ಸಚಿವರಾಗಿ ಮೊದಲ ಬಾರಿ ತವರು ಜೆಲ್ಲೆಗೆ ಭೇಟಿ: ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿಗೆ ಅಭೂತಪೂರ್ವ ಸ್ವಾಗತ

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಪಡೆದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಧಾರವಾಡಕ್ಕೆ ಭೇಟಿಕೊಟ್ಟ ಸಂಸದ ಪ್ರಹ್ಲಾದ ಜೋಷಿ ಅವರಿಗೆ ಅಭೂತಪೂರ್ವ ಸ್ವಾಗತ ಲಭಿಸಿದೆ.
ಸಚಿವರಾಗಿ ಮೊದಲ ಬಾರಿಗೆ ತವರು ಜೆಲ್ಲೆ ಭೇಟಿ: ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿಗೆ ಅಭೂತಪೂರ್ವ ಸ್ವಾಗತ
ಸಚಿವರಾಗಿ ಮೊದಲ ಬಾರಿಗೆ ತವರು ಜೆಲ್ಲೆ ಭೇಟಿ: ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿಗೆ ಅಭೂತಪೂರ್ವ ಸ್ವಾಗತ
ಹುಬ್ಬಳ್ಳಿ: ಕೇಂದ್ರ ಸಚಿವರಾಗಿ ಪ್ರಮಾಣ ವಚನ ಪಡೆದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಧಾರವಾಡಕ್ಕೆ ಭೇಟಿಕೊಟ್ಟ ಸಂಸದ ಪ್ರಹ್ಲಾದ ಜೋಷಿ ಅವರಿಗೆ ಅಭೂತಪೂರ್ವ ಸ್ವಾಗತ ಲಭಿಸಿದೆ.
ಭಾನುವಾರ ಧಾರವಾಡಕ್ಕೆ ಆಗಮಿಸಿದ ಪ್ರಹ್ಲಾದ್ ಜೋಷಿಯವರನ್ನು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಸೇರಿ ಆದರದಿಂದ ಬರಮಾಡಿಕೊಂಡಿದ್ದಾರೆ.ಜೋಷಿಯವರು  ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ನೇಮಕ ಆಗಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬಳಿಕ  ಬಸವೇಶ್ವರ, ಛತ್ರಪತಿ ಶಿವಾಜಿ, ಕಿತ್ತೂರು ಚೆನ್ನಮ್ಮ, ಸೇರಿ ಹಲ್ವು ಹೋರಾಟಗಾರ ಪ್ರತಿಮೆಗೆ ಗೌರವ ಸಲ್ಲಿಸಿದ ಜೋಷಿ ಹುಬ್ಬಳ್ಳಿಯ ಪ್ರಮುಖ ದೇವಾಲಯಗಳಿಗೆ ತೆರಳಿ ಆಶೀರ್ವಾದ ಪಡೆದರು.
ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಗಮನ ದೇಶದ ಅಭಿವೃದ್ದಿ ಕಡೆಗಿದೆ ಎಂದಿದ್ದಾರೆ, ಅಲ್ಲದೆ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ನ ಪ್ರಗತಿಯ ಕುರಿತು ಅತೃಪ್ತಿಯನ್ನು ಹೊರಹಾಕಿದ ಜೋಷಿ ರಾಜ್ಯ ನಾಯಕರು ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ದೂರಿದ್ದಾರೆ ಸ್ಥಳೀಯ ನಾಯಕರ ಕಾರ್ಯಕ್ಷಮತೆಯಿಂದ ಯೋಜನೆಗೆ ವೇಗ ದೊರೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹದಾಯಿ ವಿಚಾರದಲ್ಲಿ ಉಂತಾಗಿರುವ ಸಮಸ್ಯೆಯನ್ನು ಕೇಂದ್ರದ ಹೊಸ ಸರ್ಕಾರ ಆದ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳುತ್ತದ ಎಂದು ಸಂಸದರು ರಾಜ್ಯ ಸರ್ಕಾರ ಹಾಗೂ ಹುಬ್ಬಳ್ಳಿ ಜನತೆಗೆ ಭರವಸೆ ನೀಡಿದ್ದಾರೆ."ಈ ಸಮಸ್ಯೆಯನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ ಮತ್ತು ಪ್ರತಿಯೊಬ್ಬರೂ ರೈತರು ಮತ್ತು ಜನರ ಅನುಕೂಲಕ್ಕಾಗಿ ಒಟ್ಟಿಗೆ ಕೆಲಸ ಮಾಡಬೇಕು" ಎಂದು ಅವರು ಹೇಳೀದ್ದಾರೆ. ಇದಲ್ಲದೆ ರಾಜ್ಯ ಸರ್ಕಾರ ಮಹದಾಯಿ ವಿಚಾರದಲ್ಲಿ ಕೇಂದ್ರವನ್ನು ದೂರುತ್ತಿರುವುದು ಸರಿಯಲ್ಲ,  ಈ ವಿಷಯದ ಮೇರೆಗೆ ಕಾನೂನು ತಜ್ಞರನ್ನು ಭೇಟಿ ಮಾಡುವ ಅಗತ್ಯವಿರುತ್ತದೆ ಎಂದು ಜೋಷಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com