ಚಿಂತಾಮಣಿ ಗಂಗಮ್ಮನ ಗುಡಿ ವಿಷ ಪ್ರಸಾದ ದುರಂತಕ್ಕೆ 2ನೇ ಬಲಿ!

ದೇವಸ್ಥಾನಕ್ಕೆ ಹೋಗದಿದ್ದರು ಮಗಳ ಮನೆಗೆ ಹೋಗಿದ್ದಾಗ ಮಗಳು ಕೊಟ್ಟ ಗಂಗಮ್ಮನ ಗುಡಿ ಪ್ರಸಾದ ತಿಂದಿದ್ದಿದ್ದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸರಸ್ವತಮ್ಮ ಎಂಬುವರು ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಿಂತಾಮಣಿ: ದೇವಸ್ಥಾನಕ್ಕೆ ಹೋಗದಿದ್ದರು ಮಗಳ ಮನೆಗೆ ಹೋಗಿದ್ದಾಗ ಮಗಳು ಕೊಟ್ಟ ಗಂಗಮ್ಮನ ಗುಡಿ ಪ್ರಸಾದ ತಿಂದಿದ್ದಿದ್ದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸರಸ್ವತಮ್ಮ ಎಂಬುವರು ಮೃತಪಟ್ಟಿದ್ದಾರೆ. 
56 ವರ್ಷದ ಸರಸ್ವತಮ್ಮ ಶಿಡ್ಲಘಟ್ಟ ತಾಲೂಕಿನ ಗಡಿಮೀಂಚೆನಹಳ್ಳಿ ನಿವಾಸಿಯಾಗಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶುಕ್ರವಾರ ವಿಶೇಷ ಪೂಜಾ ಕೈಂಕರ್ಯದ ಕಾರಣ ಹಲ್ವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ದೇವಸ್ಥಾನದಲ್ಲಿ ನೀಡಲಾದ ಪ್ರಸಾದ (ಸ್ವೀಟ್ ಪೊಂಗಲ್) ಸೇವಿಸಿ ಕವಿತಾ ಎಂಬುವರು ಮೃತಪಟ್ಟಿದ್ದು ಇದೀಗ ಸರಸ್ವತಮ್ಮ ಅವರು ಮೃತಪಟ್ಟಿದ್ದಾರೆ. ಇನ್ನು ಹಲವರ ಪರಿಸ್ಥಿತಿ ಗಂಭೀರವಾಗಿದೆ.

ಘಟನೆ ಕುರಿತು ಚಿಂತಾಮಣಿ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದೇವಸ್ಥಾನದ ಅರ್ಚಕ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com