ಮೈಸೂರು ಬಳಿ 'ಜೋಡಿ ಬಸವ'ವಿಗ್ರಹ ಪತ್ತೆ: ಯದುವೀರ್ ಸ್ಥಳಕ್ಕೆ ಭೇಟಿ

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಜೋಡಿ ನಂದಿ ವಿಗ್ರಹಗಳು ಪತ್ತೆಯಾಗಿವೆ. ಇವುಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ.
ಜೋಡಿ ಬಸವ
ಜೋಡಿ ಬಸವ
ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಜೋಡಿ ನಂದಿ ವಿಗ್ರಹಗಳು ಪತ್ತೆಯಾಗಿವೆ. ಇವುಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. 
ಭೂಮಿ ಅಗೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 15 ಅಡಿ ಉದ್ದ ಹಾಗೂ 12 ಅಡಿ ಎತ್ತರವಾದ ಒಂದು ವಿಗ್ರಹ ಕಾಣಿಸಿದೆ. ನಂತರ ಅದರ ಎದುರಿಗೆ ಚಿಕ್ಕದಾದ ಮತ್ತೊಂದು ವಿಗ್ರಹವೂ ಪತ್ತೆಯಾಗಿದೆ.
ಇದುವರೆಗೂ ಈ ನಂದಿ ವಿಗ್ರಹಗಳ ಕೊಂಬುಗಳನಷ್ಟೇ ನೋಡುತ್ತಿದ್ದ ಗ್ರಾಮಸ್ಥರು ಜೋಡಿ ಬಸವಣ್ಣ ಎಂದು ಪೂಜಿಸುತ್ತಿದ್ದರು. ಈಗ ತಾವೇ ಹಣ ಸಂಗ್ರಹಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆಸಿದಾಗ ಈ ನಂದಿ ವಿಗ್ರಹಗಳನ್ನ ಗೋಚರಿಸಿವೆ.
ವಿಷಯ ತಿಳಿದ ಕೂಡಲೇ ಯದುವೀರ್ ಒಡೆಯರ್ ಆ ಗ್ರಾಮಕ್ಕೆ ಭೇಟಿ ನೀಡಿ, ವಿಗ್ರಹಗಳನ್ನು ವೀಕ್ಷಿಸಿದ್ದಾರೆ.ಈ ಹಿಂದೆ ರಾಜಮನೆತನದವರು ಈ ವಿಗ್ರಹಗಳನ್ನು ಸ್ಥಾಪಿಸಿದ್ದರು ಎನ್ನಲಾಗಿದ್ದು,  ಇತಿಹಾಸ ತಜ್ಞರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. 
ಹಿಂದೊಮ್ಮೆ ಜಯಚಾಮರಾಜ ಒಡೆಯರ್ ಇಲ್ಲಿಗೆ ಭೇಟಿ ನೀಡಿ ಹೂತು ಹೋಗಿದ್ದ ನಂದಿ ವಿಗ್ರಹಗಳನ್ನು ಹೊರತೆಗೆಯಲು ಪ್ರಯತ್ನಿಸಿದ್ದರು. ಆಗ ನೀರು ತುಂಬಿಕೊಂಡಿತ್ತು. ಹೀಗಾಗಿ ಪ್ರಯತ್ನ ಫಲ ನೀಡಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com