ಮೇಲಾಧಿಕಾರಿಗಳಿಂದ ಕಿರುಕುಳ: ಎಎಸ್‍ಐ ಆತ್ಮಹತ್ಯೆ ಯತ್ನ

ಮೇಲಾಧಿಕಾರಿಗಳ ಕಿರುಕುಳದಿಂದ ನೊಂದ ಎಎಸ್ಐ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವರದಿಯಾಗಿದೆ

Published: 01st June 2019 12:00 PM  |   Last Updated: 01st June 2019 06:47 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : UNI
ಬೀದರ್: ಮೇಲಾಧಿಕಾರಿಗಳ ಕಿರುಕುಳದಿಂದ ನೊಂದ ಎಎಸ್ಐ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವರದಿಯಾಗಿದೆ.ಮಂಠಾಳ ಪೊಲೀಸ್ ಠಾಣೆ ಎಎಸ್‍ಐ ಅಶೋಕ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಅನಾರೋಗ್ಯ ಕಾರಣದಿಂದ ಒಂದು ತಿಂಗಳು ಕೆಲಸಕ್ಕೆ ರಜೆಹಾಕಿದ್ದ ಅಶೋಕ್‍ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಗೈರುಹಾಜರಿ ನಮೂದಿಸಿ ತಮ್ಮನ್ನು ಕರ್ತವ್ಯಕ್ಕೆ ಮೇಲಾಧಿಕಾರಿಗಳು ಅವಕಾಶ ಮಾಡಿಕೊಡಲಿಲ್ಲ. ಇದರಿಂದ ಬೇಸತ್ತು ಡೆತ್‍ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಆದರೆ ಆತ್ಮಹತ್ಯೆಗೂ ಡೆತ್‍ ನೋಟ್‍ಗೂ ಸಂಬಂಧವಿಲ್ಲ. ಡೆತ್‍ನೋಟಲ್ಲಿ ಇರುವ ವಿಷಯವೇ ಬೇರೆ ಎನ್ನಲಾಗುತ್ತಿದ್ದು, ಪೊಲೀಸ್ ಅಧಿಕಾರಿಗಳೊಬ್ಬರ ಖಾಸಗಿ ವಿಷಯವನ್ನು ಡೆತ್‍ನೋಟ್‍ನಲ್ಲಿ ಪ್ರಸ್ತಾಪಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೀದರ್ ಖಾಸಗಿ ಆಸ್ಪತ್ರೆಯಲ್ಲಿ ಅಶೋಕ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp