ದಾವಣಗೆರೆ: ಕಡಿಮೆ ದರಕ್ಕೆ ಮೆಕ್ಕಾ ಯಾತ್ರೆ ಮಾಡಿಸುವುದಾಗಿ ಹೇಳಿ ಟೂರಿಸ್ಟ್ ಏಜೆನ್ಸಿಯಿಂದ ದೋಖಾ

ಕಡಿಮೆ ದರದಲ್ಲಿ ಮದೀನಾ ಯಾತ್ರೆ ಮಾಡಿಸುವುದಾಗಿ ಕರೆದೊಯ್ದು ಟೂರಿಸ್ಟ್ ಏಜೆನ್ಸಿಯೊಂದು ಯಾತ್ರಿಕರನ್ನು ವಂಚಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನೀಫ್ ಇಂಟರ್ ನ್ಯಾಷನಲ್ ಟೂರ್ಸ್ ಅ್ಯಂಡ್ ಟ್ರಾವೆಲ್ಸ್
ಹನೀಫ್ ಇಂಟರ್ ನ್ಯಾಷನಲ್ ಟೂರ್ಸ್ ಅ್ಯಂಡ್ ಟ್ರಾವೆಲ್ಸ್
ದಾವಣಗೆರೆ: ಕಡಿಮೆ ದರದಲ್ಲಿ ಮದೀನಾ ಯಾತ್ರೆ ಮಾಡಿಸುವುದಾಗಿ ಕರೆದೊಯ್ದು ಟೂರಿಸ್ಟ್ ಏಜೆನ್ಸಿಯೊಂದು ಯಾತ್ರಿಕರನ್ನು ವಂಚಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ 82 ಯಾತ್ರಾರ್ಥಿಗಳನ್ನು ಕೇವಲ 35 ಸಾವಿರ ರೂ. ಗೆ ಮದೀನಾ ತೋರಿಸುವುದಾಗಿ ಕರೆದೊಯ್ದ ಅಲ್ಲಿನ ಹನೀಫ್ ಇಂಟರ್ ನ್ಯಾಷನಲ್ ಟೂರ್ಸ್ ಅ್ಯಂಡ್ ಟ್ರಾವೆಲ್ಸ್, ಯಾತ್ರಾರ್ಥಿಗಳನ್ನು ಮದೀನಾದಲ್ಲೇ ಬಿಟ್ಟು ಪರಾರಿಯಾಗಿದೆ.
ಭಾರತಕ್ಕೆ ಹಿಂದಿರುಗಲಾಗದೇ ಮದೀನಾದಲ್ಲಿ ಸಿಲುಕಿಕೊಂಡಿರುವರಿಂದ ವಿಡಿಯೋ ಒಂದು ವೈರಲ್ ಆಗಿದೆ. ಕಳೆದ ಜೂನ್ 19 ರಂದು ಮದೀನಾಕ್ಕೆ ತೆರಳಿದ್ದ ಇವರೆಲ್ಲರೂ ಜುಲೈ 3 ಕ್ಕೆಭಾರತಕ್ಕೆ ವಾಪಸ್ಸಾಗಬೇಕಿತ್ತು. ಆದರೆ, ಅವರನ್ನು ಹೋಟೆಲ್ ನಲ್ಲಿ ಬಿಟ್ಟು ಪರಾರಿಯಾಗಿದೆ ಏಜೆನ್ಸಿ. 
ಸಾಮಾನ್ಯವಾಗಿ ಉಮ್ರಾ ಯಾತ್ರೆಗೆ ಒಬ್ಬರಿಗೆ ಐವತ್ತರಿಂದ ಅರವತ್ತು ಸಾವಿರ ರು. ವೆಚ್ಚವಾಗಲಿದೆ. ಆದರೆ ಇಷ್ಟು ಕಡಿಮೆ ಬೆಲೆ ಯಾತ್ರೆ ಮಾಡಿಸುವುದಾಗಿ ಹೇಳಿದ್ದ ಸಂಸ್ಥೆಯನ್ನು ನಂಬಿ ಜನರು ಮೋಸ ಹೋಗಿದ್ದಾರೆ. 
ಇದೀಗ ಬೈತುಲ್ ಹರಮ್ ಇಂಟರ್ ನ್ಯಾಷನಲ್ ತೂರಿಸ್ಟ್ ಸಂಸ್ಥೆಗೆ ಕರೆ ಮಾಡಿದ್ದರೆ ನಮ್ಮಲ್ಲಿ ಮದೀನಾಗೆ ತೆರಳಲು ಂಆತ್ರವೇ ಬುಕ್ ಮಾಡಲಾಗಿದೆ, ಅಲ್ಲಿಂದ ಹಿಂದಿರುಗಲು ಇಲ್ಲ ಎಂದು ಕೈಚೆಲ್ಲಿದೆ.ಪ್ರವಾಸಿ ತಂಡದೊಡನೆ ಆಗಮಿಸಿದ್ದ ಖಾರಿ ತನ್ವೀರ್ ಎಂಬ ಗೈಡ್ ತಾವೊಬ್ಬರೇ ಭಾರತಕ್ಕೆ ವಾಪಾಸಾಗಿದ್ದಾರೆ. ಈಗ ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ.
"ಮೆಕ್ಕಾದಲ್ಲಿ ಹೋಟೆಲ್ ನಿಂದಲೂ ನಮ್ಮನ್ನು ಹೊರಹಾಕಲಾಗಿದೆ, ಊಟಕ್ಕೂ ದುಡ್ಡಿಲ್ಲ, ಬೀದಿಗೆ ಬಿದ್ದ ಸ್ಥಿತಿಯಾಗಿದೆ, ಹಿಂದಿರುಗಲು ಟಿಕೆಟ್ ಇಲ್ಲ, ನಮಗೆ ಸರ್ಕಾರ ಸಹಾಯ ಮಾಡಬೇಕಿದೆ" ವೀಡಿಯೋ ಸಂದೇಶದಲ್ಲಿ ಯಾತ್ರಿಯೊಬ್ಬರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com