ಏಕೋಪಾದ್ಯಾಯ ಶಾಲೆಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ!

ಒಂದರಿಂದ ಅರವತ್ತು ಸಂಖ್ಯೆಯ ವಿದ್ಯಾರ್ಥಿಗಳಿರಬಹುದಾದ ಶಾಲೆಯಲ್ಲಿ ಕನಿಷ್ಟ ಇಬ್ಬರು ಶಿಕ್ಷಕರಿರಬೇಕು ಎನ್ನುವುದು ಶಿಕ್ಷಣ ಹಕ್ಕು ಕಾಯ್ದೆಯ(ಆರ್ಟಿಇ) ನಿಯಮ. ಆದರೆ......
ಏಕೋಪಾದ್ಯಾಯ ಶಾಲೆಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ!
ಏಕೋಪಾದ್ಯಾಯ ಶಾಲೆಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ!
ಬೆಂಗಳುರು: ಒಂದರಿಂದ ಅರವತ್ತು ಸಂಖ್ಯೆಯ ವಿದ್ಯಾರ್ಥಿಗಳಿರಬಹುದಾದ ಶಾಲೆಯಲ್ಲಿ ಕನಿಷ್ಟ ಇಬ್ಬರು ಶಿಕ್ಷಕರಿರಬೇಕು ಎನ್ನುವುದು ಶಿಕ್ಷಣ ಹಕ್ಕು ಕಾಯ್ದೆಯ(ಆರ್ಟಿಇ) ನಿಯಮ. ಆದರೆ ಸರ್ಕಾರಿ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ ಕನಿಷ್ಟ 4,767 ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ. ಅವರೇ ಶಾಲಾ ವ್ಯವಹಾರವನ್ನೆಲ್ಲಾ ನೋಡಿಕೊಳ್ಳುತ್ತಿದ್ದಾರೆ. ಅಂದಹಾಗೆ ದೇಶದಲ್ಲಿರುವ ಏಕೋಪಾದ್ಯಾಯ ಶಾಲೆಗಳ ಸಂಖ್ಯೆ ಆಧಾರದಲ್ಲಿ ತಯಾರಿಸಿದ ಪಟ್ಟಿಯಲ್ಲಿ ರಾಜ್ಯವು ಆರನೇ ಸ್ಥಾನದಲ್ಲಿದೆ.
ಇತ್ತೀಚೆಗೆ ಮುಕ್ತಾಯವಾದ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿದ ಮಾಹಿತಿಯು ಈ ಅಂಶವನ್ನು ಬಹಿರಂಗಪಡಿಸಿದೆ.ಇದರ ಆಧಾರದಲ್ಲಿ ಮಧ್ಯಪ್ರದೇಶದಲ್ಲಿ 18,307 ಶಾಲೆಗಳಲ್ಲಿ  ಒಬ್ಬರೇ ಶಿಕ್ಷಕರಿದ್ದಾರೆ.ರಾಜಸ್ಥಾನದಲ್ಲಿ 12,052, ಉತ್ತರ ಪ್ರದೇಶದ 8,092, ಜಾರ್ಖಂಡ್ ನಲ್ಲಿ  7,564, ಆಂಧ್ರಪ್ರದೇಶದಲ್ಲಿ 7,483 ಹಾಗೂ ಕರ್ನಾಟಕದಲ್ಲಿ 4,767  ಏಕೋಪಾದ್ಯಾಯ ಶಾಲೆಗಳಿವೆ. ಭಾರತದಾದ್ಯಂತ ಇಂತಹಾ  92,275 ಶಾಲೆಗಳಿವೆ.
ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದೇ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯೂ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"ವಿದ್ಯಾರ್ಥಿಗಳ ಸಂಖ್ಯೆ 1ರಿಂದ 60ರ ನಡುವೆ ಇದ್ದರೆ ಇಬ್ಬರು ಶಿಕ್ಷಕರು ಇರಬೇಕು ಎಂದು ಆರ್ಟಿಇ ಸ್ಪಷ್ಟವಾಗಿ ಹೇಳುತ್ತದೆ. ಈ ಏಕೋಪಾದ್ಯಾಯ ಶಾಲೆಗಳ ಕಾರಣದಿಂದಾಗಿ ಕರ್ನಾಟಕದ ಕೆಲವು ಶಾಲೆಗಳಲ್ಲಿ 1ನೇ ತರಗತಿ ವಿದ್ಯಾರ್ಥಿಯೂ ಸಹ  5ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಕುಳಿತಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ" ಶಿಕ್ಷಣ ಕ್ಷೇತ್ರದ ಪರಿಣಿತ ಡಾ. ವಿ.ಪಿ. ನಿರಂಜನಾರಾದ್ಯ ಹೇಳಿದರು.
ವಿದ್ಯಾರ್ಥಿ-ಶಿಕ್ಷಕ ಅನುಪಾತಕ್ಕೂ ಒಬ್ಬರೇ ಶಿಕ್ಷಕರಿರುವ ಶಾಲೆಗಳಿಗೂ ಏನೂ ಸಂಬಂಧವಿಲ್ಲ ಎನ್ನುವ ನಿರಂಜನಾರಾದ್ಯ  "ರಾಜ್ಯದ ಏಕೋಪಾದ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಲು ಶಿಕ್ಷಕರ ಕೊರತೆಯೇ ಪ್ರಮುಖ ಕಾರಣ. ಶಾಲೆಯು 150 ರಷ್ಟು ವಿದ್ಯಾರ್ಥಿಗಳನ್ನು ಹೊಂದಿದಾಗ ಮಾತ್ರ ವಿದ್ಯಾರ್ಥಿ-ಶಿಕ್ಷಕ ಅನುಪಾತ ನೆರವಿಗೆ ಬರಲಿದೆ.ಆದರೆ ಒಂದು ಶಾಲೆಗಳಲ್ಲಿ 10 ವಿದ್ಯಾರ್ಥಿಗಳಿದ್ದು ಅದರಲ್ಲಿ ಐವರು ಒಂದನೇ ತರಗತಿ, ಮತ್ತೆ ಐವರು ಬೇರೆ ಬೇರೆ ಮೇಲಿನ ತರಗತಿಗಳಲ್ಲಿ ಕಲಿಯುತ್ತಿದ್ದರೆ ಆಗ ಅಲ್ಲಿಗೆ ಕನಿಷ್ಟ ಇಬ್ಬರು ಶಿಕ್ಷಕರು ಬೇಕೇ ಬೇಕು. ಶಿಕ್ಷಕರನ್ನು ನೇಮಕ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರಲಿದೆ." ಎಂದರು.
ಆದಾಗ್ಯೂ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ, ಇವುಗಳು 10 ಕ್ಕಿಂತ ಕಡಿಮೆ ಸಂಖ್ಯಯ ವಿದ್ಯಾರ್ಥಿಗಳಿರುವ ಶಾಲೆಗಳು.ರಾಜ್ಯ ಯೋಜನಾ ನಿರ್ದೇಶಕ ಎಂ.ಆರ್.ರುಜು ಹೇಳಿದಂತೆ "ನಾವು ಹತ್ತು ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ 4,500 ಶಾಲೆಗಳನ್ನು ಹೊಂದಿದ್ದೇವೆ ಮತ್ತು ಸರ್ಕಾರಿ ಆದೇಶಗಳ ಪ್ರಕಾರ  ಅಂತಹಾ ಶಾಲೆಗಳಿಗೆ ಓರ್ವ ಶಿಕ್ಷಕರ ನೇಮಕ ಮಾಡಲಾಗಿದೆ. ಇನ್ನು ಇವುಗಳೆಲ್ಲವೂ ಕಿರಿಯ ಪ್ರಾಥಮಿಕ ಶಾಲೆಗಳಾಗಿದೆ."
ಏಕ ವಿದ್ಯಾರ್ಥಿ ಶಾಲೆಗಳು!
ಇನ್ನು ಏಕೋಪಾದ್ಯಾಯ ಶಾಲೆಗಳಿರುವಂತೆಯೇ ರಾಜ್ಯದಲ್ಲಿ ಒಬ್ಬನೇ ವಿದ್ಯಾರ್ಥಿ ಇರುವ ಶಾಲ್ಗಳೂ ಇದೆ!ಇಲಾಖೆಯಿಂದ ಲಭ್ಯವಿರುವ ವಿವರಗಳ ಪ್ರಕಾರ, ಅಂತಹ ಎರಡು ಶಾಲೆಗಳು ಕರ್ನಾಟಕದಲ್ಲಿದೆ. ಅದರಲ್ಲಿ ಒಂದು ಕೋಲಾರದಲ್ಲಿದ್ದರೆ ಇನ್ನೊಂದು ಗದಗ ಜಿಲ್ಲೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com