ಬೆಂಗಳೂರು ವಿಶ್ವವಿದ್ಯಾಲಯದ 77 ಕಾಲೇಜುಗಳು ಕಪ್ಪು ಪಟ್ಟಿಗೆ, 5 ಸಾವಿರ ವಿದ್ಯಾರ್ಥಿಗಳಿಗೆ ಆತಂಕ!

ಕಾಲೇಜ್ ಆಡಳಿತಾಧಿಕಾರಿಗಳು ಮಾಡಿದ ತಪ್ಪಿಗೆ ನಗರದ 80 ಕಾಲೇಜುಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳು ಬೆಲೆ ತೆತ್ತಬೇಕಾಗಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕದ ರಶೀದಿ ಸಲ್ಲಿಕೆ ಮಾಡದ ಕಾರಣ 77ಕ್ಕೂ ಹೆಚ್ಚು ಕಾಲೇಜುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಕಪ್ಪು ಪಟ್ಟಿಗೆ ಸೇರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾಲೇಜ್ ಆಡಳಿತಾಧಿಕಾರಿಗಳು ಮಾಡಿದ ತಪ್ಪಿಗೆ ನಗರದ 80 ಕಾಲೇಜುಗಳ  ಸುಮಾರು 5 ಸಾವಿರ ವಿದ್ಯಾರ್ಥಿಗಳು ಬೆಲೆ ತೆತ್ತಬೇಕಾಗಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕದ ರಶೀದಿ ಸಲ್ಲಿಕೆ ಮಾಡದ ಕಾರಣ 77ಕ್ಕೂ ಹೆಚ್ಚು ಕಾಲೇಜುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಕಪ್ಪು ಪಟ್ಟಿಗೆ ಸೇರಿಸಿದೆ.
ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕವಾಗಿ ಸಂಗ್ರಹಿಸಲಾಗುವ 30 ಲಕ್ಷ ಹಣದ ವೆಚ್ಚದ ಬಗ್ಗೆ ವಿಶ್ವವಿದ್ಯಾಲಯವನ್ನು ಹಿಂದಿನ ಸರ್ಕಾರ ದೂಷಿಸಿತ್ತು. ಈಗ ಮತ್ತೆ  ಶುಲ್ಕವನ್ನು ಸಂಗ್ರಹಿಸುತ್ತಿದ್ದು,  ಜುಲೈ 18ಕ್ಕೆ ಗಡುವನ್ನು ನೀಡಿದೆ. 
ಬಿಎ, ಬಿಎಸ್ ಸಿ, ಬಿಕಾಂ, ಬಿಬಿಎ, ಬಿಸಿಎ, ಬಿವಿಎ, ಬಿಎಸ್ಸಿ, ಮತ್ತಿತತರ ಕೋರ್ಸ್ ಗಳಲ್ಲಿ ಎರಡನೇ ಹಾಗೂ ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ  2018-19 ನೇ ಸಾಲಿನ ಬಿಹೆಚ್ ಎಂ ಸಾಲಿಗೆ ಸೇರ್ಪಡೆಯಾಗಿರುವ ದ್ವಿತಿಯೀ, ತೃತೀಯ ಹಾಗೂ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ಮಾಹಿತಿ ಸಲ್ಲಿಸುವಂತೆ ಈ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ. 
ಅಲ್ಲದೇ ಜುಲೈ 18ರೊಳಗೆ ಕಾಲೇಜುಗಳು ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕ ಪಾವತಿ ರಶೀದಿಗಳನ್ನು ಸಲ್ಲಿಸಬೇಕು ತಪ್ಪಿದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯೊಳಗೆ ನಡೆಯುವ ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಕಾಲೇಜುಗಳು 10 ಸಾವಿರ ರೂಪಾಯಿ ದಂಡ ನೀಡಬೇಕೆಂದು ಸೂಚಿಸಲಾಗಿದೆ. 
2018ರಲ್ಲಿ ಬೆಂಗಳೂರು ವಿವಿ ವಿಭಜನೆಯಾದ ನಂತರ ಈ ಕಾಲೇಜುಗಳು ಈಗ ಬೆಂಗಳೂರು ಕೇಂದ್ರ ವಿವಿ ಹಾಗೂ ಉತ್ತರ ವಿವಿ ವ್ಯಾಪ್ತಿಗೆ ಬರಲಿದ್ದು, ಈ 77 ಕಾಲೇಜುಗಳಲ್ಲಿ ಬಹುತೇಕ ಖಾಸಗಿಯಾಗಿದ್ದು, ಮುಂಗಡಾಗಿ ಶುಲ್ಕ ಸಂಗ್ರಹಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com