ಗಾಂಧಿ ಪುತ್ಥಳಿ ಸಮೀಪ ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ 'ಟೋನಿಕ್'

ಮಹಾತ್ಮಾ ಗಾಂಧಿ ರಸ್ತೆಯ ಮಹಾತ್ಮಾ ಗಾಂಧೀಜಿ ಪುತ್ಥಳಿಗೆ ಅನತಿ ದೂರದಲ್ಲಿ ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ ತಲೆ ಎತ್ತುತ್ತಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗುವ ಸಾಧ್ಯತೆಗಳಿವೆ.
ಗಾಂಧಿ ಪುತ್ಥಳಿ ಸಮೀಪ ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ 'ಟೋನಿಕ್'
ಗಾಂಧಿ ಪುತ್ಥಳಿ ಸಮೀಪ ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ 'ಟೋನಿಕ್'
ಬೆಂಗಳೂರು: ಮಹಾತ್ಮಾ ಗಾಂಧಿ ರಸ್ತೆಯ ಮಹಾತ್ಮಾ ಗಾಂಧೀಜಿ ಪುತ್ಥಳಿಗೆ ಅನತಿ ದೂರದಲ್ಲಿ ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ ತಲೆ ಎತ್ತುತ್ತಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗುವ ಸಾಧ್ಯತೆಗಳಿವೆ.
ಮಹಾತ್ಮಾಗಾಂಧಿ ರಸ್ತೆಯ ಜೆವೆಲ್ಸ್ ಡೇ ಪ್ಯಾರಗನ್ ಸರ್ಕಲ್ ನಲ್ಲಿ ಟೋನಿಕ್ ಹೆಸರಿನ ವೈಭವದ ಮದ್ಯದಂಗಡಿ ತಲೆ ಎತ್ತುತ್ತಿದೆ. ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದರೆ ಕಣ್ಣಿಗೆ ರಾಚುವ ಈ ಮದ್ಯದಂಗಡಿ ಎದುರಾಗುತ್ತದೆ. ಗಾಂಧಿ ಮಾರ್ಗದಲ್ಲಿ ಸಾಗು  ಎಂಬ ಗಾಂಧಿ ವಾದಿಗಳ ಹಿತ ನುಡಿ ಇಲ್ಲಿ ಅಪಹಾಸ್ಯಕ್ಕೀಡಾಗಿದೆ.  ವಿಶೇಷ ಎಂದರೆ ಮದ್ಯಪಾನದ ದುಷ್ಪರಿಣಾಮಗಳ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ, ಎಲ್ಲಾ ಕೆಡುಕುಗಳ ಮೂಲ ಮದ್ಯಪಾನ ಎಂದು ಸಾರಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿ ಸಮೀಪವೇ ಈ ಮದ್ಯದಂಗಡಿ ತಲೆ ಎತ್ತುತ್ತಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿವಿಧ ಹೆಸರಿನ ವೈನ್ ಗಳು, 50ಕ್ಕೂ ಹೆಚ್ಚು ವಿವಿಧ ಬಗೆಯ ಬಿಯರ್ ಗಳು, ವಿಶ್ವದ ಅತ್ಯಂತ ಅಪರೂಪದ ಸಿಂಗಲ್ ಮಾಲ್ಟ್ ವಿಸ್ಕಿ ಸೇರಿದಂತೆ ಕಡಿಮೆ ಬೆಲೆಯ ಮದ್ಯದಿಂದ ಹಿಡಿದು ಅತ್ಯಂತ ದುಬಾರಿ ದರದ ಮದ್ಯ ಲೋಕವೇ ಇಲ್ಲಿ ಮೈದೆಳೆದಿದೆ. ಟೋನಿಕ್ ಹೆಸರಿನ ಮೂರನೇ ಮದ್ಯದ ಮಳಿಗೆ ಇದಾಗಿದೆ. ಮೂರು ವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ಎರಡು ಮದ್ಯದ ಮಳಿಗೆಗಳನ್ನು ಇದೇ ಸಂಸ್ಥೆ ತೆರೆದಿತ್ತು. 
ಅನಿತಾ ರೆಡ್ಡಿ ಎಂಬುವರ ಮಾಲೀಕತ್ವದಲ್ಲಿ ಈ ಮದ್ಯ ಪ್ರಪಂಚ ತಲೆ ಎತ್ತುತ್ತಿದ್ದು, ಕಳೆದ ಎರಡು ವರ್ಷಗಳಿಂದ ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಅತ್ಯಾಕರ್ಷಕ, ಝಗಮಗಿಸುವ ದೀಪಾಲಂಕಾರದ ನಡುವೆ ವಿವಿಧ ಬಣ್ಣದ, ವಿವಿಧ ಬಗೆಯ ಮದ್ಯದ ಬಾಟಲ್ ಗಳು ಕಣ್ಮನ ಸೆಳೆಯುವಂತೆ ಜೋಡಿಸಲಾಗುತ್ತಿದೆ. ಇಷ್ಟರಲ್ಲೇ ಈ ಮದ್ಯದಂಗಡಿ ಪಾನ ಪ್ರಿಯರನ್ನು ಕೈ ಬೀಸಿ ಕರೆಯಲಿದೆ. ಮದ್ಯದ ವಸ್ತು ಸಂಗ್ರಹಾಲಯದಂತೆ ಕಂಡು ಬರುವ ಟೋನಿಕ್  ಮದ್ಯಪಾನ ವಿರೋಧಿ ಚಳವಳಿ ಸೇರಿದಂತೆ ಅಸಂಖ್ಯಾತ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ ಎಂ.ಜಿ. ರಸ್ತೆಯ ಗಾಂಧಿ ಪುತ್ಥಳಿ ಬಳಿ ತಲೆ ಎತ್ತುತ್ತಿರುವುದು ಚರ್ಚೆಯ ಕೇಂದ್ರಬಿಂದುವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com