ಮಂಗಳೂರು: ತಾಜ್ ಹೋಟೆಲ್ ಮುಖ್ಯಸ್ಥ ಮಾಧವ ಶೆಣೈ ವಿಧಿವಶ

ಕರಾವಳಿ ಭಾಗದ ಪ್ರಸಿದ್ದ ಹೊಟೆಲ್ ಸಮೂಹ ತಾಜ್ ಮಹಲ್ ಹೋಟೆಲ್ ಮುಖ್ಯಸ್ಥ ಕುಡ್ದಿ ಮಾಧವ ಶೆಣೈ (80) ವಿಧಿವಶರಾಗಿದ್ದಾರೆ.

Published: 14th July 2019 12:00 PM  |   Last Updated: 14th July 2019 12:02 PM   |  A+A-


Madhava Shenoy

ಕುಡ್ದಿ ಮಾಧವ ಶೆಣೈ

Posted By : RHN RHN
Source : Online Desk
ಮಂಗಳೂರು: ಕರಾವಳಿ ಭಾಗದ ಪ್ರಸಿದ್ದ ಹೊಟೆಲ್ ಸಮೂಹ ತಾಜ್ ಮಹಲ್ ಹೋಟೆಲ್ ಮುಖ್ಯಸ್ಥ ಕುಡ್ದಿ ಮಾಧವ ಶೆಣೈ (80) ವಿಧಿವಶರಾಗಿದ್ದಾರೆ. 

ಪಾಂಡೇಶ್ವರ ನಿವಾಸಿಯಾಗಿದ್ದ ಶೆಣೈ ಕಳೆದ ಅರವತ್ತು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಸಕ್ರಿಯರಾಗಿದ್ದರು.ಮಂಗಳುರಿನ ಹಂಪನಕಟ್ಟೆ ಹಾಗೂ ಕೊಡಿಯಾಲ್ ಬೈಲ್ ಗಳಲ್ಲಿ ಅವರ ಎರಡು ಹೋಟೆಲ್ ಗಳು ಇವೆ.

ಕೊಂಚಾಡಿ ವೆಂಕಟರಮಣ ದೇವಸ್ಥಾನ ಟ್ರಸ್ಟಿಯಾಗಿದ್ದ ಶೆಣೈ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದರು.

ಮೃತರಿಗೆ ಇಬ್ಬರು ಪುತ್ರಿಯರು, ಓರ್ವ ಪೌತ್ರ್ರಿದ್ದು ಅಪಾರ ಬಂಧು ಮಿತ್ರರಿದ್ದಾರೆ. ಶಣೈ ಅವರ ಅಂತ್ಯಸಾಂಸ್ಕಾರ ಭಾನುವಾರ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.
Stay up to date on all the latest ರಾಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp