷಕ್ಕೆ ಸರಿಯಾಗಿ ಆಕೆಗೆ ಬೇಕಾದ ಎಲ್ಲಾ ವಸ್ತುಗಳ ಬಗ್ಗೆ ಖಚಿತಪಡಿಸಿಕೊಂಡಿದ್ದರು. 
ರಾತ್ರಿ 2 ಗಂಟೆ ವೇಳೆಗೆ ರೈಲು ಅರಸೀಕೆರೆ ನಿಲ್ದಾಣಕ್ಕೆ ಬರುವ ವೇಳೆಗೆ  ಮೈಸೂರಿನಿಂಗ ಆಗಮಿಸಿದ್ದ ಭಾರತೀಯ ರೈಲ್ವೆ ಸಿಬ್ಬಂದಿ ಆಕೆಗೆ ಬೇಕಾಗಿದ್ದ ಎಲ್ಲಾ ವಸ್ತುಗಳನ್ನು ತಂದು ನೀಡಿದ್ದರು.
ಭಾರತೀಯ ರೈಲ್ವೆ ಇಲಾಖೆ ತಕ್ಷಣ ಮಾಡಿದ ಈ ವ್ಯವಸ್ಥೆಯನ್ನು ಪ್ರಶಂಸಿ ವಿಶಾಲ್ ಟ್ವೀಟ್ ಮಾಡಿದ್ದರು, 
ಆದರೆ ಕೆಲವರು ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಅನ್ನು ಸ್ಯಾನಿಟರಿ ನ್ಯಾಪ್ಕಿನ್  ಗಾಗಿ ಬಳಸಿಕೊಂಡಿದ್ದು ದುರಾದೃಷ್ಟ ಎಂದು ಟ್ವೀಟ್ ಮಾಡಿದ್ದರು. 
ಕಳೆದ ಫೆಬ್ರವರಿಯಲ್ಲಿ  ದೇಶದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು, ಆದರೆ ಅದು ಇನ್ನೂ ಸಾಧ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com