ಕೆಆರ್ ಪುರಂ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಸೆಂಟ್ರಲ್ ಸಿಲ್ಕ್ ಬೋರ್ಡ್ ೯ಕೇಂದ್ರೀಯ ರೇಷ್ಮೆ ಮಂಡಳಿ) ಯಿಂದ ಕೆಆರ್ ಪುರಂ ಗೆ ಔಟರ್ ರಿಂಗ್ ರೋಡ್ ಮೂಲಕ ಸಾಗುವ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಕೆಆರ್ ಪುರಂ ಮೆಟ್ರೋ ಮಾರ್ಗಕ್ಕೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ
ಕೆಆರ್ ಪುರಂ ಮೆಟ್ರೋ ಮಾರ್ಗಕ್ಕೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ
ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ (ಕೇಂದ್ರೀಯ ರೇಷ್ಮೆ ಮಂಡಳಿ) ಯಿಂದ ಕೆಆರ್ ಪುರಂ ಗೆ ಔಟರ್ ರಿಂಗ್ ರೋಡ್ ಮೂಲಕ ಸಾಗುವ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
 5,994.90 ಕೋಟಿ ರೂ.ಮೊತ್ತದ ಯೋಜನೆ ಇದಾಗಿದ್ದು ಎಲ್ಲವೂ ಅಂದುಕೊಂಡಂತಾದರೆ 2023 ಡಿಸೆಂಬರ್ ನಿಂದ ಈ ಮಾರ್ಗದಲ್ಲಿ ಮೆಟ್ರೋ ಓಡಲಿದೆ.ಯೋಜನಾ ಪೂರ್ವ ಚಟುವಟಿಕೆಗಳು ಮಾರ್ಚ್ 2020 ರೊಳಗೆಮುಗಿಯಲಿದ್ದು ಇದು ನಮ್ಮ ಮೊಟ್ರೋ ಯೋಜನೆಯ ಫೇಸ್ 2ಎನ ಭಾಗವಾಗಿದೆ.
ಈ ಮುನ್ನ ಯೋಜನೆಯ ಅಂದಾಜು ವೆಚ್ಚ 4,202 ಕೋಟಿ ರೂ. ಎನ್ನಲಾಗಿತ್ತು. ಆದರೆ ಭೂಮಯು ಬೆಲೆ ಹೆಚ್ಚಳವಾಗಿದ್ದು ಇದೀಗ ಅಂದಾಜು ವೆಚ್ಚದಲ್ಲಿ 223ಶೇ. ಹೆಚ್ಚಳವಾಗಿದೆ.ಖಾಸಗಿ ಜಾಗಗಳೇ ಹೆಚ್ಚಾಗಿರುವ ಕಾರಣ ಭೂಮಿ ಖರೀದಿಯು ದುಬಾರಿಯಾಗಲಿದೆ. ಇಷ್ಟೇ ಅಲ್ಲದೆ ರೈಲ್ವೆ ಲೇನ್ ನ ಎರಡೂ ಕಡೆ ಬಿಎಂಟಿಸಿ ಮಾರ್ಗಗಳು ಬರುವ ಕಾರಣ  13 ನಿಲ್ದಾಣಗಳಲ್ಲಿ 12 ಕಡೆ ಬಸ್ ಸಂಚರಿಸಬಹುದಾದ ಉತ್ತಮ ರಸ್ತೆ ನಿರ್ಮಾಣ ಸಹ ಆಗಬೇಕಾಗಿದೆ.ಇದು ಯೋಜನೆ ವೆಚ್ಚವನ್ನು ಹೆಚ್ಚಳವಾಗಿಸಿದೆ.
ಇದಾಗಲೇ ಅಸ್ತಿತ್ವದಲ್ಲಿರುವ ಫೇಸ್ 1 ಪೂರ್ವ-ಪಶ್ಚಿವ ಮಾರ್ಗದ ಬೈಯಪ್ಪನಹಳ್ಳಿ ಡಿಪೋ ವನ್ನು ಫೇಸ್-2ಎಗೆ ವಿಸ್ತರಿಸಲಾಗುತ್ತದೆ.ಅಲ್ಲದೆ ಕಾಡುಗೋಡಿಯಲ್ಲಿ ಸಹ ಹೊಸ ಡಿಪೋವನ್ನು ತೆರೆಯಬೇಕಾಗಿದೆ.ಇದೂ ಸಹ ಪೂರ್ವ-ಪಶ್ಚಿಮ ಮಾರ್ಗದ ಡಿಪೋ ಜತೆ ಸಂಪರ್ಕ ಹೊಂದಿರಲಿದೆ. ಈ ಹೊಸ ಡಿಪೋ ನಿರ್ಮಾಣ ವೆಚ್ಚವು ಸಹ ಫೇಸ್ 2ಎ ವೆಚ್ಚದೊಳಗೆ ಬರಲಿದೆ.
ಕೆಂಗೇರಿಯಿಂದ ವೈಟ್ ಫೀಲ್ಡ್ ಗೆ ವಿಸ್ತರಿಸಲ್ಪಡುವ ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗ  42 ಕಿಲೋಮೀಟರ್ಉದ್ದವಿರಲಿದ್ದು ಅತಿ ಹೆಚ್ಚಿನ ಪ್ರಯಾಣಿಕರನ್ನುಒಳಗೊಳ್ಳುವ ಮಾರ್ಗವಾಗಲಿದೆ.ಕಾಡುಗೊಡಿ ಡಿಪೋ ಸಾಮರ್ಥ್ಯ ನಾವಿದಕ್ಕೆ ಮುನ್ನ ಊಹಿಸಿದ್ದಕ್ಕಿಂತ ಹೆಚ್ಚಾಗಿರಲಿದೆ.
ಸದ್ಯ ರಾಜ್ಯ ಸರ್ಕಾರ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದು ಈಗ ಬಿಎಂಆರ್ ಸಿಎಲ್ ಕೇಂದ್ರದ ಅನುಮತಿಯನ್ನೂ ಪಡೆದು ತನ್ನ ಯೋಜನಾ ವೇಗ ಹೆಚ್ಚಿಸಿಕೊಳ್ಳುವತ್ತ ನಿರೀಕ್ಷಿಸುತ್ತಿದೆ.ಮೆಟ್ರೊ ಪಾಲಿಸಿ 2017 ರಲ್ಲಿ ಅನುಷ್ಠಾನಗೊಂಡ ಈಕ್ವಿಟಿ ಹಂಚಿಕೆ ಜಂಟಿ ಮಾದರಿಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಹಣವನ್ನು ಪಡೆಯಲು ಮತ್ತು ಅನುಮತಿ ಸಹಿತ ಭೂ ಸ್ವಾಧೀನ ಪಡಿಸಿಕೊಳ್ಳುವದು ಸಹ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com