ಶೀಘ್ರವೇ ಮನೆ ಬಾಗಿಲಿಗೆ ಬರಲಿದೆ ದಂತ ಚಿಕಿತ್ಸಾ ಸೇವೆ: ಹಿರಿಯ ನಾಗರಿಕರಿಗೆ ಸಿಗಲಿದೆ ಉಚಿತ 'ಹಲ್ಲಿನ ಸೆಟ್'

ಹಳ್ಳಿಗಳಲ್ಲಿ ವಾಸಿಸುವ ನಾಗರಿಕರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರದ ದಂತಭಾಗ್ಯ ಯೋಜನೆಯಡಿ ದಂತ ಚಿಕಿತ್ಸೆ ಸೇವೆ ನಿಮ್ಮ ಮನೆ ಬಾಗಿಲಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಳ್ಳಿಗಳಲ್ಲಿ ವಾಸಿಸುವ ನಾಗರಿಕರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರದ ದಂತಭಾಗ್ಯ ಯೋಜನೆಯಡಿ ಹಲ್ಲಿನ ಆರೋಗ್ಯ ಸೇವೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ, ಅದು ಕೂಡ ನಿಮಗೆ ಅನುಕೂಲವಾಗುವ ಸಮಯಕ್ಕೆ ಸೇವೆ ನಿಮಗೆ ತಲುಪಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಆರಂಬಿಸಿದ್ಧ ದಂತಭಾಗ್ಯ ಯೋಜನೆ ಮುಂದುವರಿದ ಭಾಗವಾಗಿ, ಗ್ರಾಮೀಣ ಭಾಗದಲ್ಲಿ ನಡೆಸುವ ಡೆಂಟಲ್ ಕ್ಯಾಂಪ್ ನಲ್ಲಿ ಗ್ರಾಮಸ್ಥರು ತಮ್ಮ ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
2014ರ ಡಿಸೆಂಬರ್ ನಲ್ಲಿ ಈ ಯೋಜನೆ ಆರಂಭಿಸಲಾಯಿತು, ಬಡತನ ರೇಖೆಗಿಂತ ಕೆಳಗಿರುವ 30 ಸಾವಿರ ಕುಟುಂಬಗಳಿಗೆ ದಂತಭಾಗ್ಯ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದೆ.
ಆದರೆ 2015-16 ರಲ್ಲಿ 1,600 ಮಂದಿ ಜನರನ್ನು ಮಾತ್ರ ತಲುಪಲು ಸಾಧ್ಯವಾಯಿತು, ಅದಾದ ನಂತರ ಪ್ರತಿ ವರ್ಷ ಸಂಖ್ಯೆ ಹೆಚ್ಚಾಗಿ 5,550 ತಲುಪಿದೆ, ಆದರೆ 5 ವರ್ಷಗಳಲ್ಲಿ  ಯೋಜನೆ ಸೌಲಭ್ಯ ದೊರಕಿದ್ದು ಕೇವಲ 17 ಸಾವಿರ ಮಂದಿಗೆ ಮಾತ್ರ.
ಹೀಗಾಗಿ ಆರೋಗ್ಯ ಇಲಾಖೆ ಖಾಸಗಿಯವರ ಸಹಭಾಗಿತ್ವದಲ್ಲಿ ಜನರಿಗೆ ಈ ಯೋಜನೆ ತಲುಪಿಸಲು ಮುಂದಾಗಿದೆ. ಹಿರಿಯ ನಾಗರಿಕರಿಗೆ ಈ ಸೇವೆಯ ಅವಶ್ಯಕತೆ ಹೆಚ್ಚಾಗಿದ್ದು. ಎಲ್ಲಾ ಜಿಲ್ಲೆಗಳಲ್ಲಿರುವ ದಂತ ವೈದ್ಯಕೀಯ ಕಾಲೇಜುಗಳ ಮೂಲಕ ಕ್ಯಾಂಪ್ ನಡೆಸುವುದಾಗಿ ಆರೋಗ್ಯ ಇಲಾಖೆಯ ದಂತ ವಿಭಾಗದ ಉಪ ನಿರ್ದೇಶಕಿ ಡಾ.ಪರಿಮಳಾ ಹೇಳಿದ್ದಾರೆ.
ಹಲ್ಲಿನ ಚಿಕಿತ್ಸೆಯನ್ನು ಒಂದೇ ಬಾರಿಗೆ ನೀಡಲು ಸಾಧ್ಯವಿಲ್ಲ ನಾಲ್ಕು ಐದು ಸಿಟ್ಟಿಂಗ್ ಆಗಬೇಕು,. ಅವರು ಹಿರಿಯ. ನಾಗರಿಕರು, ಅವರ ಜೊತೆಗೆ ಕುಟುಂಬದ ಸದಸ್ಯರಿರುತ್ತಾರೆ, ಹೀಗಾಗಿ ಇದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ. ಎಂದು ಹೇಳಿದ್ದಾರೆ.
ಹೀಗಾಗಿ ಗ್ರಾಮಗಳಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸಿದರೇ ಅವರಿಗೆ ಉಪಯೋಗವಾಗುತ್ತದೆ, ರಾಜ್ಯದಲ್ಲಿ ಒಟ್ಟು  2 ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಹಾಗೂ 43 ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಿವೆ, ಎರಡರ ಸಹಭಾಗಿತ್ವದಲ್ಲಿ ಶಿಬಿರ ಆಯೋಜಿಸಲು  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಹಲ್ಲಿನ ಸೆಟ್ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com