ಬೆಂಗಳೂರಿನ ವನ್ಯಜೀವಿ ಸಂರಕ್ಷಣಾ ಆಸ್ಪತ್ರೆಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ

ನಗರದಲ್ಲಿ ವನ್ಯಜೀವಿಗಳನ್ನು ರಕ್ಷಿಸಿ ಅವುಗಳನ್ನು ಆರೈಕೆ ಮಾಡುತ್ತಿರುವ ಪಿಎಫ್ ಎ ವನ್ಯಜೀವಿ ಆಸ್ಪತ್ರೆ ಮತ್ತು ರಕ್ಷಣಾ ಕೇಂದ್ರಕ್ಕೆ ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ವೇದಿಕೆ ಮೇಲಿನ ಗಣ್ಯರು
ವೇದಿಕೆ ಮೇಲಿನ ಗಣ್ಯರು
ಬೆಂಗಳೂರು: ನಗರದಲ್ಲಿ ವನ್ಯಜೀವಿಗಳನ್ನು ರಕ್ಷಿಸಿ ಅವುಗಳನ್ನು ಆರೈಕೆ ಮಾಡುತ್ತಿರುವ  ಪಿಎಫ್ ಎ  ವನ್ಯಜೀವಿ ಆಸ್ಪತ್ರೆ ಮತ್ತು ರಕ್ಷಣಾ ಕೇಂದ್ರಕ್ಕೆ ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅವರ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಈ ಪ್ರಶಸ್ತಿ ಪ್ರದಾನ ಮಾಡಿದರು. 
ಜಿಂಕೆ, ಆಮೆ, ಹಾವುಗಳು ಸೇರಿದಂತೆ ಸುಮಾರು 198 ವನ್ಯಜೀವಿಗಳನ್ನು  ವನ್ಯಜೀವಿ ಆಸ್ಪತ್ರೆ ಹಾಗೂ ರಕ್ಷಣಾ ಕೇಂದ್ರ  ಆರೈಕೆ ಮಾಡುತ್ತಿದ್ದು, ಅವುಗಳಿಗೆ ಪುನರ್ವಸತಿ ಕಲ್ಪಿಸಿದೆ. 
ಬೇಸಿಗೆಯ ಆರಂಭದಲ್ಲಿ  ಕುಡಿಯುವ ನೀರಿಗಾಗಿ ಜಿಂಕೆಗಳು ನಗರ ಪ್ರದೇಶಕ್ಕೆ ಬರುತ್ತಿದ್ದವು. ಕೆಲವೊಂದು ಸೂಕ್ಷ್ಮ ಜೀವಿಗಳು ಮೃತಪಟ್ಟಿದ್ದವು.ಈ ಹಿನ್ನೆಲೆಯಲ್ಲಿ  ತುರಹಳ್ಳಿ ಅರಣ್ಯದಲ್ಲಿ ನೀರಿಗಾಗಿ ಮೂರು ಕೊಳಗಳನ್ನು ಅರಣ್ಯ ಇಲಾಖೆ ಜೊತೆ ಸೇರಿ ನಿರ್ಮಿಸಲಾಗಿದೆ. ಪ್ರತಿದಿನ ಅಲ್ಲಿ ಐದು ಟ್ಯಾಂಕರ್ ನೀರನ್ನು ಹಾಕಲಾಗುತ್ತದೆ. ನಂತರ ಜಿಂಕೆಗಳು ನಗರ ಪ್ರದೇಶಕ್ಕೆ ಆಗಮಿಸುವುದು ಕಡಿಮೆಯಾಗಿದೆ ಎಂದು ಪಿಎಫ್ ಎ ವನ್ಯಜೀವಿ ಆಸ್ಪತ್ರೆ  ಜನರಲ್ ಮ್ಯಾನೇಜರ್ ಡಾ. ನವಾಷ್ ಷರೀಪ್ ಹೇಳಿದ್ದಾರೆ
ಆರೈಕೆ ಮಾಡಲಾಗುತ್ತಿದ್ದ ಹಾವುಗಳಿಗೆ ಬೆನ್ನು ಮೂಳೆ ತೊಂದರೆಗೊಳಾಗದ ಅವುಗಳಿಗೆ ಚಿಕಿತ್ಸೆ ನೀಡಲು ಹೊಸ ಉಪಕರಣವನ್ನು ಎನ್ ಜಿ ಒ ಖರೀದಿಸಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ನಗರ ವನ್ಯಜೀವಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.ಸುಮಾರು 4 ಸಾವಿರದ 200 ಶಾಲೆಗಳಿಗೆ ಭೇಟಿ ನೀಡಿರುವುದಾಗಿ ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com