ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: ಬರ, ಲೋಕಸಭೆ ಸೀಟು ಹಂಚಿಕೆ ಸೇರಿ ಹಲವು ವಿಚಾರ ಚರ್ಚೆ

ಸಿದ್ದರಾಮಯ್ಯ ನೇತೃತ್ವದ ಜೆಡಿ (ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಗುರುವಾರ ಈ ವರ್ಷದ ಮೊದಲ ಸಭೆ ನಡೆಸಿದೆ.
ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ
ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಜೆಡಿ (ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಗುರುವಾರ ಈ ವರ್ಷದ ಮೊದಲ ಸಭೆ ನಡೆಸಿದೆ. ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆದು ಸಮ್ಮಿಶ್ರ ಸರ್ಕಾರಕ್ಕೆ ಇರುಸು ಮುರುಸು ಉಂಟು ಮಾಡಿದ್ದ ಬಳಿಕ ಕಾಂಗ್ರೆಸ್ ಈ ಸಭೆಗೆ ಒತ್ತಾಯ ಪಡಿಸಿದೆ. ಈ ವೇಳೆ ಜನಸಾಮಾನ್ಯರ ಸಮಸ್ಯೆ ಕುರಿತು ಚರ್ಚಿಸಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಜೆಡಿ (ಎಸ್) ಕಾರ್ಯದರ್ಶಿ ಡ್ಯಾನಿಶ್ ಅಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಮುಖ್ಯವಾಗಿ ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿ ಬಗ್ಗೆ ಚರ್ಚಿಸಲಾಗಿದೆ. ಬಿಜೆಪಿ ಇದಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪರಿಸ್ಥಿತಿಯ ಭೀಕರತೆಯನ್ನು ಹಾಗೂ ಅಂಕಿ ಅಂಶಗಳನ್ನು ಕಲೆ ಹಾಕಿದೆ.ಕಂದಾಯ ಸಚಿವ ಆರ್. ವಿ. ದೇಶಪಾಂಡೆ, ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಸಹಕಾರ ಸಚಿವ ಬಂಡೆಪ್ಪ ಕಾಂಶಂಪುರ,  ಆರ್ಡಿಪಿಆರ್ ಸಚಿವ ಕೃಷ್ಣ ಬೈರೆಗೌಡ ನೇತೃತ್ವದ ನಾಲ್ಕು ತಂಡಗಳು ರು ಬರ ಪರಿಹಾರ ಕುರಿತು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ"ಅವರು ಈಗಾಗಲೇ ಬರಗಾಲಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸಲು ಪ್ರಾರಂಭಿಸಿದ್ದಾರೆ. ಜನರು ವಲಸೆ ಹೋಗುವುದನ್ನು ತಪ್ಪಿಸಲು ಕುಡಿಯುವ ನೀರು, ಮೇವು ಮತ್ತು ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮುಂದಿನ ಶಾಸಕಾಂಗ ಅಧಿವೇಶನ ಪ್ರಾರಂಭವಾಗುವ ಮೊದಲು ತಂಡಗಳು ಎಲ್ಲಾ ಹಳ್ಳೀಗಳ ಭೇಟಿಯನ್ನು ಮುಗಿಸಿರುತ್ತದೆ.
"ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿದೆ., ಆನಂದ್ ಸಿಂಗ್-ಗಣೇಶ್ ಹೊಡೆದಾಟವು ಪಕ್ಷದ ಆಂತರಿಕ ವಿಚಾರವಾಗಿದೆ." ಸಿದ್ದರಾಮಯ್ಯ ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತಂತೆ ಸಹ ನಿನ್ನೆ ನಡೆದಸಭೆಯಲ್ಲಿ ಚರ್ಚೆಗಳಾಗಿದೆ. ಆದರೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹಾಗೆಯೇ ಇದಕ್ಕೆ ಮುನ್ನ ಮುಂದಿನ ವಾರ ಇನ್ನೊಂದು ಸಭೆ ನಡೆಸಲಾಗುವುದುಅದರಲ್ಲಿ ಸೀಟು ಹಂಚಿಕೆ ಬಗ್ಗೆ ವಿವರವಾಗಿ ಚರ್ಚೆ ನಡೆಯಲಿದೆ.
ನಿಗಮ ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಹಾಗೂ ಸಂಸದೀಯ ಕಾರ್ಯದರ್ಶಿಯ ಹುದ್ದೆಗಳಿಗೆ ಕಾಂಗ್ರೆಸ್ ಸೂಚಿಸಿದ್ದ ಕೆಲವು ಹೆಸರುಗಳನ್ನು  ಕುಮಾರಸ್ವಾಮಿ ಒಪ್ಪಿಲ್ಲ ಎನ್ನುವ ವಿಚಾರವೂ ಚರ್ಚೆಯಾಗಿದ್ದು ಇದೀಗ ಬಹುತೇಕ ಎಲ್ಲಾ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಬಹುತೇಕ ಎಲ್ಲರ ನೇಮಕಕ್ಕೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹುದ್ದೆ ವಿಚಾರ ಮಾತ್ರ ಇನ್ನೂ ಗೊಂದಲದಲ್ಲಿದೆ.ಚಿಕ್ಕಬಳ್ಳಾಪುರ ಎಂಎಲ್ಎ ಡಾ.ಸುಧಾಕರ್ ರೆಡ್ಡಿ ಹೆಸರನ್ನು ಕಾಂಗ್ರೆಸ್ ಮುನ್ನಲೆಗೆ ತಂದಿದ್ದರೂ ಮುಖ್ಯಮಂತ್ರಿಗಳು ಇದನ್ನು ಒಪ್ಪಿಲ್ಲ ಎಂದು ಹೇಳಲಾಗಿದೆ. ಇನ್ನು ಇತರೆ ನೇಮಕಾತಿಗಳನ್ನು ಶೀಘ್ರದಲ್ಲೇ ಮಾಡಿಕೊಳ್ಳಲು ಸಮ್ಮತಿಸಿರುವುದಾಗಿಯೂ ತಿಳಿದುಬಂದಿದೆ.
ದಲಿತ ಕಾರ್ಯಕರ್ತರ ಘೇರಾವ್
ಇದೇ ವೇಳೆ ಗುರುವಾರ ಕುಮಾರಕೃಪಾ ಅತಿಥಿಗೃಹದ ಮುಭಾಗ ಗುರುವಾರ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೇರಾವ್ ಕೂಗಿದ್ದಾರೆ. ಎಸ್ಸಿ / ಎಸ್ಟಿ ಸರ್ಕಾರಿ ಸಿಬ್ಬಂದಿಗಬಡ್ತಿ ವಿಚಾರದಲ್ಲಿ ಶೀಘ್ರವೇ ಕೋಟಾ ಜಾರಿ ಮಾಡಬೇಕೆಂದು ಅವರು ಒತಾಯಿಸಿದ್ದಾರೆ.
ನೋಟೀಸ್ ಗೆ ಅತೃಪ್ತ ಶಾಸಕರ ಉತ್ತರ
ಕಳೆದ ವಾರ ನಡೆದ ಸಿಎಲ್ಪಿ ಸಭೆಗೆ ಗೈರಾಗಿದ್ದ ನಾಲ್ವರು ಶಾಸಕರಲ್ಲಿ ಮೂವರು ಶಾಲಸಕರು ಸಿದ್ದರಾಮಯ್ಯನವರ ಶೋಕಾಸ್ ನೊಟೀಸ್ ಗೆ ಉತ್ತರಿಸಿದ್ದಾರೆ. . ಮಾಜಿ ಸಚಿವ ಮತ್ತು ಗೊಕಾಕ್ ಶಾಸಕ ರಮೇಶ್ ಜಾರಕಿಹೋಳಿ, ಅಥಣಿ ಶಾಸಕಮಹೇಶ್ ಕುಮತಳ್ಳಿ ಹಾಗೂ ಬಳ್ಲಾರಿಯ ಬಿ. ನಾಗೇಂದ್ರ ನೋಟೀಸ್ ಗೆ ಪ್ರತಿಕ್ರಯಿಸಿದ್ದು ಅವರು ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ ಚಿಂಚೋಳಿ ಶಾಸಕ ಜಾಧವ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಕುರಿತು ಪ್ರತಿಕ್ರಯಿಸಿದ ಸಿದ್ದರಾಮಯ್ಯ "ನಾವೇನು ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿ ಕ್ರಮ ಜರುಗಿಸುತ್ತೇವೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com