ಬೆಂಗಳೂರು: ವಕೀಲೆಗೆ ಸೆಕ್ಯೂರಿಟಿ ಗಾರ್ಡ್ ಲೈಂಗಿಕ ಕಿರುಕುಳ, ದೂರು ದಾಖಲು

ಕ್ಯೂರಿಟಿ ಗಾರ್ಡ್ ಓರ್ವ ವಕೀಲೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಂಗಳುರಿನ ಅಶೋಕನಗರದಲ್ಲಿ ನಡೆದಿದೆ.
ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ನಿಂದ ವಕೀಲೆಯ ಮೇಲೆ ಅತ್ಯಾಚಾರಕ್ಕೆ ಯತ್ನ, ದೂರು ದಾಖಲು
ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ನಿಂದ ವಕೀಲೆಯ ಮೇಲೆ ಅತ್ಯಾಚಾರಕ್ಕೆ ಯತ್ನ, ದೂರು ದಾಖಲು
ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ಓರ್ವ ವಕೀಲೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಂಗಳುರಿನ ಅಶೋಕನಗರದಲ್ಲಿ ನಡೆದಿದೆ. ಅಶೋಕನಗರದ ಪ್ರಿಮ್ರೋಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆ ಸಂಬಂಧ ವಕೀಲೆ ಶನಿವಾರ ಪೋಲೀಸರಿಗೆ ದೂರಿತ್ತಿದ್ದಾರೆ.
ಕೆಲಸದ ನಿಮಿತ್ತ 23 ವರ್ಷದ ವಕೀಲೆ ತಡ್ರಾತ್ರಿವರೆಗೆ ಕಛೇರಿಯಲ್ಲೇ ಉಳಿದಿದ್ದಳು.ಸುಮಾರು 9.30ರ ವೇಳಿಗೆ ಆಕೆಯ ಕೋಣೆಗೆ ಬಂದ ಸೆಕ್ಯೂರಿಟಿ ಟೆರೇಸ್ ಮೇಲೆ ನಲ್ಲಿಯಿಂದ ನೀರು ಸೋರುತ್ತಿದೆ ಎಂದು ತಿಳಿಸಿದ್ದ. ಆದರೆ ವಕೀಲೆ ಇದರ ಬಗ್ಗೆ ಗಮನ ನೀಡದೆ ತನ್ನ ಕೆಲಸದಲ್ಲೇ ನಿರತಳಾಗಿದ್ದಾಳೆ. ಇದಾಗಿ ಎರಡು ಗಂಟೆಗಳ ಬಳಿಕ ಕಛೇರಿಯಿಂದ ಹೊರಡಲನುವಾದ ಸೆಕ್ಯೂರಿಟಿ ಪಾರ್ಕಿಂಗ್ ಲಾಟ್ ಗೆ ಬಂದು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾನೆ.ಬಳಿಕ ವಕೀಲಳಿದ್ದ ಕೋಣೆಗೆ ಆಗಮಿಸಿ ಅವಳ ಮೈ ಮುಟ್ಟುವ ಮೂಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ವಕೀಲೆ ಗಾರ್ಡ್ ಮೈ ಮುಟ್ಟುತ್ತಿದ್ದಂತೆ ಗಟ್ಟಿಯಾಗಿ ಕೂಗಿದ್ದು ಆಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಶನಿವಾರ ಅಶೋಕನಗರ ಠಾಣೆಯಲ್ಲಿ ವಕೀಲೆ ದೂರು ಸಲ್ಲಿಸಿದ್ದು ಪೋಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.
"ಸುಮಾರು 11.50ಕ್ಕೆ ಆಫೀಸ್‍ವೊಳಗೆ ಲೈಟ್ ಗಳು ಆಫ್ ಆಗಿದ್ದವು. ಆಗ ನಾನು ಮೊಬೈಲ್ ಟಾರ್ಚ್ ಹಾಕಿಕೊಂಡು ಹೊರಬಂದಿದ್ದೆ. ಆಗ ಸೆಕ್ಯೂರಿಟಿ ಹೊರಹೋಗುವ ಡೋರ್ ಲಾಕ್ ಮಾಡಿ ನನ್ನ ಬಳಿ ಬಂದು ನನ್ನನ್ನು ಬೀಳಿಸಿದ್ದಲ್ಲದೆ ತಲೆ ಭಾಗವನ್ನು ಗಟ್ಟಿಯಾಗಿ ಒತ್ತಿದ್ದಾನೆ. ಆಗ ಅವನು ಮದ್ಯ ಸೇವನೆ ಮಾಡಿದ್ದಂತೆ ಅನಿಸಿತ್ತು.ಆತ ನನ್ನ ಕೈ ಕಾಲು, ಎದೆ ಭಾಗಗಳನ್ನು ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ. ನಾನು ಜೋರಾಗಿ ಕಿರುಚಿಕೊಂಡೆ. ಆಗ ಅವನಲ್ಲಿಂದ ಪರಾರಿಯಾಗಿದ್ದಾನೆ" ಸಂತ್ರಸ್ಥ ವಕೀಲೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com