ಬೆಂಗಳೂರು: ಪತಿ ಕಿರುಕುಳ ತಾಳಲಾಗದೆ ಸೀಮೆಯೆಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ

ಪತಿಯ ಕಿರುಕುಳವನ್ನು ಸಹಿಸಲಾಗದ ಪತ್ನಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳೂರಿನ ಬಾಗಲಗುಂಟೆ ಪ್ರದೇಶದಲ್ಲಿ ನಡೆದಿದೆ,.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪತಿಯ ಕಿರುಕುಳವನ್ನು ಸಹಿಸಲಾಗದ  ಪತ್ನಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳೂರಿನ ಬಾಗಲಗುಂಟೆ ಪ್ರದೇಶದಲ್ಲಿ  ನಡೆದಿದೆ,.
ಮೃತಳನ್ನು ಗೀತಾ(34)ಎಂದು ಗುರುತಿಸಲಾಗಿದೆ. ಮೃತರ ಸಂಬಂಧಿಗಳು ಮನೆ ಎದುರು ಪ್ರತಿಭತನೆ ನಡೆಸಿದ್ದ ಕಾರಣ ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಸೋಮವಾರ ಸಂಜೆ 6.30 ಕ್ಕೆ ಗೀತಾ ಮಲ್ಲಸಂದ್ರದಲ್ಲಿರುವ ತನ್ನ ಸಹೋದರನ ಮನೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಿರುಕುಳದ ಬಗ್ಗೆ ಆಕೆ ತನ್ನ ಸಂಬಂಧಿಕರಿಗೆ ವಿವರಿಸಿದ್ದಾಳೆ. ಬಳಿಕ ಬಚ್ಚಲು ಮನೆಯಲ್ಲಿ ಲಾಕ್ ಮಾಡಿಕೊಂಡು ಬೆಂಕಿ ಹಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಲೆ.ಘಟನೆ ಬಗೆಗೆ ಅರಿತ ನೆರೆಮನೆಯವರು ಬಾಗಲಗುಂಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಗೀತಾಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ಅಷ್ಟರಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಗೀತಾ ಪತಿ ಭೀಮಣ್ಣ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ. ದಂಪತಿಗಳು ಬೀದರ್ ಮೂಲದವರಾಗಿದ್ದು  ಕೆಲವು ವರ್ಷಗಳ ಹಿಂದೆ ನಗರಕ್ಕೆ ವಲಸೆ ಬಂದಿದ್ದರು. ಆದರೆ ಭೀಮಣ್ಣ ಕೆಲ ದಿನಗಳ ಹಿಂದಷ್ಟೇ ಬೆಂಗಳೂರನ್ನು ತೊರೆದು ಹೋಗಿದ್ದನು. ಇದೀಗ ಆತ್ಮಹತ್ಯೆ ಮಾಡಿಕೊಂಡ ಪತ್ನಿ ಗೀತಾ ಸಾವಿಗೆ ಭೀಮಣ್ಣನೇ ಪ್ರಚೋದನೆ ನೀಡಿದ್ದನೆಂದು ಶಂಕೆ ವ್ಯಕ್ತವಾಗಿದ್ದು  ಆತನ ಪತ್ತೆಗೆ ತಂಡ ರಚನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com