ಕೆಎಂಎಫ್‌ ಚುನಾವಣೆ ಮುಂದೂಡಿಕೆ:ಹೈಕೋರ್ಟ್ ಗೆ ಮೊರೆ ಹೋದ ಎಚ್‌.ಡಿ. ರೇವಣ್ಣ

ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಜು.29ರಂದು ನಡೆಯಬೇಕಿ ದ್ದ ಚುನಾವಣೆಯನ್ನು ಮುಂದೂಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಅವರಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಎಂಎಫ್‌ ಚುನಾವಣೆ ಮುಂದೂಡಿಕೆ:ಹೈಕೋರ್ಟ್ ಗೆ ಮೊರೆ ಹೋದ ಎಚ್‌.ಡಿ. ರೇವಣ್ಣ
ಕೆಎಂಎಫ್‌ ಚುನಾವಣೆ ಮುಂದೂಡಿಕೆ:ಹೈಕೋರ್ಟ್ ಗೆ ಮೊರೆ ಹೋದ ಎಚ್‌.ಡಿ. ರೇವಣ್ಣ
ಬೆಂಗಳೂರು:  ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಜು.29ರಂದು ನಡೆಯಬೇಕಿ ದ್ದ ಚುನಾವಣೆಯನ್ನು ಮುಂದೂಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಅವರಿಂದ ಹೈಕೋರ್ಟ್ ಗೆ  ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ -1959ರ ಕಲಂ 121 ರ ಅಡಿಯಲ್ಲಿ ಚುನಾವಣೆ ಮುಂದೂಡುವಂತೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಆದೇಶವ ರದ್ದುಪಡಿಸಬೇಕು ಹಾಗೂ ಚುನಾವಣೆಗೆ ಅನುವು ಮಾಡಿಕೊಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ರಿಜಿಸ್ಟ್ರಾರ್‌, ಚುನಾವಣಾಧಿಕಾರಿ ಸೇರಿ ಇನ್ನಿತರ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿ ಅರ್ಜಿ ಸಲ್ಲಿಕೆಯಾಗಿದ್ದು ಮುಂದಿನ ಒಂದೆರಡು ದಿನಗಳಲ್ಲಿ ರೇವಣ್ಣ ಅವರ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com