ಹುಲಿ ಗಣತಿ: ರಾಜ್ಯದಲ್ಲಿ 112 ಹುಲಿಗಳ ಸಂಖ್ಯೆ ಹೆಚ್ಚಳ, ಆದರೂ 2ನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ವಿಶ್ವ ಹುಲಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಾಲ್ಕನೇ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಳೂರು: ವಿಶ್ವ ಹುಲಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಾಲ್ಕನೇ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿ ಒಟ್ಟು 2967 ಹುಲಿಗಳಿರುವುದಾಗಿ ವರದಿ ತಿಳಿಸಿದೆ.
ದೇಶದ ಹುಲಿಗಳ ಸಂಖ್ಯೆ 2014ರಲ್ಲಿ 1,400 ಇದ್ದದ್ದು 2019 ರಲ್ಲಿ 2,967 ಕ್ಕೆ ಏರಿದೆ. ಇನ್ನು ಕರ್ನಾಟಕದಲ್ಲೂ ಕಳೆದ ನಾಲ್ಕು ವರ್ಷಗಳ 406ರಿಂದ 524ಕ್ಕೆ ಏರಿಕೆಯಾಗಿದೆ. ಒಟ್ಟು 112 ಹುಲಿಗಳನ್ನು ಹೆಚ್ಚಿಸಿಕೊಂಡಿದೆ. ಆದರೂ ಮೊದಲ ಸ್ಥಾನದಲ್ಲಿದ್ದ ಕರ್ನಾಟಕ ಎರಡನೇ ಸ್ಥಾನಕ್ಕೆ ಕುಸಿದಿದ್ದು, 226 ಹುಲಿಗಳೊಂದಿಗೆ ಮಧ್ಯ ಪ್ರದೇಶ ಮೊದಲ ಸ್ಥಾನ ಪಡೆದಿದೆ. ಉತ್ತರಾಖಂಡ್ 442 ಹುಲಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಅರಣ್ಯ ಇಲಾಖೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯ ಹೆಚ್ಚಳದ ಶ್ರೇಯಸ್ಸನ್ನು ಮುಂಚೂಣಿ ಸಿಬ್ಬಂದಿಗೆ ನೀಡಿದೆ. ಕಳೆದ ನಾಲ್ಕು ವರ್ಷಗಳ ಹುಲಿಗಳ ಸಂಖ್ಯೆ ಶೇ.29ರಷ್ಟು ಹೆಚ್ಚಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಬಂಡಿಪುರ, ನಾಗರಹೊಳೆ  ಮತ್ತು ಬಿಆರ್ ಟಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com