ಭದ್ರಾವತಿ: ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆದ #SaveVISL ಅಭಿಯಾನ

ಶತಮಾನ ಕಂಡ ಕರ್ನಾಟಕದ ಹೆಮ್ಮೆಯ ಭದ್ರಾವತಿ ಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ಅನ್ನು ಖಾಸಗೀಕರಣಗೊಳಿಸುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಿರ್ಧಾರ ಅಲ್ಲಿನ ಉದ್ಯೋಗಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಕೆರಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶಿವಮೊಗ್ಗ: ಶತಮಾನ ಕಂಡ ಕರ್ನಾಟಕದ ಹೆಮ್ಮೆಯ ಭದ್ರಾವತಿ ಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ಅನ್ನು ಖಾಸಗೀಕರಣಗೊಳಿಸುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಿರ್ಧಾರ ಅಲ್ಲಿನ ಉದ್ಯೋಗಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಕೆರಳಿಸಿದೆ.
ಈ ಸಂಬಂದ್ಘ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಜನರು ಈ ಕ್ರಮವನ್ನು ವಿರೋಧಿಸಿ ಆನ್‌ಲೈನ್ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿಗೆ ಶರಾವತಿ ನೀರನ್ನು ಸರಬರಾಜು ಮಾಡುವುದನ್ನು ವಿರೋಧಿಸಿ #SaveSharavathi  ಅಭಿಯಾನ ವೈರಲ್ ಆದ ಬಳಿಕ #SaveVISL ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಈಗ #SaveVISL ಟ್ರೆಂಡಿಂಗ್ ಆಗಿದೆ.
ವಿಐಎಸ್ಎಲ್ ಕಾರ್ಬನ್, ಫ್ರೀ-ಕಟಿಂಗ್ ಸ್ಟೀಲ್ ಮತ್ತು ಗಟ್ಟಿಯಾದ, ದೀರ್ಘಬಾಳಿಕೆಯ ಉಕ್ಕು ಸೇರಿದಂತೆ ಉತ್ತಮ ಗುಣಮಟ್ಟದ ಮಿಶ್ರಲೋಹ ಮತ್ತು ವಿಶೇಷ ಉಕ್ಕಿನ ಉತ್ಪಾದನೆಯಲ್ಲಿ ಪ್ರವರ್ತಕ ಎನಿಸಿದೆ.ಮಹಾರಾತ್ನ ಸಾರ್ವಜನಿಕ ವಲಯದ ಉಕ್ಕಿನ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ, ಐದು ಸಮಗ್ರ ಉಕ್ಕಿನ ಸ್ಥಾವರಗಳು, ಫೆರೋ-ಮಿಶ್ರಲೋಹ ಸ್ಥಾವರ ಮತ್ತು ಮೂರು ವಿಶೇಷ ಉಕ್ಕಿನ ಸ್ಥಾವರಗಳನ್ನು ಹೊಂದಿದೆ. ಎಸ್‌ಐಎಲ್ ಹೊಂದಿರುವ ಅನೇಕ ಕಾರ್ಖಾನೆಗಳಲ್ಲಿ ವಿಐಎಸ್ಎಲ್ ಒಂದಾಗಿದೆ. ಆದರೆ ಈಗ ವಿಐಎಸ್ಎಲ್ ಖಾಸಗೀಕರಣ ಎಂಬ ದೊಡ್ಡ ಅಡಕತ್ತರಿಯಲ್ಲಿ ಸಿಕ್ಕಿದೆ.ಏಕೆಂದರೆ ಎಸ್‌ಐಎಲ್ ‘ವಿಐಎಸ್‌ಎಲ್‌ನ ಲ್ಲಿ ಹೆಚ್ಚುವರಿ ಹೂಡಿಕೆಗಾಗಿ ಖಾಸಗಿಯವರಿಂದ ಟೆಂಡರ್ ಆಹ್ವಾನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com