2020 ರ ಡಿಸೆಂಬರ್ ಗೆ ಕೊಂಕಣ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ

ಕೊಂಕಣ ರೈಲ್ವೆಪ್ರಯಾಣಿಕರಿಗೆ ಶುಭಸುದ್ದಿ! ಸಂಪೂರ್ಣ ಕೊಂಕಣ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಪ್ರಸ್ತಾವವಿದ್ದು ಇದಾಗಲೇ ಈ ಸಂಬಂಧದ ಕಾಮಗಾರಿ ಭರದಿಂಡ ಸಾಗಿದೆ.
ಕೊಂಕಣ ರೈಲ್ವೆ
ಕೊಂಕಣ ರೈಲ್ವೆ
ಉಡುಪಿ: ಕೊಂಕಣ ರೈಲ್ವೆಪ್ರಯಾಣಿಕರಿಗೆ ಶುಭಸುದ್ದಿ! ಸಂಪೂರ್ಣ ಕೊಂಕಣ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಪ್ರಸ್ತಾವವಿದ್ದು ಇದಾಗಲೇ ಈ ಸಂಬಂಧದ ಕಾಮಗಾರಿ ಭರದಿಂಡ ಸಾಗಿದೆ.ಕಾಮಗಾರಿಯು  2020 ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 1,100 ಕೋಟಿ ರೂ. ವೆಚ್ಚದ ಈ ಯೋಜನೆ ರೋಹ (ಮಹಾರಾಷ್ಟ್ರ) ದಿಂದ ತೋಕೂರ್ (ಕರ್ನಾಟಕ) ವರೆಗಿನ ಸಂಪೂರ್ಣ ಕೊಂಕಣ ರೈಲ್ವೆ ವಿಸ್ತರಣೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ರೋಹಾ-ವೆರ್ನಾ ಮತ್ತು ವರ್ನಾ-ತೋಕೂರ್  ಮಾರ್ಗಗಳಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಲಲಾಗುತ್ತಿದೆ.
ರೋಹಾ-ವೆರ್ನಾ ವಿಭಾಗಕ್ಕೆ ಫರೀದಾಬಾದ್‌ನ ಲಾರ್ಸೆನ್ ಆಂಡ್ ಟರ್ಬೋಲಿಮಿಟೆಡ್‌ಗೆ ಮತ್ತು ವರ್ನಾ-ಥೋಕೂರ್ ವಿಭಾಗಕ್ಕೆ ಎಸ್‌ಟಿಎಸ್-ಕೆಪಿಟಿಎಲ್, ನೋಯ್ಡಾ ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯ ಹೊಣೆ ಹೊತ್ತಿದೆ.ಈಗಾಗಲೇ ಉತ್ತರ ತುದಿರೋಹಾದಿಂದ ಮತ್ತು ದಕ್ಷಿಣ ತುದಿಯಲ್ಲಿರುವ ತೋಕೂರ್‌ನಿಂದ ಏಕಕಾಲದಲ್ಲಿ ಕೆಲಸ ಪ್ರಾರಂಭವಾಗಿದೆ. ಸರಿಸುಮಾರು 105 ಕಿ.ಮೀ ಹಳಿಗಳನ್ನು ವಿದ್ಯುದ್ದೀಕರಿಸಲಾಗಿದ್ದು ಉಳಿದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಿಜೂರ್ ಮತ್ತು ವೆರ್ನಾ (200 ಕಿ.ಮೀ) ನಡುವಿನ ಕೆಲಸ ಪ್ರಗತಿಯಲ್ಲಿದೆ ಎಂದು ಕೊಂಕಣ ರೈಲ್ವೆಯ ಮೂಲಗಳು ತಿಳಿಸಿವೆ.
ಕಾರವಾರದ ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಿ ಬಿ ನಿಕಮ್ ಮಾತನಾಡಿ ತೋಕೂರ್‌ನಿಂದ ಬಿಜೂರ್‌ವರೆಗಿನ ಕಾಮಗಾರಿ  ಈಗಾಗಲೇ ಪೂರ್ಣಗೊಂಡಿದ್ದು, ಈಗ ಕಾಮಗಾರಿಯನ್ನು ಬಿಜೂರ್‌ನಿಂದ ವೆರ್ನಾಗೆ ವಿಸ್ತರಿಸಲಾಗುತ್ತಿದೆ.2017 ರ ಸೆಪ್ಟೆಂಬರ್‌ನಲ್ಲಿ ವಿದ್ಯುದೀಕರಣ ಕಾರ್ಯ ಪ್ರಾರಂಭವಾಗಿದೆ ಎಂದರು.
ಈ ವಿದ್ಯುದೀಕರಣವು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. ಎಂದು ಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮತ್ಸ್ಯಗಂಧ ಎಕ್ಸ್‌ಪ್ರೆಸ್ ಪ್ರಸ್ತುತ ಮಂಗಳೂರು ಸೆಂಟ್ರಲ್ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ಸಂಚರಿಸಲು 16 ಗಂಟೆ ತೆಗೆದುಕೊಳ್ಳುತ್ತದೆ. ರೈಲಿನ ಸರಾಸರಿ ವೇಗ 45-50 ಕಿ.ಮೀ. ಇದೆ ಆದರೆ ಕಾಮಗಾರಿ ಮುಗಿದ ತರುವಾಯ ರೈಲು ಗಂಟೆಗೆ 80-100 ಕಿ.ಮೀ ವೇಗದಲ್ಲಿ ಚಲಿಸುವುದು ಸಾಧ್ಯವಿದೆ ಎಂದು ಅವರು ಹೇಳುಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com