ಚಿಕ್ಕಮಗಳೂರಿನಲ್ಲಿ ಪರವಾನಗಿ ಗನ್ ಗಳ ದುರ್ಬಳಕೆ; ಕಾಡು ಪ್ರಾಣಿಗಳ ಬೇಟೆಗೆ ಬಳಕೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಸ್ವರಕ್ಷಣೆಗೆ ಗನ್, ಶಸ್ತ್ರಾಸ್ತ್ರಗಳ ಪರವಾನಗಿ ಪಡೆದುಕೊಂಡವರು ...

Published: 16th July 2019 12:00 PM  |   Last Updated: 16th July 2019 10:55 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಸ್ವರಕ್ಷಣೆಗೆ ಗನ್, ಶಸ್ತ್ರಾಸ್ತ್ರಗಳ ಪರವಾನಗಿ ಪಡೆದುಕೊಂಡವರು ಪಕ್ಕದ ಜಿಲ್ಲೆಗಳಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಮೊನ್ನೆ ಭಾನುವಾರ ಕಾಡುಹಂದಿಯನ್ನು ಐವರು ಬೇಟೆಯಾಡಿದ್ದಾರೆ. 15 ಕೆಜಿ ಕಾಡುಹಂದಿಯ ಮಾಂಸದೊಂದಿಗೆ ಅರಣ್ಯಾಧಿಕಾರಿಗಳು ಐವರನ್ನು ಬಂಧಿಸಿ ಅವರ ಬಳಿಯಿಂದ ಶಸ್ತ್ರಾಸ್ತ್ರ ಮತ್ತು ರಿವಾಲ್ವರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಈಶ್ವರ್, ಪ್ರತಾಪ್ ಗೌಡ, ರಾಕೇಶ್, ಹೆಚ್ ಎನ್ ದಿಲೀಪ್ ಮತ್ತು ಕೃಷ್ಣೇಗೌಡ ಎಂದು ಗುರುತಿಸಲಾಗಿದ್ದು, 10 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp