ಜೂನ್ ತಿಂಗಳ ಅಂತ್ಯಕ್ಕೆ ಮೋಡ ಬಿತ್ತನೆ ಕಾರ್ಯ ಆರಂಭ

ರಾಜ್ಯದ ಹಲವೆಡೆ ಮಳೆಯಿಲ್ಲದೇ ಬರ ಪರಿಸ್ಥಿತಿ ಎದುರಾಗಿದ್ದು, ನದಿ ಹಾಗೂ ಕೆರೆಗಳು ಬತ್ತಿ ಹೋಗಿವೆ, ಬಿಸಿಲ ಬೇಗೆಯಿಂದ ತತ್ತರಿಸಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಾಗಲಕೋಟೆ/ ವಿಜಯಪುರ: ರಾಜ್ಯದ ಹಲವೆಡೆ ಮಳೆಯಿಲ್ಲದೇ ಬರ ಪರಿಸ್ಥಿತಿ ಎದುರಾಗಿದ್ದು, ನದಿ ಹಾಗೂ ಕೆರೆಗಳು ಬತ್ತಿ ಹೋಗಿವೆ, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಹಲವೆಡೆ ಮುಂಗಾರು ಪೂರ್ವ ಮಳೆ ಸ್ವಲ್ಪ ತಂಪೆರೆದಿತ್ತು, ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯ ಮುಂದೂಡಿತ್ತು, 
ಮುಂಗಾರು ಪ್ರವೇಶ ವಿಳಂಬವಾದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಅವಕಾಶ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕೋರಲಾಗಿತ್ತು, ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಸಚಿವ  ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ.
ಮುಂಗಾರು ಪೂರ್ವ ಮಳೆ ವಿಳಂಬವಾದರೇ ಆಯ್ಕೆ ಮಾಡಿದ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಲಾಗುವುದು, ಜೂನ್ ಅಂತ್ಯದ ವೇಳೆಗೆ ಮೋಡ ಬಿತ್ತನೆ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
 ಮುಂಬಯಿ ಕರ್ನಾಟಕ ಭಾಗದ ಪ್ರದೇಶಗಳು ಹೆಚ್ಚಿನ ಬರಕ್ಕೆ ತುತ್ತಾಗಿದ್ದು, ಮೇ ತಿಂಗಳ ಮೂರನೇ ವಾರದಲ್ಲಿ ಅಲ್ಲಲ್ಲಿ ಮಳೆಯ ,ಸಿಂಚನವಾಗಿತ್ತು, ಹೀಗಾಗಿ ಈ ಭಾಗದಲ್ಲಿ ಜುಲೈ ತಿಂಗಳವರೆಗೆ ಮೋಡ ಬಿತ್ತನೆ ಕಾರ್ಯ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.ಮೇ ತಿಂಗಳಲ್ಲಿ 22.2 ಮಿಮಿ ಮಳೆಯಾಗಿದೆ ಎಂದು ಕೃಷಿ ಇಲಾ ಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com