ಅಪ್ರಾಪ್ತ ಬಾಲಕಿಯರ ದೌರ್ಜನ್ಯ ಪ್ರಕರಣ: ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್

ಅನಾಥಾಶ್ರಮದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಹಾಗೂ ದೈಹಿಕ ದೌರ್ಜನ್ಯದ ಪ್ರಕರಣ ಸಂಬಂಧ ಕೆಂಗೇರಿ ಪೊಲೀಸರು ನಡೆಸಿದ ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸುವಂತೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಅನಾಥಾಶ್ರಮದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಹಾಗೂ ದೈಹಿಕ ದೌರ್ಜನ್ಯದ ಪ್ರಕರಣ ಸಂಬಂಧ  ಕೆಂಗೇರಿ ಪೊಲೀಸರು ನಡೆಸಿದ ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ನ್ಯಾಯಪೀಠ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿದ ಬಳಿಕ ಈ ನಿರ್ದೇಶನ ನೀಡಿದೆ.
ಏಪ್ರಿಲ್ 3, 2019 ರಂದು ಸರ್ಕಾರಿ ಬಾಲಕಿಯರ ಆಶ್ರಯ ಮನೆ  ಅಧೀಕ್ಷಕರು ಬರೆದ ಪತ್ರದ ಆಧಾರದ ಮೇಲೆ ಕೈಗೊಂಡ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಜಿಲ್ಲಾಧಿಕಾರಿಗೆ ಸೂಚಿಸಿದೆ. ಅನಾಥಾಶ್ರಮದಿಂದ ರಕ್ಷಿಸಿದ ಬಾಲಕಿಯರ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಕೋರಿದೆ
ಕೆಂಗೇರಿ ಸ್ಯಾಟಲೈಟ್ ಟೌನ್‌ನಲ್ಲಿ, ರಕ್ಷಿಸಿದ ಬಾಲಕಿಯರ ಮಾನಸಿಕ ಆರೋಗ್ಯ ಸ್ಥಿತಿಯನ್ನು ಎರಡು ವಾರಗಳಲ್ಲಿ ತಪಾಸಣೆ ನಡೆಸುವಂತೆ ನ್ಯಾಯಾಲಯವು ಸರ್ಕಾರಕ್ಕೆ  ನಿರ್ದೇಶನ ನೀಡಿದ್ದು ಮುಂದಿನ ವಿಚಾರಣೆಯನ್ನು ಆಗಸ್ಟ್ 6 ಕ್ಕೆ ಮುಂದೂಡಿದೆ ಪ್ರಕರಣದ ಕುರಿತಂತೆ ಅರ್ಜಿ ಸಲ್ಲಿಸಿರುವ ಕೆಎಸ್‌ಎಲ್‌ಎಸ್‌ಎ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಅಪರಾಧ ತನಿಖಾ ಇಲಾಖೆ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ಆಗಬೇಕೆಂದು ಕೋರಿದೆ.
‘ಬಾಲಾಪರಾಧಿ ನ್ಯಾಯ ಸಮಿತಿಗೆ ಸಿಬ್ಬಂದಿ ನೇಮಕ ಮಾಡಿ
ಬಾಲಾಪರಾಧಿ ನ್ಯಾಯ ಸಮಿತಿಗೆ ಒಂದು ತಿಂಗಳೊಳಗೆ ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com