ಎಂಬಿಬಿಎಸ್‌ಗೆ ಕರ್ನಾಟಕ ಕೋಟಾ: ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

ಎಂಬಿಬಿಎಸ್‌ ಸೀಟುಗಳಿಗಾಗಿ ರಾಜ್ಯದ ಕೋಟಾದಡಿಯಲ್ಲಿ ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಕೆಇಎ ವೆಬ್‌ಸೈಟ್‌ನಲ್ಲಿ....
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)
ಬೆಂಗಳೂರು: ಎಂಬಿಬಿಎಸ್‌ ಸೀಟುಗಳಿಗಾಗಿ ರಾಜ್ಯದ ಕೋಟಾದಡಿಯಲ್ಲಿ ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಕೆಇಎ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ.ಅದಕ್ಕಾಗಿ ಅಭ್ಯರ್ಥಿಗಳು : http: //kea.kar.nic.in  ಜಾಲತಾಣಕ್ಕೆ ಪ್ರವೇಶಿಸಿ ಮಾಹಿತಿ ಪಡೆಯಬಹುದು.
6,900 ವೈದ್ಯಕೀಯ ಸೀಟುಗಳನ್ನು ತಿಂಗಳ ಆರಂಭದಲ್ಲಿ ಘೋಷಿಸಿದ್ದ ಪ್ರಾಧಿಕಾರವು ಮಂಗಳವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಟ್ಟಾರೆ  3,206ಸೀಟುಗಳಷ್ಟೇ ಲಭ್ಯವಿದೆ. ಆನ್‌ಲೈನ್ ಪ್ರಕ್ರಿಯೆಯ ಮೂಲಕ ಕೌನ್ಸೆಲಿಂಗ್ ಮಾಡಲಾಗಿದ್ದು ಅಂತಿಮ ಸುತ್ತಿನ ನಂತರ, ಆಗಸ್ಟ್ 7 ಮತ್ತು 8 ರಂದು ಖಾಲಿ ಇರುವ ಸ್ಥಾನಗಳನ್ನು ಆಫ್‌ಲೈನ್ ಕೌನ್ಸೆಲಿಂಗ್ ಮೂಲಕ ತುಂಬಲು ಕೆಇಎ ಯೋಜಿಸಿದೆ.  “ಎನ್‌ಆರ್‌ಐ ಕೋಟಾದ 546 ಸೀಟುಗಳು ಅಂತಿಮ ಸುತ್ತಿನ ನಂತರ ಖಾಲಿ ಉಳಿದಿವೆ, ಇದನ್ನು ನಾವು ಮ್ಯಾನೇಜ್ ಮೆಂಟ್ ಕೋಟಾದೊಡನೆ ವಿಲೀನಗೊಳಿಸಲಿದ್ದೇವೆ"ಅಧಿಕಾರಿಯೊಬ್ಬರು ಹೇಳಿದರು.
ಮೆಡಿಕಲ್ ಅಥವಾ ಡೆಂಟಲ್‌ನಲ್ಲಿ ಸೀಟು ನಿಗದಿಪಡಿಸಿದಅಥವಾ ಖಾತರಿಗೊಂಡ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಬೇಕು ಮತ್ತು ಪ್ರವೇಶ ಆದೇಶದಲ್ಲಿ ನಮೂದಿಸಿದ ಕೊನೆಯ ದಿನಾಂಕದಂದು ಅಥವಾ  ಅದಕ್ಕೆ ಮುನ್ನ ಕಾಲೇಜುಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕು. ಅವರು ತಮ್ಮ ಲಾಗ್-ಇನ್ ಐಡಿ ಮೂಲಕ ವಿವರಗಳನ್ನು ಕೆಇಎಗೆ  ಸಲ್ಲಿಸಬೇಕಿದೆ. ಹಾಗಲ್ಲದೆ ಹೋದಲ್ಲಿ ಅವರು ಸೀಟುಗಳನ್ನು ಕಳೆದುಕೊಳ್ಳಲಿದ್ದಾರೆ.
ಪ್ರವೇಶ ವಿಧಾನ
ಶುಲ್ಕವನ್ನು ಪಾವತಿಸಿ ಮತ್ತು ಮೂಲ ದಾಖಲೆಗಳನ್ನು ಜುಲೈ 31 ಮತ್ತು ಆಗಸ್ಟ್ 2 ರ ನಡುವೆ ಬೆಂಗಳೂರಿನ ಕೆಇಎಗೆ ಸಲ್ಲಿಸಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಪಡೆದ ಅಭ್ಯರ್ಥಿಗಳು, ಸರ್ಕಾರಿ ಕೋಟಾ ಸೀಟಿನಡಿಯಲ್ಲಿ ('ಜಿ' ವರ್ಗದಡಿ ಹಂಚಿಕೆ ಮಾಡಲಾದ)ಥವಾ ಖಾಸಗಿ ಕೋಟಾ ಸೀಟಿನಡಿಯಲ್ಲಿ ( 'ಪಿ' ಅವರ್ಗದಡಿ ಹಂಚಿಕೆಯಾದ)ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅವರು  ಎಲ್ಲಾ ಮೂಲ ದಾಖಲೆಗಳನ್ನು ಕೆಇಎಗೆ ಕಡ್ಡಾಯವಾಗಿ ಸಲ್ಲಿಸಬೇಕು. ಆಗ ಮಾತ್ರ ಪ್ರವೇಶ ಆದೇಶ ಪಡೆಯಬಹುದು. ಆದರೆ, ಅಭ್ಯರ್ಥಿಗಳು ವೈದ್ಯಕೀಯ ಸೀಟುಗಳನ್ನು ‘ಸರ್ಕಾರಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಅಡಿಯಲ್ಲಿ’ ಅಥವಾ ‘ಎನ್‌ಆರ್‌ಐ’ ಅಡಿಯಲ್ಲಿ ಅಥವಾ ಖಾಸಗಿ ಕಾಲೇಜುಗಳಲ್ಲಿ ‘ಇತರರು ಕ್ಯೂ’ ಸೀಟುಗಳ ಅಡಿಯಲ್ಲಿ ವೈದ್ಯಕೀಯ ಸೀಟುಗಳನ್ನು ನಿಗದಿಪಡಿಸಿದ್ದಾದರೆ ಆಗ ವೇಶದ ಸಮಯದಲ್ಲಿ ಆಯಾ ಕಾಲೇಜಿನಲ್ಲಿ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ದಂತ ವೈದ್ಯಕೀಯ ವಿಭಾಗದಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ನಿಗದಿಪಡಿಸಿದ ವೈದ್ಯಕೀಯ ಅಥವಾ ದಂತ ವೈದ್ಯಕೀಯ ಕಾಲೇಜಿಗೆ ವರದಿ ಮಾಡುವ ಕೊನೆಯ ದಿನ ಆಗಸ್ಟ್ 3ರ ಸಂಜೆ 4 ಗಂಟೆಗೆ ಅಂತಿಮವಾಗಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com