ಕಲಬುರಗಿ: ಗರ್ಭೀಣಿಯರಿಗೆ 24/7 ಉಚಿತ ಪ್ರಯಾಣ ಸೇವೆ ಒದಗಿಸುವ ಆಟೋ ಚಾಲಕ!

ಬಿಸಿಲನಾಡು ಖ್ಯಾತಿಯ ಕಲಬುರಗಿಯಲ್ಲಿ ಆಟೋ ಚಾಲಕರೊಬ್ಬರು ಗರ್ಭೀಣಿಯರಿಗಾಗಿ 24/7 ಉಚಿತ ಆಟೋ ಸೇವೆ ಒದಗಿಸುವ ಮೂಲಕ ತಾಯಿ ಮತ್ತು ಮಗು ಆರೋಗ್ಯಕ್ಕೆ ನೆರವಾಗುತ್ತಿದ್ದಾರೆ.
ಮಲ್ಲಿಕಾರ್ಜುನ್
ಮಲ್ಲಿಕಾರ್ಜುನ್
ಕಲಬುರಗಿ: ತಾಯಿ ಮತ್ತು ಮಗು ಆರೋಗ್ಯದ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ 108 ಅಂಬ್ಯುಲೆನ್ಸ್ ಸೇವೆ ಕೆಲ ಸಂದರ್ಭಗಳಲ್ಲಿ ಕೈ ಕೊಡುತ್ತದೆ.
ಸರಿಯಾದ ವೇಳೆಗೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಸೂಕ್ತ ವೇಳೆಯಲ್ಲಿ ಚಿಕಿತ್ಸೆ ದೊರೆಯದಂತಾಗಿ ಹಲವು ಮಂದಿ ಸಾವು- ಬದುಕಿನ ನಡುವೆ ಹೋರಾಟ ನಡೆಸಬೇಕಾದ ಸ್ಥಿತಿಯೂ ಕೆಲವು ಕಡೆಗಳಲ್ಲಿ ನಿರ್ಮಾಣವಾಗುತ್ತಿದೆ.
ಆದರೆ, ಬಿಸಿಲನಾಡು ಖ್ಯಾತಿಯ ಕಲಬುರಗಿಯಲ್ಲಿ ಆಟೋ ಚಾಲಕರೊಬ್ಬರು ಗರ್ಭೀಣಿಯರಿಗೆ 24/7 ಉಚಿತ ಆಟೋ ಸೇವೆ ಒದಗಿಸುವ ಮೂಲಕ ತಾಯಿ ಮತ್ತು ಮಗು ಆರೋಗ್ಯಕ್ಕೆ ನೆರವಾಗುತ್ತಿದ್ದಾರೆ.
ಐದು ವರ್ಷಗಳ ಹಿಂದೆ ಕಲಬುರಗಿಯಲ್ಲಿ ಅಂಬ್ಯುಲೆನ್ಸ್ ಇರಲಿಲ್ಲ. ಇಂತಹ ಸಂದರ್ಭದಲ್ಲಿ  ತನ್ನ  ಗರ್ಭೀಣಿ ಸಹೋದರಿ ಆಸ್ಪತ್ರೆಗೆ ತೆರಳಲು  ಅಂಬ್ಯುಲೆನ್ಸ್ ಇಲ್ಲದೆ  ಅನುಭವಿಸಿದ ಸ್ಥಿತಿ ಕಣ್ಣಲ್ಲೇ ಕಟ್ಟಿದ್ದು, ಯಾರಿಗೂ ಅಂತ ಪರಿಸ್ಥಿತಿ ಬಾರಬಾರದು ಎಂಬ ಉದ್ದೇಶದಿಂದ ಉಚಿತ ಆಟೋ ಸೇವೆ  ನೀಡುತ್ತಿರುವುದಾಗಿ ತಿಳಿಸಿದರು.
ಆಟೋ ಹಿಂದೆ ಏನನ್ನೂ ಬರೆದಿಲ್ಲ.ಸಾರ್ವಜನಿಕರು ಕರೆ ಮಾಡಿದ್ದರೆ ತಕ್ಷಣ ಅಲ್ಲಿಗೆ ಆಟೋ ಬರುತ್ತದೆ ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com