ಬೆಂಗಳೂರು: ರಸಾಯನಿಕ ಮಿಶ್ರಿತ ನೀರನ್ನು ರಾಜ ಕಾಲುವೆಗೆ ಬಿಡುತ್ತಿದ್ದ ಚಾಲಕನನ್ನು ಪೋಲೀಸರಿಗೆ ಒಪ್ಪಿಸಿದ ದಿಟ್ಟ ಮಹಿಳೆ

ನಾಯಂಡಹಳ್ಳಿ ಸಮೀಪದ ರಾಜಕಾಲುವೆಗೆ ರಸಾಯನಿಕ ಮಿಶ್ರಿತ ನೀರು ಸೇರುವುದನ್ನು ತಡೆದ ಮಹಿಳೆ ಟ್ಯಾಂಕರ್ ಚಾಲಕನನ್ನು ಪೊಲೀಸರಿಗೆ ಹಿಡಿದು ಕೊಡುವಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಯಂಡಹಳ್ಳಿ ಸಮೀಪದ  ರಾಜಕಾಲುವೆಗೆ ರಸಾಯನಿಕ ಮಿಶ್ರಿತ ನೀರು ಸೇರುವುದನ್ನು ತಡೆದ ಮಹಿಳೆ ಟ್ಯಾಂಕರ್ ಚಾಲಕನನ್ನು ಪೊಲೀಸರಿಗೆ ಹಿಡಿದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಮೀಪದ ಕಾರ್ಖಾನೆಗಳಿಂದ  ರಸಾಯನಿಕ  ಮಿಶ್ರಿತ ನೀರನ್ನು ಟ್ಯಾಂಕರ್ ಗೆ ತುಂಬಿಸಿ ರಾಜಕಾಲುವೆಗೆ ಹರಿಯುವಂತೆ ಮಾಡಲು  ಕಾರ್ಖಾನೆಗಳೇ ಕಾರಣ ಎಂದು ಮಹಿಳೆ ಆರೋಪಿಸಿದ್ದಾರೆ.
ಭೀಮಪುತ್ರಿ ಬ್ರಿಗೇಡ್ ಮಹಿಳಾ ಸಂಘಟನೆ ಅಧ್ಯಕ್ಷೆ, ಬಿ.ಡ ರೇವತಿ ರಾಜ್ ನೀಡಿರುವ ದೂರಿನಲ್ಲಿ, ಪ್ರತಿದಿನ ತಾವು ಸಂಚರಿಸುವ ಮೈಸೂರು ರಸ್ತೆಯಲ್ಲಿ ಕೆಟ್ಟ ವಾಸನೆ ಬರುತ್ತಿತ್ತು. 
ಈ ಸಂಬಂಧ ಮೆಟ್ರೋ ಕೆಲಸಗಾರರನ್ನು ವಿಚಾರಿಸಿದಾಗ, ಟ್ಯಾಂಕರ್ ಒಂದು ಇಲ್ಲಿಗೆ ಬಂದು ಕೆಮಿಕಲ್ ನರನ್ನು ರಾಜಕಾಲುವೆಗೆ ಬಿಟ್ಟು ಹೋಗುತ್ತದೆ ಎಂದು  ಹೇಳಿದರು,  ಇದು ಜೂನ್ ತಿಂಗಳ ಕೊನೆಯ ವಾರದಲ್ಲಿ ನಡೆಯಿತು. 
ಹೀಗಾಗಿ ಕಳೆದ ಮೂರು ನಾಲ್ಕು ದಿನಗಳಿಂದ ರೇವತಿ ಮತ್ತವರ ಟೀಂ ಇದನ್ನು ಗಮನಿಸುತ್ತಿತ್ತು.  ಆದರೆ ಯಾವುದೇ ಟ್ಯಾಂಕರ್ ಬಂದಿರಲಿಲ್ಲ,ಜುಲೈ 5 ರಂದು ಬೆಳಗ್ಗೆ 3.30ಕ್ಕೆ ಟ್ಯಾಂಕರ್ ವೊಂದು ಬಂದಿತು, ಪೈಪ್ ಮೂಲಕ ಕಲುಷಿತ ನೀರನ್ನು ರಾಜ ಕಾಲುವೆಗೆ ಬಿಡಲು ಚಾಲಕ ಮುಂದಾದ.ಕೂಡಲೇ ರೇವತಿ ಮತ್ತುವರ ಟೀಂ ಸ್ಥಳಕ್ಕೆ ಬಂದರು. ವೇಳೆ ಚಾಲಕ ಪರಾರಿಯಾಗಲು ಯತ್ನಿಸಿದ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯನ್ನು ವಿಡಿಯೋ ಮಾಡಿದ್ದ ರೇವತಿ ಪೊಲೀಸರಿಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯವನ್ನು  ತಂದು ಬಿಡುತ್ತಿದ್ದುದ್ದಾಗಿ ಬಂಧಿತ ಚಾಲಕ ಕೃಷ್ಣ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com