ಕೋಮಾದಲ್ಲಿರುವ ತಂದೆಗೆ ಮಗ ಸಿದ್ದಾರ್ಥ ಸಾವಿನ ಸುದ್ದಿ ಮನಸ್ಸಿಗೆ ಮುಟ್ಟುತ್ತಾ, ಎಂಥ ದುರ್ವಿಧಿ!

ಪುತ್ರ ಶೋಕಂ ನಿರಂತರಂ ಅಂತ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ಕೇಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿಜಿ ಸಿದ್ದಾರ್ಥ್ ಅವರು ಆತ್ಮಹತ್ಯೆಗೆ ಶರಣಾಗಿ...

Published: 31st July 2019 12:00 PM  |   Last Updated: 31st July 2019 04:48 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಂಗಳೂರು: ಪುತ್ರ ಶೋಕಂ ನಿರಂತರಂ ಅಂತ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ಕೇಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿಜಿ ಸಿದ್ದಾರ್ಥ್ ಅವರು ಆತ್ಮಹತ್ಯೆಗೆ ಶರಣಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಷ್ಟೇಲ್ಲ ನಡೆದರೂ ಸಿದ್ದಾರ್ಥ್ ತಂದೆಗೆ ಮಾತ್ರ ಇದು ಯಾವುದು ಗೊತ್ತೇ ಇಲ್ಲ. 

ಇಂದು ಬೆಳಗ್ಗೆ ಸಿದ್ದಾರ್ಥ್ ಅವರ ಮೃತದೇಹ ಪತ್ತೆಯಾಗಿತ್ತು. ನಂತರ ಅವರ ಮರಣೋತ್ತರ ಪರೀಕ್ಷೆ ಬಳಿಕ ಚಿಕ್ಕಮಗಳೂರಿನಲ್ಲಿ ಪಾರ್ಥಿವ ಶರೀರವನ್ನು ರವಾನಿಸಿ ಅಂತಿಮ ದರ್ಶನಕ್ಕೆ ಅಣಿ ಮಾಡಲಾಗಿದೆ. ಸಂಜೆ ಹುಟ್ಟೂರು ಚಟ್ಟನಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. 

ಸಿದ್ದಾರ್ಥ್ ತಂದೆ ಗಂಗಯ್ಯ ಹೆಗ್ಡೆ ಅವರು ಕಳೆದ ಜೂನ್ 9ರಿಂದ ಮೈಸೂರಿನ ನಜಾರ್ ಬಾದ್ ನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಯ್ಯ ಅವರು ಕೋಮಾದಲ್ಲಿರುವುದರಿಂದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 


ಗಂಗಯ್ಯನವರ ಅನುಪಸ್ಥಿತಿಯಲ್ಲೇ ಸಿದ್ದಾರ್ಥ್ ಪಂಚಭೂತಗಳಲ್ಲಿ ಲೀನರಾಗಲಿದ್ದಾರೆ. ಇನ್ನು ಕೋಮಾದಿಂದ ಹೊರಬಂದರೇ ಮಗನ ಸಾವಿನ ಸುದ್ದಿ ಕೇಳಿದರೇ ಗಂಗಯ್ಯನವರ ಪರಿಸ್ಥಿತಿ ಏನಾಗಬಹುದು ಆ ದೇವರೇ ಬಲ್ಲ.
Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp