ಫೆ.20ರಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ, ಏರ್ ಶೋಗೆ ಸುನೀತಾ ವಿಲಿಯಮ್ಸ್?

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಇದೇ ಫೆಬ್ರವರಿ 20ರಿಂಡ 24ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು ಇದಕ್ಕಾಗಿ ಪೂರ್ವಸಿದ್ದತೆಗಳು ಭರದಿಂದ ಸಾಗಿದೆ.

Published: 31st January 2019 12:00 PM  |   Last Updated: 31st January 2019 11:33 AM   |  A+A-


Spectacular Aero India show ahead in Bengaluru

ಫೆ.20ರಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ, ಏರ್ ಶೋಗೆ ಸುನೀತಾ ವಿಲಿಯಮ್ಸ್?

Posted By : RHN
Source : The New Indian Express
ಬೆಂಗಳೂರು: ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಇದೇ ಫೆಬ್ರವರಿ 20ರಿಂಡ 24ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು ಇದಕ್ಕಾಗಿ ಪೂರ್ವಸಿದ್ದತೆಗಳು ಭರದಿಂದ ಸಾಗಿದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರಕ್ಷಣಾ ಮತ್ತು ಅಂತರಿಕ್ಷಯಾನ ಸಂಸ್ಥೆಗಳಿಂದ ಪ್ರದರ್ಶನಕ್ಕಾಗಿ ಸೂಕ್ತ ಸ್ಥಳದ ನಿರ್ಮಾಣ ಮಾಡುವುದರೊಡನೆ ಸಂದರ್ಶಕರು, ವೀಕ್ಷಕರ ಭೇಟಿಗಾಗಿ ಸಹ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಕಳೆದೆಲ್ಲಾ ಬಾರಿ ಏರೋ ಇಂಡಿಯಾ ಪ್ರದರ್ಶನ ಕೇವಲ ಯಲಹಂಕ ವಾಯುನೆಲೆಗಷ್ಟೇ ಸೀಮಿತವಾಗಿತ್ತು. ಆದರೆ ಈ ಬಾರಿ ವಿಶೇಷವೆನ್ನುವಂತೆ ಜಕ್ಕೂರು ಏರೋಡ್ರಮ್ ನಲ್ಲಿ ಡ್ರೋನ್ ಒಲಂಪಿಕ್ಸ್  ಸಹ ಏರ್ಪಡಿಸಲಾಗಿದೆ.

ಏರೋ ಇಂಡಿಯಾ ಕಾರ್ಯಕ್ರಮ ಆಯೋಜನೆಗೆ ನಾವು ಸಂಪೂರ್ಣ ಸಿದ್ದರಾಗಿದ್ದೇವೆ. ಈ ಬಾರಿ ಹಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಂದು ಏರ್ ಕಮಾಂಡರ್ ರವುರಿ ಶೀತಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ."ಸಂಚಾರ ವ್ಯವಸ್ಥೆಯ ಬಗೆಗೆ ಹೇಳುವುದಾದರೆ ಪಾರ್ಕಿಂಗ್ ಪ್ರದೇಶದಿಂದ ರನ್ ವೇ ಗೆ ಬರಲು ವೀಕ್ಷಕರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.. ಈ ಸ್ಥಳಗಳಲ್ಲಿ ಟಿಕೆಟ್ ಕೌಂಟರ್ ಗಳು, ಫುಡ್ ಕೋರ್ಟ್ ಗಳು, ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಏರೋ ಇಂಡಿಯಾಗೆ ಸುನೀತಾ ವಿಲಿಯಮ್ಸ್?

ಐದು ದಿನಗಳ ಈ ಕಾರ್ಯಕ್ರಮದಲ್ಲಿ ಒಂದು ದಿನವನ್ನು ಮಹಿಳಾ ದಿನ ಎಂದು ಆಚರಿಸಲು ಉದೇಶಿಸಲಾಗಿದೆ. ಆ ದಿನ ರಕ್ಷಣಾ ಸಚಿವಾಲಯದ ವತಿಯಿಂದ ಅನೇಕ ಕಾರ್ಯಕ್ರಮಗಳಿರಲಿದೆ.ಭಾರತೀಯ ಮೂಲದ ಅಮೆರಿಕಾದ ಗಗನಯಾತ್ರಿ, ಸುನಿತಾ ವಿಲಿಯಮ್ಸ್ ಈ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಅವರ ಭೇಟಿ ಇನ್ನೂ ಅಂತಿಮಗೊಂಡಿಲ್ಲವಾದರೂ ಅವರು ಈ ಬಾರಿ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಏರ್ ಶೋ ನ ನಾಲ್ಕನೇ ದಿನ ಮಹಿಳಾ ದಿನವಾಗಿ ಪರಿಗಣಿಸಲ್ಪಡಲಿದೆ.ಆ ದಿನ ಹಾರಾಟ ನಡೆಸುವ ಬಹುತೇಕ ವಿಮಾನಗಳಲ್ಲಿ ಮಹಿಳಾ ಪೈಲಟ್ ಇರಲಿದ್ದಾರೆ.

ಡ್ರೋನ್ ಒಲಿಂಪಿಕ್ಸ್ ಗೆದ್ದವರಿಗೆ 38 ಲಕ್ಷ ರೂ

ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ನಡೆಯುವ ಡ್ರೋನ್ ಒಲಿಂಪಿಕ್ಸ್ ನಲ್ಲಿ ಆರು ವಿಭಾಗಗಳಲ್ಲಿ ವಿಜೇತರಾದವರಿಗೆ 38 ಲಕ್ಷ ರೂ. ಬಹುಮಾನವಿರಲಿದೆ.ಅವುಗಳಲ್ಲಿ ನಾಲ್ಕು ಕಣ್ಗಾವಲಿಗೆ ಸಂಬಂಧಿಸಿದ್ದಾಗಿರಲಿದೆ. ಜಕ್ಕೂರಿನಲ್ಲಿ ಪ್ರಾಥಮಿಕ ಹಂತದ ಡ್ರೋನ್ ಒಲಂಪಿಕ್ಸ್ ನಡೆದರೆ ಅಂತಿಮ ಸುತ್ತಿಗಳು ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.
Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp