ಕಾರವಾರದಲ್ಲಿ 2025ರೊಳಗೆ ನೌಕಾ ವಿಮಾನ ನಿಲ್ದಾಣ

ಇಲ್ಲಿನ ಐಎನ್ ಎಸ್ ಕದಂಬ ನೌಕಾ ನೆಲೆಯಲ್ಲಿ 2025ರೊಳಗೆ ವಾಣಿಜ್ಯಾತ್ಮಕ ಕಾರ್ಯಗಳಿಗೆ ಅನುಕೂಲವಾಗುವಂತಹ ಪೂರ್ಣ ಪ್ರಮಾಣದ ಕಾರವಾರದಲ್ಲಿ 2025ರೊಳಗೆ ನೌಕಾ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ.
ಐಎನ್ಎಸ್ ಕದಂಬ ನೌಕ ನೆಲೆ
ಐಎನ್ಎಸ್ ಕದಂಬ ನೌಕ ನೆಲೆ
ಕಾರವಾರ: ಇಲ್ಲಿನ ಐಎನ್ ಎಸ್ ಕದಂಬ ನೌಕಾ ನೆಲೆಯಲ್ಲಿ 2025ರೊಳಗೆ ವಾಣಿಜ್ಯಾತ್ಮಕ  ಕಾರ್ಯಗಳಿಗೆ ಅನುಕೂಲವಾಗುವಂತಹ ಪೂರ್ಣ ಪ್ರಮಾಣದ ನೌಕಾ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ.ಇದು ಗೋವಾದಲ್ಲಿನ ದಾಬೊಲಿಮ್  ಐಎನ್ ಎಸ್ ಹಂಸ ವಾಯು ನಿಲ್ದಾಣದ ದಟ್ಟಣೆ ಕಡಿಮೆ ಮಾಡಲಿದೆ. 
ವಾಯುನೆಲೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದ್ದು, ಸೀಬರ್ಡ್ ಎರಡನೇ ಹಂತದ ಕಾಮಗಾರಿ 2023ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದು ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ನೌಕಾ ನೆಲೆಯಾಗಲಿದೆ. ಈ ವಿಸ್ತರಣಾ ಕಾರ್ಯದ ಭಾಗವಾಗಿ ಅಂಕೋಲಾ ಬಳಿಯ ಅಲಾಗೇರಿ ಬಳಿ ನೌಕಾ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ. ಇದು 2025ರಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಸುಮಾರು 1328 ಎಕರೆ ವಿಸ್ತೀರ್ಣದಲ್ಲಿ ನೌಕ ವಿಮಾನ ನಿಲ್ದಾಣ ತಲೆ ಎತ್ತಲಿದೆ.ಇದಕ್ಕೆ  ಹೆಚ್ಚುವರಿ ಭೂಮಿಯ ಅಗತ್ಯವಿಲ್ಲ . ಇದಕ್ಕೆ ಬೇಕಾದಷ್ಟು ಭೂಮಿ ಈಗಾಗಲೇ ನೌಕಪಡೆ ಬಳಿ ಇದೆ ಎನ್ನಲಾಗಿದೆ. ಕಾರವಾರದಲ್ಲಿ ನೌಕಾ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದರೆ ಐಎನ್ ಎಸ್ ಹಂಸದಿಂದ ಅನೇಕ ವಿಮಾನಗಳು ಇಲ್ಲಿಂದಲೇ ಕಾರ್ಯನಿರ್ವಹಿಸಲಿವೆ ಎಂದು ನೌಕಾ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸಲು ರಾಜ್ಯಸರ್ಕಾರ ಚಿಂತನೆ ನಡೆಸಿದ್ದು, ಈ ನೌಕಾ ವಿಮಾನ ನಿಲ್ದಾಣವನ್ನೇ ನಾಗರಿಕರ ಸೇವೆಗೂ ಬಳಸಿಕೊಳ್ಳಲು ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದೆ. ರಕ್ಷಣಾ ಸಚಿವಾಲಯ ಈ ಪ್ರಸ್ತಾವಕ್ಕೆ ಅನುಮತಿ ನೀಡಿದ್ದು, ಉದ್ದೇಶಿತ 2 ಸಾವಿರ ಮೀಟರ್ ರನ್ ವೇ ಜೊತೆಗೆ ಹೆಚ್ಚುವರಿಯಾಗಿ 1 ಸಾವಿರ ಮೀಟರ್ ರನ್ ವೇಳೆ ಸೇರಿಸುವಂತೆ ತಿಳಿಸಿದೆ .
ನಾಗರಿಕ ಪ್ರಯಾಣಕ್ಕೆ ಇಲ್ಲಿಂದ ಅವಕಾಶ ಮಾಡಿಕೊಟ್ಟರೆ ಈ ಭಾಗದಿಂದ ಪ್ರವಾಸೋದ್ಯಮ ಪ್ರಗತಿಗೆ ಅನುಕೂಲವಾಗಲಿದೆ. ಜೊತೆಗೆ ಈ ಭಾಗ ಅಭಿವೃದ್ಧಿಯಾಗಲಿದೆ. ರನ್ ವೇ ವಿಸ್ತರಣೆಗಾಗಿ ಜಿಲ್ಲಾಡಳಿತದಿಂದ 40 ಎಕರೆ ಭೂಮಿಯನ್ನು ಸ್ವಾಧೀನಕ್ಕೆ  ಅಧಿಸೂಚನೆ ಹೊರಡಿಸಲಾಗಿದ್ದು, ನಾಗರಿಕ ವಿಮಾನಯಾನ ಪ್ರಾಧಿಕಾರದ ಸಹಕಾರದೊಂದಿಗೆ ಟರ್ಮಿನಲ್ ನಿರ್ಮಿಸುವುದಾಗಿ  ಪ್ಲಾಗ್ ಆಫೀಸರ್ ಕಮಾಂಡಿಂಗ್ ಆಡ್ಮಿರಲ್ ಮಹೇಶ್ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com