ಬೆಳಗಾವಿ: ಅನಾರೋಗ್ಯವಿದ್ದರೂ ಸಿಗದ ರಜೆ; ಪ್ರಯಾಣಿಕರಿದ್ದ ಬಸ್ ಅನ್ನು ಆಸ್ಪತ್ರೆ ಬಳಿ ಬಿಟ್ಟು ಚಾಲಕ ಅಡ್ಮಿಟ್

ಜ್ವರದಿಂದ ಬಳಲುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಕಲನಿಗೆ ಮೇಲಧಿಕಾರಿಗಳು ರಜೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಪ್ರಯಾಣಿಕರಿದ್ದ ಬಸ್ ಸಮೇತ ..
ಆಸ್ಪತ್ರೆಗೆ ದಾಖಲಾದ ಬಸ್ ಚಾಲಕ
ಆಸ್ಪತ್ರೆಗೆ ದಾಖಲಾದ ಬಸ್ ಚಾಲಕ
ಬೆಳಗಾವಿ: ಜ್ವರದಿಂದ ಬಳಲುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಕಲನಿಗೆ ಮೇಲಧಿಕಾರಿಗಳು ರಜೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಪ್ರಯಾಣಿಕರಿದ್ದ ಬಸ್ ಸಮೇತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಬೆಳಗಾವಿ 1ನೇ ಡಿಪೋದ ಚಾಲಕ, ಗೋಕಾಕ ತಾಲೂಕಿನ ಮೂಡಲಗಿ ಗ್ರಾಮದ ಸುಭಾಷ್‌ ಸಿದ್ದಪ್ಪ ಬಡಕನ್ನವರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದ ಚಾಲಕ. 
ಡ್ರೈವಿಂಗ್‌ ಸಂದರ್ಭದಲ್ಲೇ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಭಾನುವಾರ ಮಧ್ಯರಾತ್ರಿ ಡ್ರೈವರ್‌ ಬಸ್‌ ಅನ್ನು ನೇರವಾಗಿ ಆಸ್ಪತ್ರೆಗೆ ಚಾಲನೆ ಮಾಡಿಕೊಂಡು ಹೋಗಿ ಚಿಕಿತ್ಸೆ ಪಡೆದಿದ್ದಾರೆ. 
ಬೆಂಗಳೂರಿನಿಂದ ಬೆಳಗಾವಿಗೆ ಬಸ್‌ ಚಾಲನೆ ಮಾಡಿಕೊಂಡು ಬರುತ್ತಿರುವಾಗ  ಹಿರೇಬಾಗೇವಾಡಿ ಸಮೀಪ ಜ್ವರ ವಿಪರೀತಗೊಂಡಾಗ ನೇರವಾಗಿ ಬಸ್‌ನ್ನು ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ ಮಾಡಿಕೊಂಡು ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಚಾಲಕ ಕಂ ನಿರ್ವಾಹಕ ಕರ್ತವ್ಯದಲ್ಲಿದ್ದ ಕಂಡಕ್ಟರ್‌ ಬಸ್‌ನ್ನು ಬೆಳಗಾವಿಗೆ ತಂದಿದ್ದಾರೆ. ಬಳಿಕ ಸುಭಾಷ್‌ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. 
ಚಾಲಕನ ಅನಾರೋಗ್ಯ ಸ್ಥಿತಿ ಕಂಡು ಪ್ರಯಾಣಿಕರು ಆತಂಕಕೊಳಗಾಗಿದ್ದಾರೆ, ನಂತರ ಚಿಕಿತ್ಸೆ ಪಡೆದು ಮತ್ತೆ ಬೆಳಗಾವಿಗೆ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ, ಅದಾದ ನಂತರ ಬಸ್ ನಲ್ಲಿದ್ದ ಬೆಳಗಾವಿ ಮೂಲದ ಪತ್ರಕರ್ತರೊಬ್ಬರು ಅವರನ್ನು ಬೆಳಗಾವಿಯ. ಆಸ್ಪತ್ರೆಗೆ ದಾಖಲಿಸಿದ್ದಾರೆ. 
ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೇಲಧಿಕಾರಿಗಳು. ಚಾಲಕರು ಹಾಗೂ ನಿರ್ವಾಹಕರು ರಜೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಮಾಡಿಕೊಡಲಾಗಿದೆ, ನಮಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com