ಹೊಸಪೇಟೆ: ಲಂಚದ ಹಣದ ಸಮೇತ ಸಿಕ್ಕಿಬಿದ್ದ ಅಬಕಾರಿ ಜಂಟಿ ಆಯುಕ್ತ ಎಸಿಬಿ ಬಲೆಗೆ

ತಿಂಗಳ ಮಾಮೂಲಿ ವಸೂಲಿ ಮಾಡಿ ಸರ್ಕಾರಿ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್ಎನ್ ಮೋಹನ್ ಕುಮಾರ್, ಎಸಿಬಿ ಬಲೆಗೆ ಬಿದ್ದಿದ್ದಾರೆ

Published: 21st July 2019 12:00 PM  |   Last Updated: 21st July 2019 03:48 AM   |  A+A-


ACB

ಎಸಿಬಿ

Posted By : RHN RHN
Source : UNI
ಹೊಸಪೇಟೆ: ತಿಂಗಳ ಮಾಮೂಲಿ ವಸೂಲಿ ಮಾಡಿ ಸರ್ಕಾರಿ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್ಎನ್ ಮೋಹನ್ ಕುಮಾರ್, ಎಸಿಬಿ ಬಲೆಗೆ ಬಿದ್ದಿದ್ದಾರೆ

ಎಸಿಬಿ ಅಧಿಕಾರಿಗಳು ಬಂಧಿತ ಮೋಹನ್ ಕುಮಾರ್ ಅವರಿಂದ 11,36,500 ರೂ ನಗದು ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೋಹನ್ ಕುಮಾರ್ ಅವರು ನಾಲ್ಕು ಜಿಲ್ಲೆಗಳ ಬಾರ್ ವೈನ್ ಶಾಪ್ ನಿಂದ್ ತಿಂಗಳ ಮಾಮೂಲಿ ವಸೂಲಿ ಮಾಡಿ ಸರ್ಕಾರಿ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಎಸಿಬಿ ಚಂದ್ರಕಾಂತ್ ನೇತೃತ್ವದ ತಂಡ ಅವರನ್ನು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಗುಂಡಾ ಅರಣ್ಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆರೆಹಿಡಿದಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp