ಅಭಿವೃದ್ದಿ ಯೋಜನೆ ನೆಪ: ತಿಮ್ಮಕ್ಕ ನೆಟ್ಟ ಸಾಲುಮರಗಳಿಗೆ ಕೊಡಲಿ ಪೆಟ್ಟು?

ಅರಣ್ಯ ಹಾಗೂ ಪರಿಸರಪ್ರೇಮಿಗಳಿಗೆ ಇದು ಆಘಾತಕಾರಿ ಸುದ್ದಿ! ರಾಮನಗರ ಜಿಲ್ಲೆ ಕುಡೂರು ಹಾಗೂ ಹುಲಿಕಲ್ ನಡುವಿನ ರಸ್ತೆ ಅಗಲೀಕರಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ.
ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ
ಬೆಂಗಳೂರು: ಅರಣ್ಯ ಹಾಗೂ ಪರಿಸರಪ್ರೇಮಿಗಳಿಗೆ ಇದು ಆಘಾತಕಾರಿ ಸುದ್ದಿ! ರಾಮನಗರ ಜಿಲ್ಲೆ ಕುಡೂರು ಹಾಗೂ ಹುಲಿಕಲ್ ನಡುವಿನ ರಸ್ತೆ ಅಗಲೀಕರಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಈ ಯೋಜನೆ ಜಾರಿಗಾಗಿ ಸಾಲುಮರದ ತಿಮ್ಮಕ್ಕ ನೆಟ್ಟು ಬೆಳೆಸಿದ 300ಕ್ಕೂ ಹೆಚ್ಚು ಪಾರಂಪರಿಕ ಮರಗಳಿಗೆ ಕೊಡಲಿ ಏಟು ಬೀಳುವ ಸಾಧ್ಯತೆ ಇದೆ.
ಯೋಜನೆ ಜಾರಿ ಬಗೆಗೆ ಸರ್ಕಾರದಿಂದ ಇದುವರೆಗೆ ಅಂತಿಮ ಆದೇಶ ಹೊರಬಿದ್ದಿಲ್ಲವಾದರೂ ಮರಗಳ ಸಾಲಿನ ರಕ್ಷಣೆಗಾಗಿ ಪರಿಸರವಾದಿಗಳು ಇದಾಗಲೇ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ.
ಈ ವರ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ "ಪದ್ಮಶ್ರೀ" ಪ್ರಶಸ್ತಿ ಸ್ವೀಕರಿಸಿದ್ದ ತಿಮ್ಮಕ್ಕ ಕೋವಿಂದ್ ಅವರಿಗೆ ಆಶೀರ್ವದಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ರಾಷ್ಟ್ರಪತಿ ಕೋವಿಂದ್ ಕನ್ನಡದಲ್ಲೇ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದರು.
1960ರ ದಶಕದಲ್ಲಿ, ಆ ರಸ್ತೆಯಲ್ಲಿ ಹಾದು ಹೋಗುವವರಿಗೆ ನೆರಳಿಗೆ ಆಸರೆಯಾಗಲೆಂದು ತ್ಮ್ಮಕ್ಕ ರಸ್ತೆಯುದ್ದಕ್ಕೆ ಸಾಲು ಮರಗಳನ್ನು ನೆಟ್ಟು ಬೆಳೆಸಿದ್ದರು. ಇದೀಗ ಸುಮಾರು ಎಪ್ಪತ್ತು ವರ್ಷಗಳ ವಯಸ್ಸಿನ ಈ ಮರ ಕುಡೂರು ಹಾಗೂ ಹುಲಿಕಲ್ ನಡುವೆ ಸುಮಾರು 4 ಕಿಮೀ ವ್ಯಾಪ್ತಿಯಲ್ಲಿ ಬೃಹತ್ ಆಕಾರದಲ್ಲಿ ಬೆಳೆದು ನಿಂತಿದೆ. ಈಗ ರಸ್ತೆ ವಿಸ್ತರಣೆಗೆ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಈ ಸಮೀಕ್ಷೆಯ್ ನಕಾಶೆಯೊಳಗೆ ಹುಲಿಕಲ್ ನಲ್ಲಿರುವ ತಿಮ್ಮಕ್ಕನವರ ಹಳೆಯ ಮನೆ ಹಾಗು ಅವರು ನೆಟ್ಟು ಪೋಷಿಸಿದ ಮರಗಳು ಬರುತ್ತದೆ.
ಈ ಕುರಿತಂತೆ ಪ್ರತಿಕ್ರಯಿಸಿರುವ ತಿಮ್ಮಕ್ಕ "ನಾನು ನೆಟ್ಟ ಮರಗಳನ್ನು ಮುಟ್ಟಲು ಎಂದಿಗೂ ಕಡಿಯಬಾರದು, ಸರ್ಕಾರಕ್ಕೆ ಈ ಮರಗಳನ್ನು ಮುಟ್ಟಲು ನಾನು ಅನುಮತಿಸುವುದಿಲ್ಲ" ಎಂದರು.
ಸೋಮವಾರ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್ ವನಶಿರಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ  ಅವರನ್ನು ಭೇಟಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. "ಸರ್ಕಾರ ರಸ್ತೆ ಅಗಲೀಕರಣ ನೆಪದಲ್ಲಿ ತಿಮ್ಮಕ್ಕನ ಮರಗಳನ್ನು ಕಡಿಯಲು ಯೋಜಿಸಿದೆ. ಆದರೆ ಇದು ಸರಿಯಲ್ಲ. ಮಾನ್ಸೂನ್ ವಿಳಂಬ ಹಾಗೂ ಕೊರತೆ ಹಿನ್ನೆಲೆಯಲ್ಲಿ ತಿಮ್ಮಕ್ಕ ಕಳೆದ ವಾರವಷ್ಟೇ ಇನ್ನಷ್ಟು ಹೆಚ್ಚು ಸಸಿಗಳನ್ನು ನೆಡಲು ಯುವಜನತೆಗೆ ಕರೆ ನೀಡಿದ್ದಾರೆ. ಆದರೆ ಈಗ ಸರ್ಜಾರ ಅವರು ನೆಟ್ಟ ಮರಗಳನ್ನೇ ಕಡಿಯುವುದಕ್ಕೆ ಹೊರಟಿದೆ ಇದರಿಂದ ಆಕೆ ಆಆಘಾತಕ್ಕೊಳಗಾಗಿದ್ದಾರೆ" ವನಸಿರಿ ನುಡಿದರು.
ತಿಮ್ಮಕ್ಕ ನೆಟ್ಟಿರುವ ಸಾಲುಮರಗಳನ್ನು ಉಳಿಸಿಕೊಳ್ಳುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ್ಖು ತುರ್ತು ಕ್ರಮಕ್ಕೆ ಮುಂದಾಗಬೇಕು ಎಂದು ಧಾರವಾಡ ಮೂಲದ  ಹಸಿರು ಕಾರ್ಯಕರ್ತ ಹಾಗೂ ಬರಹಗಾರ ಹರ್ಷವರ್ಧನ್ ಶೀಲವಂತ್ ಆಗ್ರಹಿಸಿದ್ದಾರೆ.
"ರಸ್ತೆ ಅಗಲೀಕರಣ ತಡೆಗೆ ಕಾನೂನಿನ ಸಹಾಯ ಪಡೆಯಬೇಕು. ಪತ್ರದ ಮೂಲಕ ತಿಮ್ಮಕ್ಕ ನೆಟ್ಟ ಮರಗಳು, ಅದರ ಪರಂಪರೆ ಬಗೆಗೆ ಅರ್ವು ಮೂಡಿಸಬೇಕು. ಇವುಗಳನ್ನು ಹೆರಿಟೇಜ್ ಸೈಟ್ ನಂತೆ ಘೋಷಿಸಿ ಯೋಹ್ಜನೆ ಜಾರಿಗೆ ಮುಂದಾಗಬೇಕು. ಭವಿಷ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಮರಗಳನ್ನು ಕಡಿಯುವಿದಿಲ್ಲ ಎಂದು ಸರ್ಕಾರ ಖಾತ್ರಿಪಡಿಸಬೇಕು" ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com