ರಾಜ್ಯದ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಶುಲ್ಕ ನಿಗದಿ

2019-20ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ, ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದ ಶುಲ್ಕಗಳನ್ನು ನಿಗದಿಪಡಿಸಿ
ರಾಜ್ಯದ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಶುಲ್ಕ ನಿಗದಿ
ರಾಜ್ಯದ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಶುಲ್ಕ ನಿಗದಿ
ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ, ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದ ಶುಲ್ಕಗಳನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಗೆ 19,090 ರೂ.ನಿಗದಿಪಡಿಸಲಾಗಿದೆ. ಖಾಸಗಿ ಅನುದಾನಿತ ಕಾಲೇಜುಗಳ ಶೇಕಡಾ 95ರಷ್ಟು ಸೀಟುಗಳಿಗೆ (ಸಿಇಟಿ ಮೂಲಕ)19,090 ರೂ., ಶೇಕಡಾ 5ರಷ್ಟು ಆಡಳಿತ ಮಂಡಳಿ ಸೀಟುಗಳಿಗೆ ಸಮ್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ ಶುಲ್ಕ ನಿಗದಿಪಡಿಸಲಾಗಿದೆ.
ಖಾಸಗಿ ಅನುದಾನಿತ ಇಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸೀಟುಗಳಿಗೆ ಸರ್ಕಾರಿ ಕೋಟಾದ ಶೇಕಡಾ 45ರಷ್ಟು ಸೀಟುಗಳಿಗೆ 58,806 ಅಥವಾ 65,340 ರೂ., ಕಾಮೆಡ್ ಕೋಟಾದ ಶೇಕಡಾ 30ರಷ್ಟು ಸೀಟುಗಳಿಗೆ 1,43, 748 ಅಥವಾ 2,01,960ಗಳ ಮಿತಿಗೊಳಪಟ್ಟು ನಿಗದಿಪಡಿಸಲಾಗಿದೆ. ಶೇಕಡಾ 25ರಷ್ಟು ಸೀಟುಗಳ ಶುಲ್ಕವನ್ನು ಸಮ್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ ನಿಗದಿಪಡಿಸಲಾಗಿದೆ.
ಖಾಸಗಿ ಅನುದಾನರಹಿತ ಇಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್ ಕಾಲೇಜಿಗಳಲ್ಲಿನ ಸರ್ಕಾರಿ ಕೋಟಾದ ಶೇಕಡಾ 40ರಷ್ಟು ಸೀಟುಗಳಿಗೆ 58,806 ಅಥವಾ 65,340 ರೂ., ಕೆಆರ್‌ಎಲ್ಎಂಪಿಸಿಎ ಕೋಟಾದ ಶೇಕಡಾ 30ರಷ್ಟು ಸೀಟುಗಳಿಗೆ 1,43,748 ಅಥವಾ 2,01,960 ರೂ ನಿಗದಿಪಡಿಸಲಾಗಿದೆ. ಆಡಳಿತ ಮಂಡಳಿ ಕೋಟಾದ ಶೇಕಡಾ 30ರಷ್ಟು ಸೀಟುಗಳನ್ನು ಸಮ್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ ನಿಗದಿಪಡಿಸಲಾಗಿದೆ.
ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯ ಸಂಬಂಧ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ 2019-20ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಪ್ರಮಾಣ ಮತ್ತು ಶುಲ್ಕ ನಿಗದಿಯ ಬಗ್ಗೆ ಮಾರ್ಚ್ 2ರಂದು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು, ಈ ಸಭೆಯಲ್ಲಿ ಬೋಧನಾ ಶುಲ್ಕ ನಿಗದಿಯ ಬಗ್ಗೆ ಮತ್ತು ಸೀಟು ಹಂಚಿಕೆ ಪ್ರಮಾಣ, ಶುಲ್ಕ ನಿಗದಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು, ಇದರ ಮಾರ್ಗೋಪಾಯಗಳು ಇತ್ಯಾದಿಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು. ಬಳಿಕ ಸರ್ಕಾರ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಪ್ರತಿನಿಧಿಯಾದ ಕೆಯುಪಿಇಸಿಎ ಮತ್ತು ಕೆಆರ್‌ಎಲ್ಎಂಪಿಸಿಎ  ಪದಾಧಿಕಾರಿಗಳೊಂದಿಗೆ ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿತ್ತು.
ಈ ಒಡಂಬಡಿಕೆಯಂತೆ, ನವದೆಹಲಿಯ ಎಐಸಿಟಿಇ ಅನುಮೋದಿತ ಪ್ರವೇಶಾತಿಯಲ್ಲಿ ಶೇಕಡಾ 45ರಷ್ಟು ಪ್ರಮಾಣದ ಸೀಟುಗಳನ್ನು ಕುಪೆಕಾ ಸರ್ಕಾರಕ್ಕೆ ಬಿಟ್ಟಿಕೊಟ್ಟಿತ್ತು. ಈ ಸೀಟುಗಳಿಗೆ ಸಿಇಟಿ ಮೂಲಕ ಪ್ರವೇಶಾತಿ ನೀಡಬೇಕು. ಶೇ.30ರಷ್ಟು ಸೀಟುಗಳನ್ನು ಕಾಮೆಡ್‍-ಕೆ ಮೂಲಕ ಪ್ರವೇಶಾತಿ ಮಾಡಬೇಕು. ಶೇ.15ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ, ಅನಿವಾಸಿ ಭಾರತೀಯ ಪ್ರಾಯೋಕಜತ್ವದಿಂದ ಮತ್ತು ಶೇ 10ರಷ್ಟು ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು ಎಂದು ತೀರ್ಮಾನವಾಗಿತ್ತು.
ಅದೇ ರೀತಿ ಕೆಆರ್‌ಎಲ್ಎಂಪಿಸಿಎ  ಪದಾಧಿಕಾರಿಗಳೊಂದಿಗೆ ಆಗಿರುವ ಒಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ನವದೆಹಲಿಯ ಎಐಸಿಟಿಇಯಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ 40ರಷ್ಟು ಪ್ರಮಾಣದ ಸೀಟುಗಳನ್ನು ಕೆಆರ್‌ಎಲ್ಎಂಪಿಸಿಎ  ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದು, ಈ ಸೀಟುಗಳಿಗೆ ಸಿಇಟಿ ಮೂಲಕ ಪ್ರವೇಶಾತಿ ಮಾಡಬೇಕು. ಶೇ 30ರಷ್ಟು ಸೀಟುಗಳನ್ನು ಕೆಆರ್‌ಎಲ್ಎಂಪಿಸಿಎ ವತಿಯಿಂದ ಪ್ರವೇಶಾತಿ ಮಾಡಬೇಕು. ಶೇ.20ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ, ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ ಮತ್ತು ಶೇ 10ರಷ್ಟು ಸಿಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು.
2019-20ನೇ ಸಾಲಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 4 ವರ್ಷದ ಪದವಿ ಕೋರ್ಸ್‌ ಪೂರ್ಣಗೊಳ್ಳುವವರೆಗೂ ವಾರ್ಷಿಕವಾಗಿ ಈ ಶುಲ್ಕಗಳನ್ನು ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com