ಫೇಸ್ ಬುಕ್ ನಲ್ಲಿ ಪ್ರಸಿದ್ದಳಾಗಲು 3 ವರ್ಷದ ಮಗಳಿಗೆ ಸಿಗರೇಟ್, ಮದ್ಯಪಾನ ಮಾಡಿಸುವ ತಾಯಿ: ಪತಿಯಿಂದ ದೂರು

ತನ್ನ ಫೋಟೋಗಳನ್ನು ಸಾಮಾಜಿಕ ತಾಣಗಳಿಗೆ ಅಪ್ ಮಾಡುವ ಉದ್ದೇಶದಿಂದ ಮೂರು ವರ್ಷದ ಮಗಳಿಗೆ ಥಳಿಸಿ ಬಲವಂತವಾಗಿ ಸಿಗರೇಟ್ ಹಾಗೂ ಮದ್ಯ ಸೇವಿಸುವಂತೆ ತನ್ನ ಪತ್ನಿ ಒತ್ತಾಯಿಸಿ ಹಿಂಸಿಸುತ್ತಿದ್ದಾಳೆ ಎಂದು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತನ್ನ ಫೋಟೋಗಳನ್ನು ಸಾಮಾಜಿಕ ತಾಣಗಳಿಗೆ ಅಪ್ ಮಾಡುವ ಉದ್ದೇಶದಿಂದ ಮೂರು ವರ್ಷದ ಮಗಳಿಗೆ ಥಳಿಸಿ ಬಲವಂತವಾಗಿ ಸಿಗರೇಟ್ ಹಾಗೂ ಮದ್ಯ ಸೇವಿಸುವಂತೆ ತನ್ನ ಪತ್ನಿ ಒತ್ತಾಯಿಸಿ ಹಿಂಸಿಸುತ್ತಿದ್ದಾಳೆ ಎಂದು ಎಂದು ನಗರದ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ತಬ್ರೇಜ್ (ಹೆಸರು ಬದ;ಲಿಸಿದೆ) ಹೇಳುವಂತೆ ಆತನ ಪತ್ನಿ ಆಸ್ಮಾ (ಹೆಸರು ಬದಲಿಸಿದೆ) ಒಬ್ಬ ಮದ್ಯವ್ಯಸನಿ ಆಗಿದ್ದು, ಆಕೆ ರಾತ್ರಿ ತಡವಾಗಿ ಮನೆಗೆ ಆಗಮಿಸುತ್ತಾರೆ ಹಾಗೂ ಮಗಳು ಸಿಗರೇಟ್ ಸೇವನೆ ಮಾಡುವಂತೆ ಒತ್ತಾಯಿಸುತ್ತಾರೆ.
ತಬ್ರೇಜ್ ಬೆಳ್ಳಂದೂರು ಪೋಲೀಸರಿಗೆ ಈ ಸಂಬಂಧ ದೂರು ಸಲ್ಲಿಸಿದ್ದು  2011 ರ ಡಿಸೆಂಬರ್‌ನಲ್ಲಿ ಅಸ್ಮಾಳನ್ನು ತಬ್ರೇಜ್ ವಿವಾಹವಾಗಿದ್ದರು ಆದರೆ ವಿವಾಹವಾದ ನಂತರವೇ ಆಕೆ ಮದ್ಯವ್ಯಸನಿ ಹಾಗೂ ಧೂಮಪಾನ ಚಟ ಹೊಂದಿದ್ದಾಳೆಂದು ಗೊತ್ತಾಗಿದೆ.ಅಸ್ಮಾ ನಿಯಮಿತವಾಗಿ ತಮ್ಮ ಹೆಣ್ಣುಮಗಳಿಗೂ ಸಿಗರೇಟ್ ನೀಡಿ ಧೂಮಪಾನ ಮಾಡುವಂತೆ ಒತ್ತಾಯಿಸುತ್ತಾರೆ.ಇನ್ನೂ ಕೆಲವೊಮ್ಮೆ ಮಗಳಿಗೆ ಮದ್ಯ ನೀಡಿ ಮದ್ಯಪಾನ ಮಾಡುವಂತೆ ಹೇಳಿ ಅದಕ್ಕೆ ಮಗು ಒಪ್ಪದೇ ಹೋದರೆ ಹೊಡೆದು ಹಿಂಸೆ ಕೊಡುತ್ತಾರೆ.ತನ್ನ ಪತ್ನಿ ತನ್ನ ಧೂಮಪಾನದ ಚಿತ್ರಗಳನ್ನು ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾನೆ ಎಂದು ತಬ್ರೇಜ್ ಆರೋಪಿಸಿದ್ದಾರೆ.
“ನಾನು ಧೂಮಪಾನ ಮತ್ತು ಮದ್ಯ ಸೇವನೆಯನ್ನು ತ್ಯಜಿಸುವಂತೆ ಅಸ್ಮಾಗೆ ಸಲಹೆ ನೀಡಿದಾಗಲೆಲ್ಲಾ, ಅವಳು ಕೆಲವು ದಿನಗಳವರೆಗೆ ಜಗಳವಾಡಿ ಮನೆ ಬಿಟ್ಟು ಹೋಗುತ್ತಿದ್ದಳು. ಅವಳು ಮಧ್ಯರಾತ್ರಿಯ ಹೊತ್ತಿಗೆ ಹಿಂತಿರುಗಿ ನಮ್ಮ ಮಗಳಿಗೆ ಮತ್ತೆ ಧೂಮಪಾನ, ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದಳು.ನನ್ನ ಮಗಳನ್ನು ಅವಳಿಂದ ರಕ್ಷಿಸಲು ಮತ್ತು ಅವಳ ವಿರುದ್ಧ ಕ್ರಮಕೈಗೊಳ್ಳಲು ನಾನು ಪೊಲೀಸರಿಗೆ ವಿನಂತಿಸಿದ್ದೇನೆ" ಅವರು ಪತ್ರಿಕೆಗೆ ಹೇಳಿದ್ದಾರೆ.
ಮೀನು ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ ಅವರು, ಕೋಲ್ಕತ್ತಾದವರಾದ ಅಸ್ಮಾ ಅವರನ್ನು ಗುತ್ತಿಗೆ ಮೀನು ವ್ಯಾಪಾರ ಮಾಡುತ್ತಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದರು.ಆಗ ತಬ್ರೇಜ್ ಆಸ್ಮಾ ಅವರ ಅಂಗಡಿಗೆ ಮೀನು ಪೂರೈಕೆ ಮಾಡುತ್ತಿದ್ದರು.ಈ ವೇಳೆ ಅವರಿಬ್ಬರ ಮದ್ಯೆ ಸ್ನೇಹ ಬೆಳೆದಿದೆ.ಒಮ್ಮೆ ಅವನು ಅವಳ ಪರವಾಗಿ ಜಗಳದಲ್ಲಿ ಮಧ್ಯಪ್ರವೇಶಿಸಿದಾಗ, ಅವರು ಹತ್ತಿರವಾದರು.
"ಅವಳು ತನ್ನ ಮೊದಲ ಮದುವೆಯ ಬಗ್ಗೆ ಮತ್ತು ಅವಳ ಪತಿ ಅವಳನ್ನು ಹೇಗೆ ಮೋಸ ಮಾಡಿದ್ದಾಳೆಂದು ಹೇಳಿದ್ದಳು. ನಮ್ಮ ಮದುವೆಯ ನಂತರವೇ ಅವಳು ಈಗಾಗಲೇ ಮೂರು ಬಾರಿ ಮದುವೆಯಾಗಿದ್ದಳು ಮತ್ತು ಅವರೆಲ್ಲರನ್ನೂ ತೊರೆದಿದ್ದಾಳೆ ಎಂದು ನಾನು ತಿಳಿದುಕೊಂಡೆ ”ಎಂದು ಅವರು ಹೇಳಿದರು. 
ಪೋಲೀಸರು ಹೇಳಿದಂತೆ ದಂಪತಿಗಳು ಪೊಲೀಸರನ್ನು ಸಂಪರ್ಕಿಸಿದ್ದು ಇದೇ ಮೊದಲಲ್ಲ. ಅಸ್ಮಾ ಈ ಹಿಂದೆ ಅವರ ವಿರುದ್ಧ ಕೌಟುಂಬಿಕ ಹಿಂಸಾಚಾರ ಪ್ರಕರಣವನ್ನು ದಾಖಲಿಸಿದ್ದರು ಮತ್ತು ಪ್ರತಿಯಾಗಿ ಅವರೂ ಸಹ ಪ್ರತಿ-ದೂರು ದಾಖಲಿಸಿದ್ದರು. ಆದರೆ, ನಂತರ ಅವರು ರಾಜಿ ಮಾಡಿಕೊಂಡು ದೂರುಗಳನ್ನು ಹಿಂತೆಗೆದುಕೊಂಡಿದ್ದರು.“ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಫೋಟೋಗಳನ್ನು ನೋಡಿದ ನಂತರ, ನಾವು ಅಸ್ಮಾ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ತೆಗೆದುಕೊಂಡಿದ್ದೇವೆ. ವಿಚಾರಣೆಗಾಗಿ ನಾವು ಅವಳನ್ನು ಕರೆಸಿಕೊಳ್ಳಲಿದ್ದೇವೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ”ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com