ಅಯ್ಯೋ ದೇವರೆ ಎಂಥ ಹೀನ ಕೃತ್ಯ ಮಾಡಿದ್ದಾರೆ: ಸರ್ವನಾಶವಾಗುತ್ತೆ ಈ ಕೃತ್ಯ ಮಾಡಿದವರ ವಂಶ; ಜಗ್ಗೇಶ್ ಟ್ವೀಟ್

ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ ವಂಶ ಸರ್ವನಾಶ ಆಗುತ್ತದೆ. ನಮ್ಮ ಶ್ರೇಷ್ಠವಾದ ಸನಾತನ ಗುರುಪರಂಪರೆಗೆ ಕೈ ಹಾಕಿದ್ದಾರೆ. ...

Published: 18th July 2019 12:00 PM  |   Last Updated: 18th July 2019 01:40 AM   |  A+A-


Jaggesh

ಜಗ್ಗೇಶ್

Posted By : SD SD
Source : Online Desk
ಬೆಂಗಳೂರು: ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ ವಂಶ ಸರ್ವನಾಶ ಆಗುತ್ತದೆ. ನಮ್ಮ ಶ್ರೇಷ್ಠವಾದ ಸನಾತನ ಗುರುಪರಂಪರೆಗೆ ಕೈ ಹಾಕಿದ್ದಾರೆ. ಇಂಥ ಪಾಪಿಗಳಿಗೆ ಕ್ಷಮೆಯೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕೊಪ್ಪಳದ ಆನೆಗೊಂದಿ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳ ದುಷ್ಕೃತ್ಯವನ್ನು ನಟ ನವರಸನಾಯಕ ಜಗ್ಗೇಶ್​ ತೀವ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಜಗ್ಗೇಶ್, ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ ವಂಶ ಸರ್ವನಾಶ ಆಗುತ್ತದೆ. ನಮ್ಮ ಶ್ರೇಷ್ಠವಾದ ಸನಾತನ ಗುರುಪರಂಪರೆಗೆ ಕೈ ಹಾಕಿದ್ದಾರೆ. ಇಂಥ ಪಾಪಿಗಳಿಗೆ ಕ್ಷಮೆಯೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಧ್ವಂಸ ಸ್ಥಳದ ಪುನರ್​ನಿರ್ಮಾಣಕ್ಕೆ ಹ್ಯಾಶ್​ ಟ್ಯಾಗ್​ ಮಾಡಿ ಒತ್ತಾಯ ಮಾಡಿ. ಈ ನಿಟ್ಟಿನಲ್ಲಿ ಅಭಿಯಾನ ಶುರುವಾಗಲಿ ಎಂದು ಜಗ್ಗೇಶ್​ ಕರೆ ನೀಡಿದ್ದಾರೆ.

ತುಂಗಾನದಿ ತಟದಲ್ಲಿರುವ ವ್ಯಾಸರಾಯರ ಬೃಂದಾವನ ಸೇರಿ ಒಟ್ಟು ಒಂಭತ್ತು ಬೃಂದಾವನದ ಸ್ಥಳವನ್ನು ಕಿಡಿಗೇಡಿಗಳು ನಿಧಿಯ ಆಸೆಗಾಗಿ ಕಂಬಗಳನ್ನು ಕಿತ್ತು, ಗುಂಡಿ ತೋಡಿ ವಿರೂಪಗೊಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp