ಚಾಲಕ, ನಿರ್ವಾಹಕರಿಗೆ ಕರ್ತವ್ಯ ನಿಯೋಜಿಸುವ ಅಧಿಕಾರಿ "ಮುಲ್ಲಾ" ಎಂಬಾತ ಎಲ್ಲಾ ನಿರ್ವಾಹಕರು, ಚಾಲಕರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮೃತ ನಿರ್ವಾಹಕ ತನ್ನ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ತಾನು ಡಿಪೋದಲ್ಲೇ ನೇಣು ಹಾಕಿಕೊಂಡು ಸಾಯುವ ಮೂಲಕ ಇತರೆ ನಿರ್ವಾಹಕರು, ಚಾಲಕರಿಗೆ ಆಗುವ ಕಿರುಕುಳ ತಪ್ಪಬೇಕೆಂದು ಅವರು ಬಯಸಿದ್ದರೆಂದು ಸಹೋದ್ಯೋಗಿಯೊಬ್ಬರು ಅಭಿಪ್ರಾಯಪಟ್ಟರು.