ಪ್ರವಾಹದ ನಂತರ ಮಡಿಕೇರಿಯಲ್ಲಿ ನೀರಿನ ಸಮಸ್ಯೆ

ಬೇಸಿಗೆ ಆರಂಭಕ್ಕೂ ಮುನ್ನ ಮಡಿಕೇರಿಯಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ, ಕಳೆದ ಐದು ತಿಂಗಳ ಹಿಂದೆ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಮಡಿಕೇರಿ ತುತ್ತಾಗಿತ್ತು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಡಿಕೇರಿ: ಬೇಸಿಗೆ ಆರಂಭಕ್ಕೂ ಮುನ್ನ ಮಡಿಕೇರಿಯಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ, ಕಳೆದ ಐದು ತಿಂಗಳ ಹಿಂದೆ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಮಡಿಕೇರಿ ತುತ್ತಾಗಿತ್ತು.
ವಾರಕ್ಕೊಮ್ಮೆ ಮುನಿಸಿಪಾಲಿಟಿ ನೀರು ಬಿಡುತ್ತಿದೆ, ಆದರೆ ಮಲಿನಗೊಂಡ ನೀರು ಬರುತ್ತಿದೆ ಎಂದು ಸ್ಥಳೀಯರು  ಆರೋಪಿಸಿದ್ದಾರೆ.
ಕಳೆದ ಐದು ದಿನಗಳಿಂದ ಸಿಎಂಸಿ  ನೀರು ಪೂರೈಕೆ ಮಾಡುತ್ತಿದೆ, ಇನ್ನೂ ಬೇಸಿಗೆಯಲ್ಲಿ ಏನು ಮಾಡುವುದು ಎಂದು ಸಂಧ್ಯಾ ಎಂಬುವರು ಪ್ರಶ್ನಿಸಿದ್ದಾರೆ.
ಮಡಿಕೇರಿ ಸಿಎಂಸಿ  ಅಧಿಕಾರಿಗಳು ಗಲಿಬೀಡು ಸಮೀಪದ ಕುಂದಾ ಮೇಸ್ಟ್ರಿ ನೀರು ಪೂರೈಕೆ ಘಟಕಕ್ಕೆ ಭೇಟಿ ನೀಡಿದ್ದರು. ನೀರು ಘಟಕವನ್ನು ಸರಿಯಾಗಿ ನಿರ್ವಹಿಸಿಲ್ಲ, ಮರಳಿನ ಬ್ಯಾಗ್ ನಲ್ಲಿ ತಾತ್ಕಾಲಿಕ ಡ್ಯಾಮ್ ನಿರ್ಮಿಸಲಾಗಿದ್ದು ಅದು ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ನೀರು ಕಲುಷಿತ ಗೊಂಡಿದೆ. 
ಸದ್ಯ ಮಡಿಕೇರಿಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ, ಹೀಗಾಗಿ ಕೂಡಲೇ ನೀರು ಸಂಸ್ಕರಣಾ ಘಟಕವನ್ನು ಸ್ವಚ್ಛಗೊಳಿಸಲು ಆದೇಶಿಸಿದ್ದಾರೆ. 
ಈಗಲೇ ಪರಿಸ್ಥಿತಿ ಈಗಿದೆ ಎಂದರೇ ಬೇಸಿಗೆಯಲ್ಲಿ  ಮತ್ತಷ್ಚು ನೀರಿನ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com