ಮೆಡಿಕಲ್ ಕೋರ್ಸ್ ಮುಗಿಸಿದ ವೈದ್ಯರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯ: ಸಚಿವ ತುಕಾರಾಮ್‌

ರಾಜ್ಯದಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮುಗಿಸಿದ ವೈದ್ಯರು ಒಂದು ವರ್ಷದ ಅವಧಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ್ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ್
ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ್
ಬೆಂಗಳೂರು : ರಾಜ್ಯದಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮುಗಿಸಿದ ವೈದ್ಯರು ಒಂದು ವರ್ಷದ ಅವಧಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ್ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿಂದು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಯಮ ಮೀರಿದಲ್ಲಿ ಅಂತಹ ವೈದ್ಯ ವಿದ್ಯಾರ್ಥಿಗಳು ಹತ್ತು ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದರು.
ಕಡ್ಡಾಯ ಗ್ರಾಮೀಣ ಸೇವೆಗೆ ಸಂಬಂಧಿಸಿದಂತೆ ಈವರೆಗೆ ಮುಚ್ಚಳಿಕೆ ಬರೆದುಕೊಟ್ಟು ಅದನ್ನು ಉಲ್ಲಂಘಿಸಿರುವ ವೈದ್ಯರ ವಿರುದ್ಧ ದಂಡ ವಸೂಲು ಮಾಡಲು ನ್ಯಾಯಾಲಯದಲ್ಲಿ ದಾವೆ ಹೂಡಲು ಸರ್ಕಾರ ನಿರ್ಧರಿಸಿದೆ. ದಂಡದ ಮೊತ್ತದ ಶೇ 10 ರಷ್ಟನ್ನು ನ್ಯಾಯಾಲದ ಶುಲ್ಕವಾಗಿ ಕಟ್ಟಬೇಕಾಗಿದ್ದು ಇದು ಅಂದಾಜು ಎಂಟರಿಂದ ಹತ್ತು ಕೋಟಿ ರೂಪಾಯಿ ಆಗಬಹುದು ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com