ಗೋವುಗಳ ರಕ್ಷಣೆಗೆ ಕರ್ನಾಟಕ ಪೊಲೀಸರು ವಿಶೇಷ ದಳ ರಚಿಸಬೇಕು: ಶೋಭಾ ಕರಂದ್ಲಾಜೆ ಆಗ್ರಹ

ಜುಲೈ12 ರಿಂದ ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ, ಹೀಗಾಗಿ ಸದನದಲ್ಲಿ ಗೋ ಕಳ್ಳಸಾಗಣೆ ವಿಷಯದ ಬಗ್ಗೆ ಸರ್ಕಾರವನ್ನು ತರಾಟೆಗೆ ...
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
ಬೆಂಗಳೂರು: ಜುಲೈ12 ರಿಂದ ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ, ಹೀಗಾಗಿ ಸದನದಲ್ಲಿ ಗೋ ಕಳ್ಳಸಾಗಣೆ ವಿಷಯದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ವಿಶೇಷವಾಗಿ ಕರಾವಳಿ ತೀರದ ಪ್ರದೇಶಗಳಲ್ಲಿ ಗೋ ಕಳ್ಳ ಸಾಗಣೆ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ, 
ಗೋವುಗಳ ಕಳ್ಳಸಾಗಣೆ ತಪ್ಪಿಸಲು ಕರ್ನಾಟಕ ಪೋಲೀಸರು ವಿಶೇಷ ತಂಡ ರಚಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ,. ನಮ್ಮ ಕಾರ್ಯಕರ್ತರು ಗೋ ಕಳ್ಳಸಾಗಣೆ ತಡೆಯಲು ಯತ್ನಿಸುತ್ತಿದ್ದಾರೆ, ಆದರೆ ಗೋವುಗಳನ್ನು ರಕ್ಷಿಸುವಾಗ  ನಾವು ಕಾನೂನು ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. 
ಸಣ್ಣ ಕಾರುಗಳಲ್ಲಿ ಹಸುಗಳನ್ನು ತುಂಬಿ ಹಿಂಸಿಸಲಾಗುತ್ತದೆ, ಅವುಗಳನ್ನು ಸಾಗಿಸುವಾಗ ಸಾಯುತ್ತವೆ,  ಅದಕ್ಕಾಗಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ, ಸುಮ್ಮನೆ ಕೈಕಟ್ಟಿ ಕೂತಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಗ್ರಾಮವಾಸ್ತವ್ಯ ಕೇವಲ ನಾಟಕ. ಮನವಿ ತೆಗೆದುಕೊಂಡು ಬಂದವರಿಗೆ ಲಾಠಿಚಾರ್ಜ್ ಬೆದರಿಕೆ ಹಾಕುತ್ತಾರೆ. ರಾಜ್ಯ ಕಂಡ ಕೆಟ್ಟ ಸಿಎಂ ಕುಮಾರಸ್ವಾಮಿ. ಜನರ ಗಮನ ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com