ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ತಿರಸ್ಕರಿಸಿದ ರಂಗಕರ್ಮಿ ರಘುನಂದನ

ದೇವರ ಮತ್ತು ಧರ್ಮದ ಹೆಸರಿನಲ್ಲಿ ಹಿಂಸಾಕೃತ್ಯ, ಗುಂಪು ಹತ್ಯೆ, ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ...
ರಘುನಂದನ
ರಘುನಂದನ
ಬೆಂಗಳೂರು: ದೇವರ ಮತ್ತು ಧರ್ಮದ ಹೆಸರಿನಲ್ಲಿ ಹಿಂಸಾಕೃತ್ಯ, ಗುಂಪು ಹತ್ಯೆ, ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ವಿರೋಧಿಸಿ ಖ್ಯಾತ ರಂಗಕರ್ಮಿ ರಘುನಂದನ್ ನಾಟಕ ಅಕಾಡೆಮಿ ಪ್ರಶಸ್ತಿ ತಿರಸ್ಕರಿಸಿದ್ದಾರೆ.
ದೇಶದಲ್ಲಿ ಪ್ರಜ್ಞಾವಂತ ಮುಗ್ಧ ಜನರ ಮೇಲೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ರಘುನಂದನ್ ಹೇಳಿದ್ದಾರೆ.
ನನ್ನ ಆತ್ಮಸಾಕ್ಷಿ, ನನ್ನ ಅಂತರ್ಯಾಮಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಅನುಮತಿ ನೀಡುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿ ಮೇಲೆ ನನಗೆ ಗೌರವವಿದೆ. ಈ ಹಿಂದೆ ಮತ್ತು ಈಗ ಪ್ರಶಸ್ತಿ ಸ್ವೀಕರಿಸುವವರನ್ನು ಸಹ ನಾನು ಗೌರವದಿಂದಲೇ ನೋಡುತ್ತೇನೆ. ಆದರೆ ನನ್ನ ಅಸಹಾಯಕತೆ, ವಿಷಾದಗಳಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ, ಇದಕ್ಕೆ ಅಕಾಡೆಮಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com