ಗಟಾರ ಅಮಾವಾಸ್ಯೆ: ತಿನ್ನಿರಿ...ಕುಡಿಯಿರಿ...ಮಜಾ ಮಾಡಿ...

ಆಷಾಡ ಕಳೆದು ಶ್ರಾವಣ ಮಾಸ ಆರಂಭಕ್ಕೆ ಮುನ್ನ ಬರುವ ಅಮಾವಾಸ್ಯೆಯನ್ನು ಗಟಾರ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಆಷಾಡ ಕಳೆದು ಶ್ರಾವಣ ಮಾಸ ಆರಂಭಕ್ಕೆ ಮುನ್ನ ಬರುವ ಅಮಾವಾಸ್ಯೆಯನ್ನು ಗಟಾರ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಶ್ರಾವಣ ಎನ್ನುವ ಹಿಂದೂಗಳ ಪವಿತ್ರ ಮಾಸದಲ್ಲಿ ತಿಂಗಳ ಕಾಲ  ಮಾಂಸಾಹಾರಕ್ಕೆ ವಿರಾಮ ನೀಡಲಿದೆ. ಶ್ರಾವಣ ಮಾಸದಲ್ಲಿ ಉಪವಾಸವಿದ್ದು ಪೂಜೆ ಪುನಸ್ಕಾರ ಮಾಡುವ ತಿಂಗಳು, ಶ್ರಾವಣ ತಿಂಗಳಿನಲ್ಲಿ ಹಲವು ಹಬ್ಬಗಳು ಬರುತ್ತವೆ.
ಶ್ರಾವಣದಲ್ಲಿ ಸಾರಾಯಿ ಸೇವನೆ, ಮೊಟ್ಟೆ, ಮಾಂಸದೂಟ ವರ್ಜ್ಯ. ಆದ್ದರಿಂದ ತಿಂಗಳ ನಾಲಿಗೆ ಚಪಲವೆನ್ನಲ್ಲ ಗಟಾರ ಅಮಾವಾಸ್ಯೆ ದಿನದಂದು ಪೂರೈಸುವ ಉದ್ದೇಶ ಇದಾಗಿದೆ.
ಗಟಾರ ಅಮಾವಾಸ್ಯೆ ಕಂಠಪೂರ್ತಿ ಕುಡಿದು ಪ್ರಜ್ಞೆ ಕಳೆದುಕೊಂಡು ಯಾವುದಾದರೊಂದು ಗಟಾರ (ಚರಂಡಿ)ದಲ್ಲಿ ಬಿದ್ದು ನರಳಾಡುವದು, ಹೊರಳಾಡುವದಾಗಿದೆ. ಅಮವಾಸ್ಯೆಯ ರಾತ್ರಿ ಬಹುತೇಕ ಕುಡುಕರ ದರ್ಶನ ಚರಂಡಿಯಲ್ಲಾಗುತ್ತದೆ. 
ಈ ಅಮಾವಾಸ್ಯೆಯಂದು ಎಲ್ಲಾ ಮನೆಗಳಲ್ಲೂ ಹೆಚ್ಚಾಗಿ ಮಾಂಸಾಹಾರದ ಅಡುಗೆ ಮಾಡಲಾಗುತ್ತದೆ. ಎಲ್ಲಾ ಬಾರ್ ಮತ್ತು ವೈನ್ ಶಾಪ್ ಗಳಲ್ಲೂ ಜನ ಕಿಕ್ಕಿರಿದು ಸೇರುತ್ತಾರೆ ಎಂದು ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ. ಇನ್ನೂ ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com