ಪುತ್ತೂರು: ಆಂಬ್ಯುಲೆನ್ಸ್ ಮತ್ತು ಟೆಂಪೊ ನಡುವೆ ಢಿಕ್ಕಿ, ಮಹಿಳೆ ಮೃತ್ಯು, ಮೂವರಿಗೆ ಗಾಯ

ಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್ ಗೆ ಟೆಂಪೋ ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ವಿಟ್ಲ ಸಮೀಪ ಮಿತ್ತೂರಿನಲ್ಲಿ ನಡೆದಿದೆ.

Published: 17th July 2019 12:00 PM  |   Last Updated: 17th July 2019 02:42 AM   |  A+A-


ಆಂಬ್ಯುಲೆನ್ಸ್ ಮತ್ತು ಟೆಂಪೊ ನಡುವೆ ಢಿಕ್ಕಿ, ಮಹಿಳೆ ಮೃತ್ಯು, ಮೂವರಿಗೆ ಗಾಯ

Posted By : RHN RHN
Source : Online Desk
ಪುತ್ತೂರು: ಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್ ಗೆ ಟೆಂಪೋ ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ವಿಟ್ಲ ಸಮೀಪ ಮಿತ್ತೂರಿನಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ನಡೆದ ಘಟನೆಯಲ್ಲಿ ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಅಪಘಾತ ನಡೆದಿದ್ದು ಏಮಾಜೆ ನಿವಾಸಿ ವಾಮನ ನಾಯ್ಕ ಎಂಬವರ ಪತ್ನಿ ಪಾರ್ವತಿ ಎನ್ನುವವರು ಮೃತಪಟ್ಟಿದ್ದಾರೆ.

ಅನಾರೋಗ್ಯದ ಕಾರಣ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಮನ ನಾಯ್ಕ ಅವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳುರಿಗೆ ಕರೆದಿಯ್ಯುತ್ತಿದ್ದಾಗ ಮಿತ್ತೂರು ಸಮೀಪದ ಪರ್ಲೊಟ್ಟು ವಿನಲ್ಲಿ ಎದುರಿನಿಂದ ಬಂದ ಟೆಂಪೋ ಅಂಬ್ಯುಲೆನ್ಸ್ ಗೆ ಡಿಕ್ಕಿಯಾಗಿದೆ.

ಅಪಘಾತದ ಕಾರಣ ಅಂಬ್ಯುಲೆನ್ಸ್ ಪಲ್ಟಿಯಾಗಿ ಪಕ್ಕದ ಕಮರಿಗೆ ಬಿದ್ದಿದೆ.ಆ ವೇಳೆ ಪಾರ್ವತಿ ತಿ ಸ್ಥಳದಲ್ಲೇ ಮೃತಪಟ್ಟರೆ ರೋಗಿ ವಾಮನ ನಾಯ್ಕ ಸೇರಿ ಮೂವರು ಗಾಯಗೊಂಡಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp