ಬೆಂಗಳೂರು:ಮಾನಸಿಕ ಖಿನ್ನತೆ, ಐಐಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ

ಭಾರತೀಯ ವಿಜ್ಞಾನ ಸಂಸ್ಥೆ -ಐಐಎಸ್ ಸಿಯ ಕೊಠಡಿಯಲ್ಲಿ 26 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Published: 20th July 2019 12:00 PM  |   Last Updated: 20th July 2019 04:17 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ಬೆಂಗಳೂರು:ಭಾರತೀಯ ವಿಜ್ಞಾನ ಸಂಸ್ಥೆ -ಐಐಎಸ್ ಸಿಯ ಕೊಠಡಿಯಲ್ಲಿ 26 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಳೆತ ಸ್ಥಿತಿಯಲ್ಲಿ ಮೃತದೇಹ ನಿನ್ನೆ ಪತ್ತೆಯಾಗಿದೆ. ತನ್ನ ಆತ್ಮಹತ್ಯೆಗೆ ಯಾರೂ ಹೊಣೆಯಲ್ಲ ಎಂದು ಸೂಸೈಡ್ ನೋಟಿನಲ್ಲಿ ಬರೆದಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ಕೆವಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಈ ಯುವಕ ಹೈ ಎನರ್ಜಿ ಫಿಜಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಒಳಗಡೆ ಲಾಕ್ ಮಾಡಲಾಗಿದ್ದ ಕೊಠಡಿಯಿಂದ ಬಂದಂತಹ ಕೆಟ್ಟ ವಾಸನೆಯಿಂದಾಗಿ  ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಷ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಖಿನ್ನತೆ, ಬಳಲುತ್ತಿದ್ದು, ಪೋಷಕರು ಕ್ಷಮಿಸಬೇಕೆಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂರು ದಿನಗಳ ಹಿಂದೆ ತನ್ನ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾನೆ. ಆದಾಗ್ಯೂ, ಪೋಷಕರು ಇನ್ನೂ ನಗರಕ್ಕೆ ಆಗಮಿಸಿಲ್ಲ. ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp