ರಾಜೀನಾಮೆ ಬೆನ್ನಲ್ಲೇ ಬೇಗ್ ಗೆ ಸಂಕಷ್ಟ: ಐಎಂಎ ವಿಚಾರಣೆಗೆ ಹಾಜರಾಗಲು ಎಸ್‍ಐಟಿ ನೋಟಿಸ್

ಶಿವಾಜಿನಗರ ಶಾಸಕ ರೊಷನ್ ಬೇಗ್ ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಈ ರಾಜೀನಾಮೆ ಬೆನ್ನಲ್ಲೇ ಅವರಿಗೆ ಇನ್ನೊಂದು ಸಂಕಷ್ತ ಎದುರಾಗಿದೆ.
ರಾಜೀನಾಮೆ ಬೆನ್ನಲ್ಲೇ ಬೇಗ್ ಗೆ ಸಂಕಷ್ಟ: ಐಎಂಎ ವಿಚಾರಣೆಗೆ ಹಾಜರಾಗಲು ಎಸ್‍ಐಟಿ ನೋಟಿಸ್
ರಾಜೀನಾಮೆ ಬೆನ್ನಲ್ಲೇ ಬೇಗ್ ಗೆ ಸಂಕಷ್ಟ: ಐಎಂಎ ವಿಚಾರಣೆಗೆ ಹಾಜರಾಗಲು ಎಸ್‍ಐಟಿ ನೋಟಿಸ್
ಬೆಂಗಳೂರು: ಶಿವಾಜಿನಗರ ಶಾಸಕ ರೊಷನ್ ಬೇಗ್ ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಈ ರಾಜೀನಾಮೆ ಬೆನ್ನಲ್ಲೇ ಅವರಿಗೆ ಇನ್ನೊಂದು ಸಂಕಷ್ತ ಎದುರಾಗಿದೆ. 
ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿ ಎನ್ನಲಾಗಿರುವ ರೋಷನ್ ಬೇಗ್ ಗುರುವಾರ ವಿಚಾರಣೆಗೆ ಹಾಜರಾಗಬೇಕೆಂದು ಎಸ್‍ಐಟಿ ನೋಟಿಸ್ ನೀಡಿದೆ. 
ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿ ಹಲವರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಸುದ್ದಿಯಾಗಿದ್ದ ರೋಷನ್ ಬೇಗ್ ಅವರನ್ನು ಕೈ ಪಕ್ಷ ಉಚ್ಚಾಟನೆ ಮಾಡಿತ್ತು. ಆದರೆ ಇಂದು ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ರೊಷನ್ ಬೇಗ್ ರಾಜೀನಾಮೆ ನಿಡಿದ ಬೆನ್ನಲ್ಲೇ ಎಸ್‍ಐಟಿ ನೋಟಿಸ್ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಸರ್ಕಾರದ ವಿರುದ್ಧ ತಿರುಗಿ ಬಿದ್ದ ರೋಷನ್ ಬೇಗ್ ಮೇಲೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಐಎಂಎ ಅಸ್ತ್ರ ಪ್ರಯೋಗಿಸುತ್ತಿದೆಯೆ ಎಂಬ ಅನುಮಾನ ಮೂಡಿದೆ.
ಇನ್ನು ಕೆಲವು ದಿನಗಳ ಹಿಂದೆ ಚಿವ ಜಮೀರ್ ಅಹ್ಮದ್ ಸಹ ಎಸ್‍ಐಟಿ ವಿಚಾರಣೆಗೆ ಹಾಜರಾಗಿ ಸಾವಿರಾರು ಕೋಟಿ ರು. ವಂಚನೆಯ ಐಎಂಎ ಪ್ರಕರಣದ ತನಿಖೆಗೆ ಸಹಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com