ಬರ ಪೀಡಿತ ತಾಲ್ಲೂಕುಗಳ ಘೋಷಣೆ ಏಕೆ ಮಾಡಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಕಳೆದ ವರ್ಷ ಡಿಸೆಂಬರ್ ನಲಲಿ ಘೋಷಿಸಲಾದ ರಾಜ್ಯದ 156 ತಾಲ್ಲೂಕುಗಳು ಬರಗಾಲಪೀಡಿತ ಎಂದು ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ನಲಲಿ ಘೋಷಿಸಲಾದ ರಾಜ್ಯದ 156 ತಾಲ್ಲೂಕುಗಳು ಬರಗಾಲಪೀಡಿತ ಎಂದು ಘೋಷಿಸಿದ ಅಧಿಸೂಚನೆಯ ಅವಧಿ ಮುಗಿದಿದ್ದರೂ ಈ ವರ್ಷ ಬರಗಾಲಪೀಡಿತ ತಾಲ್ಲೂಕುಗಳ ಘೋಷಣೆಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಲಿಲ್ಲವೇಕೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಹೆಚ್ ಟಿ ನರೇಂದ್ರ ಪ್ರಸಾದ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಹಿಂದೆ ಹೊರಡಿಸಿದ್ದ ಅಧಿಸೂಚನೆಯ ಅವಧಿ ಜೂನ್ 28ಕ್ಕೆ ಮುಗಿದಿದೆ ಎಂದು ಸರ್ಕಾರದ ಪರ ವಕೀಲರು ಕೋರ್ಟ್ ಗೆ ತಿಳಿಸಿದ ಬಳಿಕ ಈ ಪ್ರಶ್ನೆಯನ್ನು ಮುಂದಿಟ್ಟಿದೆ.
ಬರಗಾಲಪೀಡಿತ ತಾಲ್ಲೂಕುಗಳ ಘೋಷಣೆಗೆ ವಿಳಂಬ ಮಾಡುತ್ತಿರುವುದೇಕೆ? ಜೂನ್ 28ರ ನಂತರ ಬರಗಾಲ ಇಲ್ಲ ಎಂಬುದು ಸರ್ಕಾರದ ನಿಲುವೇ ಎಂದು ನ್ಯಾಯಾಲಯ ಸರ್ಕಾರಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತು. ಜಾನುವಾರುಗಳನ್ನು ಬರಗಾಲದಿಂದ ಕಾಪಾಡಬೇಕು ಇದಕ್ಕೆ ಸರ್ಕಾರಕ್ಕೆ ಸೂಕ್ತ ಆದೇಶ ಹೊರಡಿಸಬೇಕೆಂದು ಮಲ್ಲಿಕಾರ್ಜುನ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಆಗಸ್ಟ್ ತಿಂಗಳು ಅಷ್ಟೊಂದು ಪ್ರಾಮುಖ್ಯತೆ ಏಕೆ ಎಂದು ಪ್ರಶ್ನಿಸಿತು.
ರಾಜ್ಯದ 65 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಪ್ರತಿ ತಾಲ್ಲೂಕಿನಲ್ಲಿ ಒಂದು ಜಾನುವಾರು ಶಿಬಿರಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ನ್ಯಾಯಾಲಯ ಸರ್ಕಾರಿ ಪರ ವಕೀಲರಿಗೆ ಆದೇಶ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com