3 ಗಂಟೆಯೊಳಗೆ, ಕೇವಲ 30 ರೂ.ಯಲ್ಲಿ ಬೆಂಗಳೂರು-ಮೈಸೂರು ಪ್ರಯಾಣ!

ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರಿಗೆ ರೈಲು ಮೂಲಕ ತೆರಳುವ ಪ್ರಯಾಣಿಕರು ಇನ್ನು ಮುಂದೆ ಕೇವಲ 30 ರೂಪಾಯಿಯಲ್ಲಿ...

Published: 20th July 2019 12:00 PM  |   Last Updated: 20th July 2019 08:14 AM   |  A+A-


MEMU train will cover Bengaluru to Mysuru in under three hours at Rs 30

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ಬೆಂಗಳೂರು: ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರಿಗೆ ರೈಲು ಮೂಲಕ ತೆರಳುವ ಪ್ರಯಾಣಿಕರು ಇನ್ನು ಮುಂದೆ ಕೇವಲ 30 ರೂಪಾಯಿಯಲ್ಲಿ, 3 ಗಂಟೆಯೊಳಗೆ ಪ್ರಯಾಣಿಸಬಹುದು!

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರಯಾಣಿಕರಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ. 

ತಮ್ಮ ಟ್ವಿಟರ್‌ ಖಾತೆಯಲ್ಲಿ ಹೊಸ ರೈಲು ಸಂಚಾರದ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ''ಬೆಂಗಳೂರಿನಿಂದ ಮೈಸೂರಿಗೆ ನಿತ್ಯವೂ ಸಂಜೆ 5.20ಕ್ಕೆ 'ಮೆಮು' ಎಂಬ ಹೆಸರಿನ ರೈಲು ತೆರಳಲಿದ್ದು, ಪುನಃ ಮೈಸೂರಿನಿಂದ ಅದೇ ರೈಲು 8.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಕೇವಲ 30 ರೂ.ಯಲ್ಲಿಯೇ 2 ಗಂಟೆ 40 ನಿಮಿಷದಲ್ಲಿ ನಗರಕ್ಕೆ ತಲುಪಬಹುದು ಎಂದು ತಿಳಿಸಿದ್ದಾರೆ.

ಭಾನುವಾರ ಹೊರತುಪಡಿಸಿ ವಾರದ 6 ದಿನವೂ ಈ ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಂದಿನ ವಾರ ಮತ್ತೊಂದು ಹೊಸ ಯೋಜನೆ ಘೋಷಿಸುವುದಾಗಿ ಅವರು ಟ್ವೀಟ್ ನಲ್ಲಿ ಪ್ರಕಟಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp