ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಂಚನೆ: ಸೆಕ್ಯುರಿಟಿ ವೇಷದಲ್ಲಿ ಬಂದ ವಂಚಕನಿಂದ 1.2 ಲಕ್ಷ ರೂ ಕಳೆದುಕೊಂಡ ಮಹಿಳೆ

ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಎಟಿಎಂ ಸೆಕ್ಯುರಿಟಿ ಎಂದು ಹೇಳಿಕೊಂಡಿದ್ದ ವ್ಯಕ್ಕ್ತಿಯಿಂದಲೇ 1.2 ಲಕ್ಷ ರೂಕಳೆದುಕೊಂಡಿರುವ ಘಟನೆ ಬೆಂಗಳೂರು ನಾಗರಭಾವಿಯ ಪಾಪರೆಡ್ಡಿಪಾಳ್ಯದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಎಟಿಎಂ ಸೆಕ್ಯುರಿಟಿ ಎಂದು  ಹೇಳಿಕೊಂಡಿದ್ದ ವ್ಯಕ್ಕ್ತಿಯಿಂದಲೇ 1.2 ಲಕ್ಷ ರೂಕಳೆದುಕೊಂಡಿರುವ ಘಟನೆ ಬೆಂಗಳೂರು ನಾಗರಭಾವಿಯ ಪಾಪರೆಡ್ಡಿಪಾಳ್ಯದಲ್ಲಿ ನಡೆದಿದೆ. ರಾಮನಗರದ ಮೂಲದವರಾದ ರಾಧಾ ಹಾಗೂ ಆಕೆಯ ಪತಿ ಜೂನ್ 14 ರಂದು ಮಧ್ಯಾಹ್ನ 2.40 ರ ಸುಮಾರಿಗೆ ಹಣವನ್ನು ಡ್ರಾ ಮಾಡಲು ಎಟಿಎಂಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು ಇದಕ್ಕೆ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷವೂ ಕಾರಣವೆಂದು ಮಹಿಳೆ ಆರೋಪಿಸಿದ್ದಾರೆ.
ಘಟನೆ ವಿವರ
ಜೂನ್ 14ಕ್ಕೆ ಹಣ ಡ್ರಾ ಮಾಡಲು ದಂಪತಿಗಳು ಪಾಪರೆಡ್ಡಿಪಾಳ್ಯದ  ವೃತ್ತದಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಎಟಿಎಂ ಕಿಯೋಸ್ಗೆ ಹೋಗಿದ್ದಾಗ ಅವರು ಕೆಲ ಸಮಸ್ಯೆಗಳನ್ನು ಎದುರಿಸಿದ್ದರು. ಆ ವೇಳೆ ಅಲ್ಲಿಗೆ ಆಗಮಿಸಿದ ವ್ಯಕ್ತಿ ತಾವು ಸೆಕ್ಯುರಿಟಿ ಗಾರ್ಡ್ ಎಂದು ಪರಿಚಯಿಸಿಕೊಂಡಿದ್ದು ಅವರ ಸಹಾಯಕ್ಕೆ ನಿಂತಿದ್ದಾನೆ. ಆಗ ಅವರು  ಕಾರ್ಡ್ಹಾಕಿ ಸರಿಯಾದ ಆಯ್ಕೆಯನ್ನು ಆಯ್ದುಕೊಳ್ಳಲು ಸಹಾಯ ಮಾಡಿದ ಆ ವ್ಯಕ್ತಿ ಕ್ಷಣಮಾತ್ರದಲ್ಲಿ ಅವರ ಕಾರ್ಡ್ ಬದಲಿಸಿ ಅವನ ಬಳಿ ಇದ್ದ ಬ್ಲಾಕ್ ಮಾಡಲಾಗಿದ್ದ ಎಟಿಎಂ ಕಾರ್ಡ್ ನೀಡಿ ಹೊರಟು ಹೋಗಿದ್ದಾನೆ.ಆದರೆ ಮಹಿಳೆಗೆ ತನ್ನ ಕಾರ್ಡ್ ಬದಲಾದದ್ದು ಅರಿವಿಗೆ ಬರುವುದರೊಳಗೆ ಆತ ಆಕೆಯ ಖಾತೆಯಿಂದ 40,000 ರು. ಡ್ರಾ ಮಾಡಿದ್ದನು.
ಇದಾಗಿ ಮತ್ತೆ ಮರುದಿನ ಮಹಿಳೆಯ ಖಾತೆಯಲ್ಲಿದ್ದ ಇನ್ನೂ  40,000 ರು ಡ್ರಾ ಆಗಿದ್ದನ್ನು ಕಂಡ ಆಕೆ ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ದಾರೆ."ಹಣವನ್ನು ಹಿಂತೆಗೆದುಕೊಳ್ಳುವಲ್ಲಿನ ಸಮಸ್ಯೆ ಮತ್ತು ನನ್ನ ಮೊಬೈಲ್ನಲ್ಲಿ ಸ್ವೀಕರಿಸಿದ ಸಂದೇಶವನ್ನು ಪರಿಶೀಲಿಸಲು ನಾನು ಬಯಸುತ್ತೇನೆ ಎಂದು ಬ್ಯಾಂಕ್ ಅಧಿಕಾರಿಗೆ ಹೇಳಿದಾಗ ಕಾರ್ಡ್ ಗಮನಿಸಿದ ಅಧಿಕಾರಿ ಈ ಕಾರ್ಡ್ ಕಳೆದ ಏಪ್ರಿಲ್ ನಲ್ಲೇ ಬ್ಲಾಕ್ ಆಗಿರುವುದಾಗಿ ಹೇಳಿದ್ದಾರೆ. ಮತ್ತು ನನಗೆ ಹೊಸ ಕಾರ್ಡ್ ನೀಡುವುದಾಗಿ ಅವರು ಭರವಸೆ ಇತ್ತರು"ರಾಧಾ ಹೇಳಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಆಕೆಗೆ ಹೊಸ ಕಾರ್ಡ್ ನೀಡಿದರಾದರೂ ನಿರ್ಬಂಧಿಸಲಾಗಿರುವ ಕಾರ್ಡ್ ಆಕೆಗೆ ಸೇರಿದ್ದಾಗಿರದೆ ಆ ವಂಚಕ ವ್ಯಕ್ತಿಯದ್ದಾಗಿತ್ತು. ಹಾಗೆಯೇ ಆಕೆಯ ಕಾರ್ಡ್ ಆ ವ್ಯಕ್ತಿಯ ಬಳಿಯೇ ಇತ್ತು. ಜೂನ್ 17 ರಂದು, ಅವರು ಭದ್ರಾವತಿಯಲ್ಲಿದ್ದ ವೇಳೆ ಜೂನ್ 16 ರಂದು ಇನ್ನೂ ರೂ. 40,000 ರು. ಡ್ರಾ ಆಗಿರುವ ಸಂದೇಶ ರಾಧಾ ಅವರ ಮೊಬೈಲ್ ಗೆ ಬಂದಿದೆ.ಭಯಭೀತರಾದ ಆಕೆ ತನ್ನ ಖಾತೆಯನ್ನು ಹೊಂದಿರುವ ಸ್ಥಳೀಯ ಬ್ಯಾಂಕ್ ಗೆ ತೆರಳಿದ್ದಾಗ ಅಲ್ಲಿ ಆಕೆಯ ಬಳಿ ಇರುವ ಕಾರ್ಡ್ ಅವರಿಗೆ ಸೇರಿದ್ದಲ್ಲ ಎಂದು ಮಾಹಿತಿ ದೊರಕಿದೆ. ನಂತರ ಅವರು ಕಾರ್ಡ್ ಅನ್ನು ನಿರ್ಬಂಧಿಸಿದರು ಆದರೆ ದುಷ್ಕರ್ಮಿ ಕಳೆದ ಮೂರು ದಿನಗಳಲ್ಲಿ ಆಕೆಯ ಖಾತೆಯಿಂದ 1.2 ಲಕ್ಷ ರೂ ಡ್ರಾ ಮಾಡಿಕೊಂಡಿದ್ದ.
18 ರಂದು, ರಾಧಾ ವಿವರಣೆ ಕೋರಿ ಬೆಂಗಳೂರು ಶಾಖೆಗೆ ತೆರಳಿದ್ದಾಗ ಜೂನ್ 17 ರಂದು ರಾಧಾ ಹೆಸರಿನಲ್ಲಿ ಹೊಸ ಕಾರ್ಡ್ ತೆಗೆದುಕೊಳ್ಲಲಾಗಿದೆ ಎಂದು ಮಾಹಿತಿ ದೊರಕಿದೆ.ರಿಜಿಸ್ಟರ್ ಪರಿಶೀಲಿಸಿದಾಗ, ಜೂನ್ 15 ರಂದು ಅವರು ಕಾರ್ಡ್ ತೆಗೆದುಕೊಂಡಿದ್ದಾರೆ  ಎಂದು ನಮೂದಾಗಿತ್ತು.
ನಂತರ ಅವರು ದೂರು ದಾಖಲಿಸಲು ಅನ್ನಪೂರ್ಣೇಶ್ವರನಗರ ಪೊಲೀಸ್ ಠಾಣೆಗೆ ತೆರಳಿದರೆ ಅಲ್ಲಿ ಆಕೆಯನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಲು ಹೇಳಲಾಗಿದೆ.ಮತ್ತು ತಾವು ಅಂತಹಾ ಪ್ರಕರಣಗಳನ್ನು ತನಿಖೆ ಮಾಡುವುದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ರಾಧಾ ಸೈಬರ್ ಅಪರಾಧ ಅಧಿಕಾರಿಗಳ ಸಂಪರ್ಕಿಸಿದಾಗ ಅವರು ಈ ಘಟನೆ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ, ನೀವು ರಾಮನಗರ ಪೋಲೀಸ್ ಠಾಣೆಗೆ ತೆರಳಬೇಕು ಎಂದು ಸೂಚಿಸಿದ್ದಾರೆ.ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಬಳಿ ಸಾರಿದ ರಾಧಾ ಅವರ ಬಳಿ ತನ್ನ ಸಂಕಟ ತೋಡಿಕೊಂಡಿದ್ದಾರೆ. ಇದಾದ ನಂತರ  8 ದಿನಗಳ ವಿಳಂಬದ ನಂತರ , ಅಣ್ಣಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗೆ 1 ಲಕ್ಷ ರೂ.ವಂಚನೆ
ಗ್ರಾಹಕ ಆರೈಕೆ ಕಾರ್ಯನಿರ್ವಾಹಕರಿಂದ ಕಳುಹಿಸಲಾದ ಪಾವತಿ ಅಪ್ಲಿಕೇಶನ್ ಲಿಂಕ್ ಅನ್ನು ಬಳಸಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಒಂದು ಗಂಟೆಯ ಅವಧಿಯಲ್ಲಿ 1 ಲಕ್ಷ ರೂ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಳೆದ ಶನಿವಾರ, ಮನು ರಾಂಪಾಲ್ ಕೊರಿಯರ್ ಕಂಪನಿಯ ಮೂಲಕ ಕಳುಹಿಸಿದ ಒಂದು ಪಾರ್ಸೆಲ್‌ನ ವಿತರಣಾ ಸ್ಥಿತಿ ಪರಿಶೀಲನೆಗೆ  ಬಯಸಿದಾಗ ಈ ವಂಚನೆ ನಡೆದಿದೆ. ಅವರು ಗೂಗಲ್ ನಲ್ಲಿ ಕಂಪನಿಯ ಗ್ರಾಹಕ ಆರೈಕೆ ಸಂಖ್ಯೆಯನ್ನು ಹುಡುಕಿ ಕರೆ ಮಾಡಿದ್ದಾರೆ.ಇನ್ನೊಂದು ತುದಿಯಲ್ಲಿರುವ ಸ್ಪೀಕರ್ ಕೊರಿಯರ್ ಅನ್ನು ತ್ವರಿತಗೊಳಿಸಲು 10 ರೂ ನ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ನ ಲಿಂಕ್  ಕಳಿಸಿದ್ದಾನೆ. ಅದರ ಮೂಲಕ ಹಣ ಪಾವತಿ ಮಾಡಿರುವ ಮನು ಕೆಲವೇ ನಿಮಿಷಗಳಲ್ಲಿ ಅನೇಕ ವಿಧದ ಪಾವತಿ ಸಂದೇಶಗಳನ್ನು ಸ್ವೀಕರಿಸಿದ್ದಾರೆ.  ಒಟ್ಟು 1 ಲಕ್ಷ ರೂ. ಅವರ ಖಾತೆಯಿಂದ ನಷ್ಟವಾಗಿದೆ.
ರಾಂಪಾಲ್ ತಾನು ಮೋಸ ಹೋದದ್ದನ್ನು ಮನಗಂಡಿದ್ದು ಇದೀಗ  ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com